ಯಾದಗಿರಿ: ನಾಡಿನಲ್ಲಿ ಸರ್ಕಾರದಿಂದ ಮಾಡಲು ಸಂಕೇತಸಾಧ್ಯವಾಗದ ಕೆಲಸಗಳನ್ನು ನಾನಾ ಮಠದ ಮಠಾಧೀಶರು ಜನರ ಕಲ್ಯಾಣಕ್ಕಾಗಿ ಮಾಡುತ್ತಿರುವುದು ಪ್ರಗತಿಯ . ಈ ಕಾರ್ಯ ನಿರಂತರ ನಡೆಯಬೇಕು. ಅಂದಾಗ ಮಾತ್ರ ಎಲ್ಲ ರಂಗಗಳಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಜೇವರ್ಗಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೊಳ ಹೇಳಿದರು.

ನೆರೆಯ ಚಿತ್ತಾಪುರ ತಾಲ್ಲೂಕಿನ ಸೂಗೂರ ಎನ್. ಗ್ರಾಮದಲ್ಲಿ ಭೋಜಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಹಿಂದುಳಿದ ಭಾಗದಲ್ಲಿ ಮಠಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ. ಮಠಾಧೀಶರ ಕಾರ್ಯಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿತ್ತಾಪುರ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ಶ್ರೀಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿ, ಆರ್ಶೀವಚನ ನೀಡಿದ ಗುರಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ವಿಶ್ವಕ್ಕೆ ಅಧ್ಯಾತ್ಮದ ಚಿಂತನೆ, ಮೌಲ್ಯಗಳನ್ನು ಸಾರಿದ ಕೀರ್ತಿ ಭಾರತ ದೇಶಕ್ಕೆ ಇದೆ. ನಾಡಿನಲ್ಲಿರುವ ಅನೇಕ ಮಠ ಮಾನ್ಯಗಳು ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳು ಜನರ ಬದುಕಿನಲ್ಲಿ ಸಾಮರಸ್ಯ ಮೂಡಿಸುವುದರ ಜೊತೆಗೆ ಸಮಾನತೆ, ಭಾವೈಕ್ಯ ತರುತ್ತವೆ. ಆ ಮೂಲಕ ಬದಲಾವಣೆಗೆ ಸ್ಫೂರ್ತಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನ ಕುಪ್ಪಿ ಮಾತನಾಡಿದರು. ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಹಿರಗಪ್ಪ ತಾತ, ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು.

ಉದ್ಯಮಿ, ಕಾಂಗ್ರೆಸ್ ಮುಖಂಡ ಲಿಂಗಾರಡ್ಡಿಗೌಡ ಬಾಸರಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಾರ್ವತಮ್ಮ ಕಾಡಂನೋರ, ಶರಣೀಕುಮಾರ ದೋಖಾ, ಸಾಬಣ್ಣ ಅಡ್ಡೆಶಿ, ಬಿಜೆಪಿ ಮುಖಂಡ ಸಿದ್ಧಣಗೌಡ ಕಾಡಮನೋರ, ಸೇಡಂ ತಹಸಿಲ್ದಾರ ನರಸಿಂಗರಾವ್, ಸಿಪಿಐ ಚಂದ್ರಕಾಂತ ಪೂಜಾರಿ, ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸಿದ್ರಾಮರಡ್ಡಿ ಕೂರಾಳ, ಎಪಿಎಂಸಿ ಸದಸ್ಯ ಮಲ್ಲಿನಾಥ ಪಾಟೀಲ ಸನ್ನತಿ, ಕಡಬೂರ ಗ್ರಾಂ ಪಂಚಾಯಿತಿ ಅಧ್ಯಕ್ಷ ಶರಣಗೌಡ ಬೆನಕನಳ್ಳಿ ವೇದಿಕೆಯಲ್ಲಿದ್ದರು.

ಮಹಿಪಾಲರಡ್ಡಿ ಕರಣಿಗಿ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ಎಸ್.ಜುಗೇರಿ ನಿರೂಪಿಸಿದರು.
ಈರಣ್ಣ ಬಲಕಲ್ ವಂದಿಸಿದರು. ಇದಕ್ಕೂ ಮೊದಲು ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.