ಬುಧವಾರ, ಜನವರಿ 22, 2020
28 °C

ಶ್ವೇತಭವನದ ಆವರಣದಲ್ಲಿ ಹೊಗೆ ಬಾಂಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅತ್ಯಂತ ಬಿಗಿ ಭದ್ರತೆ ಇರುವ ಅಮೆರಿಕದ ಅಧ್ಯಕ್ಷರ ನಿವಾಸದ ಆವರಣದಲ್ಲಿ ಹೊಗೆ ಬಾಂಬ್ ಕಂಡು ಬಂದ ಹಿನ್ನೆಲೆಯಲ್ಲಿ, ಶ್ವೇತಭವನವನ್ನು ಬುಧವಾರ ಸಂಪೂರ್ಣವಾಗಿ ಮುಚ್ಚಲಾಗಿತ್ತು.ಸುಮಾರು ಒಂದು ಸಾವಿರ ಮಂದಿಯಷ್ಟಿದ್ದ `ವಾಲ್‌ಸ್ಟ್ರೀಟ್ ಮುತ್ತಿಗೆ~ ಕಾರ್ಯಕರ್ತರು ಶ್ವೇತಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತು.ಈ ವೇಳೆ, ಅಧ್ಯಕ್ಷ ಬರಾಕ್ ಒಬಾಮ ಅವರು ಪತ್ನಿ ಮಿಶೆಲ್ ಅವರ 48ನೇ ಹುಟ್ಟುಹಬ್ಬವನ್ನು ಆಚರಿಸಲು ರೆಸ್ಟೋರೆಂಟ್‌ಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)