ಭಾನುವಾರ, ಜನವರಿ 19, 2020
28 °C

ಶ್ರೀಲಂಕಾಗೆ ಕುಣಿಗಲ್‌ ಕಲಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್‌: ಪಟ್ಟಣದ ರಂಗನಾಥ ಕ್ರಿಕೆಟ್‌ ಕ್ಲಬ್‌ ಕ್ರೀಡಾಪಟುಗಳು ಶ್ರೀಲಂಕಾ­ದಲ್ಲಿ ಸಿಸಿ ಸ್ಕೂಲ್‌ ಅಫ್‌ ಕ್ರಿಕೆಟ್‌ ನಡೆಸುತ್ತಿರುವ ಹತ್ತನೇ ಅಂತರ ರಾಷ್ಟ್ರೀಯ 14 ವರ್ಷದೊಳಗಿನ ನೆಲ್ಸನ್‌ ಮೆಂಡೀಸ್‌ ಛಾಲೆಂಜ್ ಟ್ರೋಫಿ ಕ್ರಿಕೆಟ್‌ ಟೂರ್ನಿಮೆಂಟ್‌ನಲ್ಲಿ ಭಾಗವಹಿಸಲು ಇದೆ 12ರಂದು ಶ್ರೀಲಂಕಾಕ್ಕೆ ತೆರಳಿದ್ದಾರೆ.ರಂಗನಾಥ ಕ್ರಿಕೆಟ್‌ ಕ್ಲಬ್‌ ಅಟ­ಗಾರರು ಮೂರನೇ ಬಾರಿ ನೆಲ್ಸನ್‌ ಮೆಂಡೀಸ್‌ ಛಾಲೆಂಜ್ ಟ್ರೋಫಿಯಲ್ಲಿ ಭಾಗವಹಿಸಲು ತೆರಳುತ್ತಿದ್ದು, ತಂಡ­ದಲ್ಲಿ ತೇಜಸ್‌, ಪ್ರಜ್ವಲ್‌, ತೇಜೇಶ್ವರ್‌, ಕಾರ್ತೀಕ್, ವಿಶ್ವಾಸ್‌, ಅರ್ಜುನ್‌, ಧನುಷ್‌, ಮೋಹಕ್‌ ಪಾಲ್ಗೊಳ್ಳಲಿದ್ದಾರೆ.ಕೋಚ್‌ ರಂಗನಾಥ್‌ ನೇತೃತ್ವದಲ್ಲಿ ಶ್ರೀಲಂಕಾಕ್ಕೆ ತೆರಳುತ್ತಿರುವ ತಂಡ ಇದೆ 14ರಂದು ಪಲೆವಟ್ಟ ಕ್ರಿಕೆಟ್‌ ಕ್ಲಬ್ ವಿರುದ್ಧ, 15ರಂದು ಎಂಸಿಎ ವೈಟ್‌ ತಂಡದ ವಿರುದ್ಧ, 16ರಂದು ಎಸ್‌ಎಸ್‌ಸಿ ಸ್ಕೂಲ್‌ ಅಫ್‌ ಕ್ರಿಕೆಟ್‌ ಕ್ಲಬ್ ವಿರುದ್ಧ, 17ರಂದು ಗಾಂಪಾ ಐಉತ್‌ ಕ್ರಿಕೆಟ್‌ ಕ್ಲಬ್ ವಿರುದ್ಧ, 19ರಂದು ಎಸ್‌ಸಿಎ ತಂಡದ ವಿರುದ್ಧ ಮೊದಲ ಸುತ್ತಿನ ಪಂದ್ಯಗಳನ್ನು ಅಡಲಿದೆ.ನಾಯಕ ತೇಜಸ್‌, ಹಿಂದೆ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸ­ಲಾ­ಗಿತ್ತು. ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)