ಬುಧವಾರ, ಮೇ 12, 2021
18 °C

ಸಂತಸ, ಸಂಭ್ರಮ: ಸಾವಿನಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ (ಬೆಳಗಾವಿ): ಬೆಳಿಗ್ಗೆ ಸಂತಸ, ಸಂಭ್ರಮ. ಸಂಜೆ ನೀರವ ಮೌನ. ಇದು ಸವದತ್ತಿಯ ಶತಾಯುಷಿ ಅಡಿವೆಮ್ಮತಾಯಿ ಹಿರೇಮಠ ಅವರ ಮನೆಯಲ್ಲಿ ಮಂಗಳವಾರ ಕಂಡು ಬಂದ ದೃಶ್ಯ.ಬೆಳಿಗ್ಗೆ 110ನೇ ಜನ್ಮದಿನ ಆಚರಿಸಿಕೊಂಡಿದ್ದ ಅವರು ಸಂಜೆ 4 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದರಿಂದ ಜನ್ಮ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಂಧು-ಬಳಗ ಆಘಾತಕ್ಕೊಳಗಾದರು. ಅಡಿವೆಮ್ಮತಾಯಿ ಅವರಿಗೆ ಒಬ್ಬ ಪುತ್ರ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಭಾಗೀರಥಿಬಾಯಿ ಸೇರಿ ಐವರು ಪುತ್ರಿಯರು ಇದ್ದಾರೆ.ಅಪ್ಪಟ ಜಾನಪದ ಹಾಡುಗಾರ್ತಿಯಾಗಿದ್ದ ಅಡಿವೆಮ್ಮತಾಯಿ ಇಳಿ ವಯಸ್ಸಿನಲ್ಲೂ ಬಡ, ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.