ಸುಂದರವಾಗಿರುವ ಸಣ್ಣ ಕಾರುಗಳ ಪರಿಚಯದ ಕೊನೆಯ ಕಂತು ಇದು. ಈ ಬಾರಿ ಪರಿಚಯಿಸಲಾಗಿರುವ ನಾಲ್ಕೂ ಕಾರುಗಳು ನೋಡುವುದಕ್ಕೇನೋ ಸಣ್ಣವು. ಆದರೆ ಇವುಗಳು ಒದಗಿಸುವ ಐಷಾರಾಮಿ ಸವಲತ್ತುಗಳು ದೊಡ್ಡ ಕಾರುಗಳಿಗೇ ಸವಾಲೊಡ್ಡುವಂತಿದೆ.

ನೋಟದಿಂದಲೇ ಸೆಳೆವ ಫೋಕ್ಸ್ ವ್ಯಾಗನ್ ಪೊಲೊ

ಅತ್ಯಾಧುನಿಕ ತಂತ್ರಜ್ಞಾನ, ಶಕ್ತಿ ಹಾಗೂ ಆರಾಮದಾಯಿಕ ಪ್ರಯಾಣ ಇವು ಯುರೋಪಿನ ಕಾರುಗಳ ಮೂರು ಮಂತ್ರಗಳು. ಇವುಗಳನ್ನು ಚಾಚೂತಪ್ಪದೆ ಅಳವಡಿಸಿಕೊಂಡ ಜರ್ಮನಿಯ ಅತ್ಯಂತ ಯಶಸ್ವಿ ಕಾರು ತಯಾರಿಕಾ ಕಂಪೆನಿಗಳಲ್ಲಿ ಒಂದಾದ ಫೋಕ್ಸ್ವ್ಯಾಗನ್ ಭಾರತಕ್ಕೆ ಕಾಲಿಟ್ಟು ಹೆಸರು ಮಾಡಿದ್ದು ಪೊಲೊ ಎಂಬ ಉದ್ದನೆಯ ಸಣ್ಣ ಕಾರಿನೊಂದಿಗೆ.

ಮಾರುತಿ ಸುಜುಕಿ ಸ್ವಿಫ್ಟ್ಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದ ಗ್ರಾಹಕರಿಗೆ ಫೋಕ್ಸ್ ವ್ಯಾಗನ್ ಪೊಲೊ ತನ್ನ ನೋಟದಿಂದಲೇ ಸೆಳೆದು ಅವರ ಮನೆ ಮನ ಸೇರಿದ್ದು ಸುಳ್ಳಲ್ಲ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಶಕ್ತಿಶಾಲಿ ಎಂಜಿನ್, ಪರಿಪೂರ್ಣ ಏರೋಡೈನಾಮಿಕ್ ವಿನ್ಯಾಸ ಹಾಗೂ ವಿಲಾಸಿ ಒಳಾಂಗಣ ವಿನ್ಯಾಸ ಹಾಗೂ ಸೌಲಭ್ಯಗಳಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಪೊಲೊ ಕಾರುಗಳನ್ನು ಇಂದು ರಸ್ತೆಯ ಮೇಲೆ ಕಾಣಬಹುದಾಗಿದೆ. ಫಿಯೆಟ್ ಪುಂಟೊನಂತೆ ಉದ್ದನೆಯ ಚಾಸೀಸ್ ಹೊಂದಿರುವ ಪೊಲೊ ವಿನ್ಯಾಸ ಸೊಗಸಾಗಿದೆ.

ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್ಗಳಲ್ಲಿ ಲಭ್ಯವಿರುವ ಪೊಲೊನಲ್ಲಿ ಟ್ರಂಡ್ಲೈನ್, ಕಂಫರ್ಟ್ಲೈನ್ ಹಾಗೂ ಹೈಲೈನ್ ಎಂಬ ಮೂರು ಮಾದರಿಗಳಿವೆ. ಪವರ್ ಸ್ಟಿಯರಿಂಗ್ ಹಾಗೂ ಚಾಲನೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳಬಹುದಾದ ಸ್ಟಿಯರಿಂಗ್, ಮುಂಭಾಗದ ಎರಡು ಬಾಗಿಲುಗಳಿಗೆ ಪವರ್ ವಿಂಡೊ, ಸೆಂಟ್ರಲ್ ಲಾಕಿಂಗ್, ಬಾಡಿ ಕಲರ್ ಬಂಪರ್, ಟಾಕೊಮೀಟರ್, ಎಂಜಿನ್ ಇಮ್ಮಬಿಲೈಸರ್, ಬಿಸಿಲ ಝಳದಿಂದ ರಕ್ಷಿಸಲು ಟಿಂಟೆಡ್ ಗ್ಲಾಸ್ ಮುಂತಾದ ಸೌಲಭ್ಯಗಳಿವೆ.

ಡ್ಯಾಷ್ಬೋರ್ಡ್ಗೆ ಸದೃಢ ಬೇಜ್ ಬಣ್ಣದ ಪ್ಲಾಸ್ಟಿಕ್ ಬಳಸಲಾಗಿದೆ. ಕೆಳಭಾಗದಲ್ಲಿ ಕಂದು ಬಣ್ಣದ ಪ್ಲಾಸ್ಟಿಕ್ನಿಂದ ಮುಚ್ಚಲಾಗಿದೆ. ಬೇಜ್ ಬಣ್ಣವನ್ನು ಬಳಸಿರುವುದರಿಂದ ಕಾರಿನ ಒಳಭಾಗ ಹೆಚ್ಚು ಬೆಳಕಿನಿಂದಲೂ ಹಾಗೂ ಲವಲವಿಕೆಯಿಂದ ಕಂಗಳೊಸುತ್ತದೆ. ಹವಾನಿಯಂತ್ರಿತ ಗುಂಡಿಗಳು ಹಾಗೂ ಇನ್ನಿತರ ನಿಯಂತ್ರಣ ಸಾಧನಗಳನ್ನು ಫೋಕ್ಸ್ ವ್ಯಾಗನ್ನ ಐಷಾರಾಮಿ ಕಾರುಗಳಿಂದ ಎರವಲು ಪಡೆಯಲಾಗಿದೆ. ಇವುಗಳ ಬಳಕೆ ಎಷ್ಟು ಸುಲಭವಾಗಿವೆಯೋ ಅಷ್ಟೇ ಬಾಳಿಕೆಯೂ ಇದೆ.

ಪೆಟ್ರೋಲ್ ಎಂಜಿನ್ ಹೊಂದಿರುವ ಪೊಲೊ 1.2 ಲೀ. ಸಾಮರ್ಥ್ಯದ 1198 ಸಿಸಿ ಎಂಜಿನ್, 3 ಸಿಲೆಂಡರ್, 75 ಅಶ್ವ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ 110ಎನ್ಎಂ ಟಾರ್ಕ್ ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ. ಕಾಮನ್ರೈಲ್ ಟರ್ಬೊ ಡೀಸಲ್ ಎಂಜಿನ್ ಪೊಲೊ 1199 ಸಿಸಿ ಎಂಜಿನ್ ಹೊಂದಿದೆ. 75 ಬಿಎಚ್ಪಿ ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಕಾರು 180 ಎನ್ಎಂ ಟಾರ್ಕ್ ಉತ್ಪತ್ತಿ ಮಾಡುವುದರಿಂದ ಓಟದಲ್ಲಿ ಇದರ ಶಕ್ತಿಯ ಅನುಭವ ಪಡೆಯಬಹುದು. ಎರಡೂ ಎಂಜಿನ್ಗಳ ಕಾರುಗಳಿಗೆ ಒಂದೇ ಬಗೆಯ ಗೇರ್ ಬಾಕ್ಸ್ ಬಳಸಲಾಗುತ್ತಿದ್ದು, ಆದರೆ ಗೇರ್ಗಳ ನಡುವಿನ ಅನುಪಾತದಲ್ಲಿ ಎರಡೂ ಭಿನ್ನವಾಗಿವೆ. ಇದನ್ನು ಅರಿಯಲು ಎರಡೂ ಕಾರುಗಳನ್ನು ಓಡಿಸಲೇಬೇಕು.

ಭಾರತದ ರಸ್ತೆಗಳಿಗೆ ತಕ್ಕಂತೆ ಕಾರಿನ ತಯಾರಿಕೆಯಲ್ಲಿ ಕೊಂಚ ಮಾರ್ಪಾಡು ಮಾಡಲಾಗಿದೆ. ಎತ್ತರ (ಗ್ರೌಂಡ್ ಕ್ಲಿಯರೆನ್ಸ್ 168 ಮಿ.ಮೀ.) 50 ಮಿ.ಮೀ. ಏರಿಸಲಾಗಿದೆ. ಜತೆಗೆ ಸಸ್ಪೆನ್ಷ್ ಕೂಡಾ ಇಲ್ಲಿನ ಕಚ್ಚಾ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚು ಎತ್ತರ ಇರುವ ಪ್ರಯಾಣಿಕರಿಗೆ ಹಿಂಬದಿಯ ಆಸನದಲ್ಲಿ ಹಿಡಿಸುವುದು ಕಷ್ಟ ಎಂಬ ಮಾತಿದೆ.

ಆದರೆ ಭಾರತೀಯರ ಸರಾಸರಿ ಎತ್ತರವನ್ನು ಪರಿಗಣಿಸಿದರೆ ಇದು ಅಂಥ ನ್ಯೂನತೆ ಏನೂ ಅಲ್ಲ. ಪೊಲೊದ ಲೋಹದ ದೇಹಕ್ಕೆ ಆರು ವರ್ಷಗಳ ಕಾಲ ತುಕ್ಕು ಹಿಡಿಯದು ಎಂಬ ಭರವಸೆಯನ್ನು ಫೋಕ್ಸ್ವ್ಯಾಗನ್ ನೀಡಿರುವುದು ಉತ್ತಮ ಸಂಗತಿ. ಆದರೆ ಮಾರಾಟದ ನಂತರದ ಸೇವೆಗಳು ಹಿತಕರವಾಗಿಲ್ಲ ಎಂದು ಹಲವು ಮಂದಿ ಪೊಲೊ ಗ್ರಾಹಕರು ದೂರಿದ್ದಾರೆ.

ಪೆಟ್ರೋಲ್ ಪೊಲೊ ಕಾರಿನ ಬೆಲೆ 4.8ರಿಂದ 6.4 ಲಕ್ಷ ರೂಪಾಯಿ. ಪೊಲೊ ನಗರದಲ್ಲಿ ಪ್ರತಿ ಲೀಟರ್ಗೆ 12 ಕಿ.ಮೀ. ಹಾಗೂ ಹೆದ್ದಾರಿಯಲ್ಲಿ 16.5 ಕಿ.ಮೀ. ಇಂಧನ ಕ್ಷಮತೆ ನೀಡಲಿದೆ.

ಡೀಸಲ್ ಪೊಲೊ ಬೆಲೆ 5.9ರಿಂದ 7.5 ಲಕ್ಷ ರೂಪಾಯಿ ಬೆಲೆ ನಿಗಧಿಪಡಿಸಲಾಗಿದೆ. ಪ್ರತಿ ಲೀಟರ್ ಡೀಸಲ್ಗೆ ಫೋಕ್ಸ್ ವ್ಯಾಗನ್ ಪೊಲೊ ನಗರದಲ್ಲಿ 16 ಹಾಗೂ ಹೆದ್ದಾರಿಯಲ್ಲಿ 20 ಕಿ.ಮೀ. ಇಂಧನ ಕ್ಷಮತೆ ನೀಡಲಿದೆ.

ಸಣ್ಣದರಲ್ಲೇ ದೊಡ್ಡ ಸ್ಕೊಡಾ ಫ್ಯಾಬಿಯಾ

ಸ್ಕೊಡಾ ಫ್ಯಾಬಿಯಾ ಭಾರತದ ಮೊದಲ ಸೂಪರ್ ಹ್ಯಾಚ್ಬ್ಯಾಕ್ ಎಂದು ಅದರ ಕಂಪೆನಿ ಕರೆದುಕೊಳ್ಳುತ್ತದೆ. ಏಕೆಂದರೆ, ಭಾರೀ ಸ್ಥಳಾವಕಾಶ ಕಲ್ಪಿಸಿದ ಹಾಗೂ ಹೆಚ್ಚು ವಸ್ತುಗಳನ್ನು ಕೊಂಡೊಯ್ಯಬಹುದಾದಷ್ಟು ಸ್ಥಳಾವಕಾಶ ನೀಡುವ ಜತೆಗೆ ಆಕರ್ಷಕ ವಿನ್ಯಾಸ ಹೊಂದಿದ ಕಾರು ಇದಾಗಿದೆ. ಯಾವುದೇ ಐಷಾರಾಮಿ ಕಾರಿನಲ್ಲಿ ಇರಬಹುದಾದಷ್ಟು ಸ್ಥಳಾವಕಾಶವನ್ನು ಸ್ಕೊಡಾದ ಈ ಸಣ್ಣ ಕಾರು ಹೊಂದಿದೆ.

ಚೆಕ್ ಗಣರಾಜ್ಯದಲ್ಲಿ 1800ರಲ್ಲಿ ಕಾರ್ಯಾರಂಭ ಮಾಡಿದ ಸ್ಕೋಡಾ, ಈವರೆಗೂ ಕಾರು ತಯಾರಿಸುತ್ತಿರುವ ಕೆಲವೇ ಕೆಲವು ಕಂಪೆನಿಗಳಲ್ಲೊಂದು. 1900ರವರೆಗೂ ಹಾಗೂ ನಂತರದ ಕೆಲ ಕಾಲದವರೆಗೂ ಸ್ಕೋಡಾ ಕಾರು ಹೆಚ್ಚು ಜನಪ್ರಿಯವಾಗಿದ್ದವು. ಆದರೆ ಎರಡನೇ ವಿಶ್ವ ಯುದ್ಧದ ನಂತರ ಸ್ಕೊಡಾ ನಾಜೀಗಳ ಹಿಡಿತಕ್ಕೊಳಗಾಯಿತು. ನಂತರ ಜೆಕೊಸ್ಲೋಲೆಕಿಯಾದ ತೆಕ್ಕೆಗೆ ಬಿತ್ತು.

1980ರ ನಂತರ ಸ್ಕೊಡಾ ದಿಕ್ಕು ದೆಸೆ ಇಲ್ಲದಂತಾಗಿ ಕುಸಿದು ಬೀಳುವ ಸ್ಥಿತಿಗೆ ತಲುಪಿತು. ಆದರೆ 1991ರಲ್ಲಿ ಸ್ಕೊಡಾ ಕಂಪೆನಿಯ ಷೇರುಗಳನ್ನು ಫೋಕ್ಸ್ವ್ಯಾಗನ್ ಖರೀದಿಸಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಅಲ್ಲಿಂದ ಸ್ಕೊಡಾ ದಿಸೆಯೇ ಬದಲಾಯಿತು. ಸ್ಕೊಡಾ ಕಾರುಗಳಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಫೋಕ್ಸ್ವ್ಯಾಗನ್ ಸಾಕಷ್ಟು ಪರಿಶ್ರಮಪಟ್ಟಿದೆ. ಅದರ ಫಲವೇ ಇಂದು ಸ್ಕೊಡಾ ಇಡೀ ಜಗತ್ತಿನಲ್ಲಿ ಮತ್ತೆ ತನ್ನ ವೈಭವವನ್ನು ಮರಳಿ ಪಡಿದಿದೆ.

ಪೆಟ್ರೋಲ್ ಹಾಗೂ ಡೀಸಲ್ ಮಾದರಿಯಲ್ಲಿ ಲಭ್ಯವಿರುವ ಸ್ಕೊಡಾ, ಗಟ್ಟಿಮುಟ್ಟಾದ ಬಾಡಿ, ಸ್ಪೋರ್ಟಿ ಹಾಗೂ ಎಂಥದ್ದೇ ರಸ್ತೆಯಲ್ಲಾದರೂ ಸಾಗಬಲ್ಲ ಸಧೃಡ ನೋಟದಿಂದಲೇ ಹೆಚ್ಚು ಗಮನ ಸೆಳೆದಿದೆ. 2008ರಲ್ಲಿ ಸ್ಕೊಡಾ ತನ್ನ ಎರಡನೇ ತಲೆಮಾರಿನ ಫ್ಯಾಬಿಯಾ ಪರಿಚಯಿಸಿತು.

ಐದು ಬಾಗಿಲು (ಹಿಂದಿನ ಡಿಕ್ಕಿ ಬಾಗಿಲು ಸೇರಿ) ಮಾದರಿಯ ಫ್ಯಾಬಿಯಾ ಈಗಾಗಲೇ ಜಗತ್ತಿನಾದ್ಯಂತೆ 15 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ. ಗಟ್ಟಿಮುಟ್ಟಾದ ಚಾಸೀಸ್ ಜತೆಗೆ ಮೆಕ್ಫರ್ಸನ್ ಸಸ್ಪೆನ್ಷನ್, ಬಲವಾದ ಆರ್ಮ್ ಹಾಗೂ ಪ್ರತ್ಯೇಕವಲ್ಲದ ಹಿಂಬದಿಯ ಸಸ್ಪೆನ್ಷನ್ನಿಂದ ಸ್ಕೊಡಾದ ಕಿಮ್ಮತ್ತು ರಸ್ತೆ ಮೇಲೆ ಗೊತ್ತಾಗುತ್ತದೆ. ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಮುಂಭಾಗದದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ.

ಫ್ಯಾಬಿಯಾ ಈಗ 1.2 ಲೀ ಸಾಮರ್ಥ್ಯದ 75 ಅಶ್ವ ಶಕ್ತಿ ಉತ್ಪಾದಿಸಬಲ್ಲ ಪೆಟ್ರೋಲ್ ಎಂಜಿನ್, 1.2 ಲೀ ಸಾಮರ್ಥ್ಯದ 75 ಅಶ್ವ ಶಕ್ತಿ ಉತ್ಪಾದಿಸಬಲ್ಲ ಟಿಡಿಐ ಡೀಸಲ್ ಎಂಜಿನ್ ಹಾಗೂ 1.6 ಲೀ. ಸಾಮರ್ಥ್ಯದ 105 ಅಶ್ವ ಶಕ್ತಿ ಉತ್ಪಾದಿಸಬಲ್ಲ ಶಕ್ತಿಶಾಲಿ ಪೆಟ್ರೋಲ್ ಎಂಜಿನ್ಗಳಲ್ಲಿ ಲಭ್ಯ. ಕ್ಲಾಸಿಕ್, ಆಂಬಿಯಂಟ್ ಹಾಗೂ ಎಲಿಗೆನ್ಸ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿರುವ ಫ್ಯಾಬಿಯಾ ಐದು ಗೇರ್ಗಳನ್ನು ಹೊಂದಿದೆ. ಇತರ ಕಾರುಗಳಂತೆ ಸ್ಕೊಡಾ ಫ್ಯಾಬಿಯಾದಲ್ಲೂ ಎಬಿಎಸ್ ಇದೆ. ಆದರೆ ಇದರಲ್ಲಿ ಮತ್ತೊಂದು ವಿಶೇಷವೆಂದರೆ ಎಂಜಿನ್ ಬ್ರೇಕ್ ಸಿಸ್ಟಂ (ಇಬಿಎಸ್) ಹೊಂದಿರುವುದರಿಂದ ಯಾವುದೇ ಅಂಜಿಕೆ ಇಲ್ಲದೆ ತಕ್ಷಣ ಬ್ರೇಕ್ ಹಾಕಬಹುದಾಗಿದೆ.

ಇಂಧನ ಕ್ಷಮತೆಯತ್ತ ಗಮನ ಹರಿಸಿದರೆ, ಪೆಟ್ರೋಲ್ ಎಂಜಿನ್ ಹೊಂದಿರುವ ಫ್ಯಾಬಿಯಾ ಪ್ರತಿ ಲೀಟರ್ಗೆ 16.4 ಕಿ.ಮೀ. ಇಂಧನ ಕ್ಷಮತೆ ನೀಡುತ್ತದೆ. 1.6 ಲೀ. ಸಾಮರ್ಥ್ಯದ 4 ಸಿಲೆಂಡರ್ ಹೊಂದಿರುವ ಪ್ರೆಟೋಲ್ ಫ್ಯಾಬಿಯಾ ಪ್ರತಿ ಲೀಟರ್ಗೆ 14.8-18.6 ಕಿ.ಮೀ. ಇಂಧನ ಕ್ಷಮತೆ ಹಾಗೂ ಡೀಸಲ್ ಎಂಜಿನ್ ಫ್ಯಾಬಿಯಾ ಪ್ರತಿ ಲೀಟರ್ಗೆ 20.9 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ.

ಇತರ ಕಾರುಗಳೊಂದಿಗೆ ಹೋಲಿಸಿದಲ್ಲಿ, ಉದಾಹರಣೆಗೆ ಮಾರುತಿ ಸುಜುಕಿ ಸ್ವಿಫ್ಟ್ ಜತೆಗೆ ಫ್ಯಾಬಿಯಾವನ್ನು ಹೋಲಿಸಿದಲ್ಲಿ ಡೀಸಲ್ ಫ್ಯಾಬಿಯಾಕ್ಕಿಂಥ ಪೆಟ್ರೋಲ್ ಫ್ಯಾಬಿಯಾ ಹೆಚ್ಚು ಇಂಧನ ಕ್ಷಮತೆ ಹೊಂದಿದೆ. ಸೇವಾ ಶುಲ್ಕ ಹಾಗೂ ಬಿಡಿ ಭಾಗಗಳ ಬೆಲೆ ಇತರ ಕಾರುಗಳಿಗೆ ಹೋಲಿಸಿದಲ್ಲಿ ತುಸು ದುಬಾರಿ ಎಂಬ ಮಾತಿದೆ. ಆದರೆ ಫ್ಯಾಬಿಯಾ ಮೊದಲ ಸರ್ವೀಸ್ ಹತ್ತು ಸಾವಿರ ಕಿ.ಮೀ.ಗೆ ಇರುವುದರಿಂದ ಇತರ ಕಾರುಗಳ ಒಟ್ಟು ಸೇವಾ ಶುಲ್ಕದ ಆಸುಪಾಸಿನಲ್ಲಿದೆ.

ಸೇವಾ ಕೇಂದ್ರಕ್ಕೆ ಹೆಚ್ಚು ಬಾರಿ ಹೋಗಬೇಕಾಗಿಲ್ಲ ಎನ್ನುವುದು ಉತ್ತಮ ಸಂಗತಿ. ಆದರೆ ಎಂಜಿನ್ ಶಬ್ದ ಅಧಿಕ, ದುಬಾರಿ ಎನ್ನುವುದು ಇದರ ನ್ಯೂನತೆಗಳು. 1.2ಲೀ. ಪೆಟ್ರೋಲ್ ಫ್ಯಾಬಿಯಾ 4.6ರಿಂದ 6 ಲಕ್ಷ ರೂಪಾಯಿ. 1.6 ಲೀ. ಫ್ಯಾಬಿಯಾ ಬೆಲೆ 6.3 ಲಕ್ಷ ರೂಪಾಯಿ. 1.2 ಲೀ. ಡೀಸಲ್ ಫ್ಯಾಬಿಯಾ 5.7ರಿಂದ 7.1 ಲಕ್ಷ ರೂಪಾಯಿ.

ಐಷಾರಾಮಿ ಜಾಝ್

ಜಪಾನ್ ಕಾರು ತಯಾರಿಕಾ ಕಂಪೆನಿ ಹೊಂಡಾ ವಿಲಾಸಿ ಸಣ್ಣ ಕಾರು ಜಾಝ್ ಅನ್ನು ಪರಿಚಯಿಸಿತು. ಹೊಂಡಾ ಕಂಪೆನಿಯಿಂದ ಭಾರತಕ್ಕೆ ಕಾಲಿಟ್ಟ ಮೊದಲ ಸಣ್ಣ ಕಾರು ಇದು. ಕಾರು ಸಣ್ಣದಾದರೂ ವಿಲಾಸಿ ಕಾರಿನಲ್ಲಿ ಇರಬೇಕಾದ ಎಲ್ಲಾ ರೀತಿಯ ಐಷಾರಾಮಿ ಸವಲತ್ತುಗಳನ್ನು ನೀಡಲು ಹೊಂಡಾ ಪ್ರಯತ್ನಿಸಿದೆ. ಹೊಂಡಾ ಸಿಟಿಯನ್ನೇ ಮಾದರಿಯಾಗಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಜಾಝ್ ತುಸು ದುಬಾರಿ ಕಾರು.

ಹೊಂಡಾ ಜಾಝ್ 1.2ಲೀ ಸಾಮರ್ಥ್ಯದ 1198 ಸಿಸಿ ಉತ್ಪಾದಿಸುವ, ನಾಲ್ಕು ಸಿಲೆಂಡರ್ಗಳನ್ನು ಹೊಂದಿರುವ ಎಂಜಿನ್ನಿಂದ ಚಲಿಸುತ್ತದೆ. 90 ಅಶ್ವ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಜಾಝ್ 4800 ಆರ್ಪಿಎಂನಲ್ಲಿ 110 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜತೆಗೆ 0-100 ಕಿ.ಮೀ. ವೇಗ ತಲುಪಲು ಇದು ತೆಗೆದುಕೊಳ್ಳುವ ಸಮಯ 11.2 ಸೆಕೆಂಡುಗಳು ಮಾತ್ರ. ಪ್ರತಿ ಗಂಟೆಗೆ 165 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸಬಹುದಾಗಿದೆ.

ಆಕರ್ಷಕ ವಿನ್ಯಾಸ ಹಾಗೂ ಸ್ಫೋರ್ಟಿ ಹೊರನೋಟ ಹೊಂದಿರುವ ಜಾಝ್ನ ಬಾನೆಟ್ ಹಾಗೂ ಅದರ ಮೇಲಿನ ಉಬ್ಬು ಗೆರೆಗಳು ಇಂದಿನ ಯುವ ಜನತೆಯನ್ನು ಹೆಚ್ಚು ಸೆಳೆಯುತ್ತಿದೆ. ಒಂದೊಂದು ಕೋನದಿಂದ ಹೊಂಡಾದ ಒಂದೊಂದು ಕಾರಿನಂತೆ ಕಾಣುವ ಜಾಝ್ ಮುಂಭಾಗ ಎಸ್ಯುವಿ ಮಾದರಿಯಾಗಿರುವ ಹೊಂಡಾ ಸಿಆರ್-ವಿಯನ್ನೂ ಹೋಲುತ್ತದೆ. ಹೊಂಡಾ ಜಾಝ್, ಜಾಝ್ ಸೆಲೆಕ್ಟ್ ಹಾಗೂ ಜಾಝ್ ಎಕ್ಸ್ ಎಂಬ ಮೂರು ಮಾದರಿಗಳಲ್ಲಿ ಕಾರು ಲಭ್ಯ.

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಜಾಝ್, ಸುರಕ್ಷತೆಯ ದೃಷ್ಟಿಯಿಂದ ಮುಂಭಾಗದಲ್ಲಿ ಎರಡು ಏರ್ಬ್ಯಾಗ್ಗಳು, ಎಬಿಎಸ್ ಜತೆ ಇಬಿಎಸ್ ಕೂಡಾ ಇದೆ. ಇದರೊಂದಿಗೆ ಲೆದರ್ ಸೀಟ್, ಕೀ ಇಲ್ಲದೆ ಪ್ರವೇಶಿಸಬಹುದಾದ ಸೌಲಭ್ಯವಿದೆ.
ಹೊಂಡಾ ಜಾಝ್ನ ಅತ್ಯಂತ ಆಕರ್ಷಕ ಸಂಗತಿ ಎಂದರೆ ಇದರಲ್ಲಿರುವ ಮ್ಯಾಜಿಕ್ ಸೀಟ್.

ಹಿಂಭದಿಯ ಆಸನವನ್ನು ಸಂಪೂರ್ಣವಾಗಿ ಮಲಗುವ ಮಂಚವನ್ನಾಗಿ ಮಾಡಿಕೊಳ್ಳಬಹುದು. ಇಲ್ಲವೇ ಹಿಂಭಾಗದಲ್ಲಿ ಹೆಚ್ಚಿನ ವಸ್ತುಗಳನ್ನು ಇಡಲು ಸ್ಥಳಾವಕಾಶವನ್ನು ಕಲ್ಪಿಸಬಹುದು. ಎಲ್ಲಾ ಸಣ್ಣ ಕಾರುಗಳಿಗೆ ಹೋಲಿಸಿದಲ್ಲಿ ಹಿಂಬದಿಯ ಬೂಟ್ ಸ್ಪೇಸ್ 386 ಲೀಟರ್ಗಳ ವಿಶಾಲವಾದ ಸ್ಥಳಾವಕಾಶ ನೀಡಲಾಗಿದೆ (ಮಾರುತು ಸುಜುಕಿ ಸ್ವಿಫ್ಟ್ 204 ಲೀ., ಐ-20 296 ಲೀ.).

ಆದರೆ ಹೊಂಡಾ ಜಾಝ್ ಪಿಕ್ಅಪ್ ಇತರ ಸಣ್ಣ ಕಾರುಗಳಿಗಿಂತ ಬಹಳ ಕಡಿಮೆ. ಪೆಟ್ರೋಲ್ ಕಾರುಗಳನ್ನು ಮಾತ್ರ ತಯಾರಿಸುವ ಹೊಂಡಾ ಸಧ್ಯದ ಬೆಲೆ ಏರಿಕೆ ಕಾಲದಲ್ಲಿ ಭಾರತೀಯರಿಂದ ಕೊಂಚ ದೂರವೇ ಉಳಿದಿದೆ. ಪ್ರತಿ ಲೀಟರ್ ಪೆಟ್ರೋಲ್ಗೆ ಹೆದ್ದಾರಿಯಲ್ಲಿ 16.7 ಕಿ.ಮೀ ನೀಡುವ ಜಾಝ್, ನಗರ ಪ್ರದೇಶದಲ್ಲಿ ಕೇವಲ 13-14 ಕಿ.ಮೀ. ಇಂಧನ ಕ್ಷಮತೆ ನೀಡುತ್ತದೆ. ಹೊಂಡಾ ಜಾಝ್ನ ಬೆಲೆ 5.7ರಿಂದ 6.5 ಲಕ್ಷ ರೂಪಾಯಿ.

ಆರಾಮ ಚಾಲನೆಗೆ ಷೆವರ್ಲೆ ಅವಿಯೊ ಯುವಿಎ

ಅಮೆರಿಕದ ಷೆವರ್ಲೆ ಅವಿಯೊ ಯುವಿಎ ಉದ್ದನೆಯ ಕಾರುಗಳಲ್ಲಿ ಸಾಕಷ್ಟು ಸ್ಥಳಾವಕಾಶವಿರುವ ಕಾರು. 1.2 ಲೀ. ಸಾಮರ್ಥ್ಯದ 1150 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿರುವ ಅವಿಯೊ ಸೀಕ್ವೆನ್ಷಿಯಲ್ ಎಲೆಕ್ಟ್ರಾನಿಕ್ ಫ್ಯುಯಲ್ ಇಂಜೆಕ್ಷನ್ ವ್ಯವಸ್ಥೆ ಹೊಂದಿದೆ. ನಾಲ್ಕು ಸಿಲೆಂಡರ್ಗಳನ್ನು ಹೊಂದಿರುವ ಅವಿಯೊ 76 ಅಶ್ವ ಶಕ್ತಿ ಉತ್ಪಾದಿಸುವುದರ ಜತೆಗೆ 110 ಎನ್ಎಂ ಟಾರ್ಕ್ ಉತ್ಪತ್ತಿ ಮಾಡುತ್ತದೆ.

ಅಮೆರಿಕದ ಕಾರುಗಳು ಆರಾಮ ಚಾಲನೆಗೆ ಹೆಚ್ಚು ಒತ್ತು ನೀಡುವ ತಂತ್ರಜ್ಞಾನವುಳ್ಳವು. ಫೋರ್ಡ್ ಕಾರುಗಳಂತೆ ಷೆವರ್ಲೆ ಅವಿಯೊ ಕೂಡಾ ಆರಾಮ ಚಾಲನೆಗಾಗಿ ಹೆಚ್ಚು ಸ್ಥಳಾವಕಾಶ ನೀಡಿದೆ. ಆಕರ್ಷಕ ವಿನ್ಯಾಸ ಹಾಗೂ ಅದಕ್ಕೆ ತಕ್ಕಂತೆ ಇದರ ನಿರ್ಮಾಣದಲ್ಲಿ ಬಳಸಿರುವ ಉಕ್ಕು ಕೂಡಾ ಸಧೃಡವಾಗಿದೆ.

ಸ್ಪೋರ್ಟಿ ಹಾಗೂ ಬಲಶಾಲಿ ಹೊರಮೈ ಹೊಂದಿರುವುದರಿಂದ ಯುವ ಜನಾಂಗಕ್ಕೆ ಹೆಚ್ಚು ಇಷ್ಟವಾಗಬಹುದು. ಬೇಜ್ ಬಣ್ಣದ ಒಳಾಂಗಣ ತಾಜಾತನದಿಂದ ಕೂಡಿದ್ದು ಹೆಚ್ಚು ಸ್ಥಳಾವಕಾಶದ ಅನುಭವ ನೀಡುತ್ತದೆ.

ಅವಿಯೊ ಚಾಲನೆ ಮಾಡುವವರ ಹಿತ ಕಾಪಾಡುವ ದೃಷ್ಟಿಯಿಂದ ಪವರ್ ಸ್ಟಿಯರಿಂಗ್ ಜತೆಗೆ ಚಾಲಕ ತನ್ನ ಚಾಲನಾ ಶೈಲಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದಾದ ಸ್ಟಿಯರಿಂಗ್, ಪವರ್ ವಿಂಡೊ ಸೌಲಭ್ಯವಿದೆ. ಎಬಿಎಸ್, ಬಾಗಿಲುಗಳು ಸರಿಯಾಗಿ ಹಾಕದಿರುವ ಸೂಚನೆ, ಏರ್ ಬ್ಯಾಗ್ ಇತ್ಯಾದಿ ಸುರಕ್ಷತಾ ಸೌಲಭ್ಯವನ್ನೂ ನೀಡಲಾಗಿದೆ.
ಷೆವರ್ಲೆ ಅವಿಯೊ 12.93 ಅಡಿ ಉದ್ದನೆಯ ಕಾರು.

ಉದ್ದಕ್ಕೆ ತಕ್ಕಂತೆ ತೂಕವನ್ನೂ ಹೆಚ್ಚಿಸಲಾಗಿದೆ. 1075 ಕೆ.ಜಿ. ಇರುವ ಅವಿಯೊ ಕಾರನ್ನು ಎಳೆಯಲು ಇರುವುದು 1150 ಸಿಸಿ ಎಂಜಿನ್. ಹೀಗಾಗಿ ಕಾರು ಓಡಿಸುವವರಿಗೆ ಇನ್ನಷ್ಟು ಪಿಕ್ಅಪ್ನ ಕೊರತೆ ಕಾಡುತ್ತದೆ. ಇದು ಕಾರಿನ ನ್ಯೂನತೆಯಲ್ಲೊಂದು. ಜತೆಗೆ ಹವಾನಿಯಂತ್ರಿತ ವ್ಯವಸ್ಥೆ, ಇಂಧನ ಕ್ಷಮತೆ (ಪ್ರತಿ ಲೀಟರ್ ಪೆಟ್ರೋಲ್ಗೆ ನಗರದಲ್ಲಿ 12 ಹಾಗೂ ಹೆದ್ದಾರಿಯಲ್ಲಿ 14.5 ಕಿ.ಮೀ.) ಹಾಗೂ ಪಿಕ್ಅಪ್ ಮತ್ತಷ್ಟು ಉತ್ತಮಪಡಿಸಿದರೆ ಒಳ್ಳೆಯದು ಎನ್ನುವುದು ಅವಿಯೊ ಬಳಕೆದಾರರ ಬೇಡಿಕೆ.

ಜತೆಗೆ ಹೆಚ್ಚು ಪ್ರಚಾರವಿಲ್ಲದ ಹಾಗೂ ಅಧಿಕ ನಿರ್ವಹಣಾ ವೆಚ್ಚವಾದ್ದರಿಂದ ಹೆಚ್ಚು ಮಂದಿ ಅವಿಯೊದತ್ತ ಆಕರ್ಷಿತರಾಗಿಲ್ಲ. ಷೆವರ್ಲೆ ಅವಿಯೊ ಬೆಲೆ 4.3ರಿಂದ 5.10 ಲಕ್ಷ ರೂಪಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.