ಬುಧವಾರ, ಜನವರಿ 22, 2020
21 °C

ಸಂರಕ್ಷಿತ ಸ್ಮಾರಕ ಬಳಿ ನಿರ್ಮಾಣ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಕಾಯಿದೆ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿರುವ ರಾಜಧಾನಿಯ ಜಂತರ್ ಮಂತರ್ ಸೇರಿದಂತೆ ಯಾವುದೇ ಸ್ಮಾರಕಗಳ ನೂರು ಮೀಟರ್ ಒಳಗೆ ನಿರ್ಮಾಣ ಕಾರ್ಯ ನಡೆಸುವಂತಿಲ್ಲ ಎಂದು ಸುಪ್ರೀಂ    ಕೋರ್ಟ್ ಆದೇಶ ಮಾಡಿದೆ.ಪುರಾತತ್ವ ಕಾಯಿದೆಯನ್ನು ಅನುಷ್ಠಾನಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಐತಿಹಾಸಿಕವಾದ ಜಂತರ್ ಮಂತರ್‌ನಂತಹ ಸ್ಮಾರಕಗಳು ಇತಿಹಾಸದ ಗರ್ಭ ಸೇರುತ್ತವೆ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ನ್ಯಾಯಪೀಠ ಆತಂಕ ವ್ಯಕ್ತಪಡಿಸಿತು.

 

ಪ್ರತಿಕ್ರಿಯಿಸಿ (+)