ಶನಿವಾರ, ಮೇ 21, 2022
25 °C

ಸಂಶೋಧನಾ ವಿಧಾನ ಕಾರ್ಯಾಗಾರ.ಸಾಮಾಜಿಕ ಸಂಶೋಧನೆ ಕ್ಲಿಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ವೈಜ್ಞಾನಿಕ ಸಂಶೋಧನೆಗಳಿಗಿಂತ ಮನುಷ್ಯರ ಮನೋಭಾವ ಅಳೆಯುವ ಸಾಮಾಜಿಕ ಸಂಶೋಧನೆ ತುಂಬಾ ಕ್ಲಿಷ್ಟಕರವಾದದ್ದು ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಎ. ಖಾಜಿ ಹೇಳಿದರು.ನಗರದ ಮಹಿಳಾ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿರ್ದೇಶನಾಲಯದ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿರುವ ಏಳು ದಿನಗಳ ಸಂಶೋಧನಾ ವಿಧಾನ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.‘ನಮ್ಮಲ್ಲಿರುವ ಅಮೂಲ್ಯವಾದ ಸಮಯವನ್ನು ಸದುಪಯೋಗಪಡಿಸಿಕೊಂಡು ಅಸಾಧ್ಯವಾದದ್ದನ್ನು ಸಂಶೋಧನೆ ಮೂಲಕ ಮಾಡಿ ತೋರಿಸಬೇಕು. ವಿವಿಯಲ್ಲಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಪ್ರತಿಯೊಂದು ವಿಷಯದಲ್ಲಿಯೂ ಆಳವಾದ ಅಧ್ಯಯನ ಮಾಡಿ ಉತ್ತಮ ಸಂಶೋಧಕರಾಗಬೇಕು’ ಎಂದು ಸಲಹೆ ಮಾಡಿದರು.ಸಹಾಯಕ ಪ್ರಾಧ್ಯಾಪಕಿಯರಾದ ಜ್ಯೋತಿ ಉಪಾಧ್ಯೆ, ಡಾ.ಲಕ್ಷ್ಮಿದೇವಿ ವೈ. ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ.ಜಿ. ಸೌಭಾಗ್ಯ ಸ್ವಾಗತಿಸಿದರು. ಪ್ರಾಚಾರ್ಯ ಡಾ.ವಿ.ವಿ. ಮಳಗಿ ಪರಿಚಯಿಸಿದರು. ಶಾಂತಾದೇವಿ ಟಿ. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ನಾಟೀಕರ್ ವಂದಿಸಿದರು.ಸಂಶೋಧನೆ ಅಗತ್ಯ
: ಮಹಿಳಾ ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ಘಟಕ, ಕಾಲೇಜು ಅಭಿವೃದ್ಧಿ ಮಂಡಳಿ ಮತ್ತು ಸಮಾಜ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ‘ಭಾರತದಲ್ಲಿ ಸಮಾಜ ವಿಜ್ಞಾನ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ’ ವಿಷಯದ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.ಉಪನ್ಯಾಸ ನೀಡಿದ ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಸಲಹೆಗಾರ ಡಾ.ಅರುಣ ಬಾಲಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸಂಶೋಧನೆ ಅತಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂಶೋಧನೆಯನ್ನು  ಅವಶ್ಯಕವಾಗಿ ಕೈಕೊಳ್ಳುವಂತಹ ಸಾಧನವಾಗಿದೆ ಎಂದರು.ಕುಲಸಚಿವ ಪ್ರೊ.ಎಸ್.ಎ. ಖಾಜಿ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕಿ ಡಾ.ವಿಜಯಾ ಕೋರಿಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಿ.ಎಂ. ಮದರಿ, ಸಹಪ್ರಾಧ್ಯಾಪಕ ಡಾ.ಎನ್. ಚಂದ್ರಪ್ಪ,  ಡಾ.ರಮೇಶ ಸೋನಕಾಂಬಳೆ ಇತರರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ.ಎಂ.ಬಿ. ದಿಲ್‌ಷಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಆರ್.ವಿ. ಗಂಗಶೆಟ್ಟಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.