ಶುಕ್ರವಾರ, ಆಗಸ್ಟ್ 6, 2021
25 °C

ಸಮ್ಮೇಳನ: ಮಠಗಳ ಬಣ್ಣ ಬಯಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಜಿಲ್ಲೆ ಸುತ್ತೂರು ವೀರಶೈವರ ಸಮಾವೇಶದಿಂದ ನಮ್ಮಂತಹ ನೋಡುಗರಿಗೆ ಅನ್ನಿಸುವುದೇನೆಂದರೆ, ವೀರಶೈವ ಮಠಾಧಿಪತಿಗಳು ತಮ್ಮ ವೇಷವನ್ನು ಈ ಸಮ್ಮೇಳನದ ಮೂಲಕ ಬಯಲಾಗಿಸಿದ್ದು. ಅಂದರೆ ಅರಿವಿಗೂ ಅರಿವೆಗೂ ಯಾವ ಸಂಬಂಧವಿಲ್ಲವೆಂದು ಕಾವಿಧಾರಿಗಳು ಸಮ್ಮೇಳನದಲ್ಲಿ ಒಬ್ಬೊಬ್ಬರಾಗಿ ಸಾರ್ವತ್ರಿಕವಾಗಿ ಸಾಬೀತುಪಡಿಸಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪನವರು ಮಠಗಳಿಗೆ ಹಣ ಕೊಟ್ಟು ಮಠಗಳನ್ನು ತಮ್ಮ ಪರ ಏಜೆಂಟ್‌ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಅಂತ ಹಿಂದೆಯೇ ಅನ್ನಿಸಿತ್ತು. ಅದು ಈ ಸುತ್ತೂರು ಸಮ್ಮೇಳನದಲ್ಲಿ ಸಾಬೀತಾಗಿದೆ.ವೀರಶೈವ ಧರ್ಮವು ಕರ್ನಾಟಕದಲ್ಲಿ ಯಾವುದೇ ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿದಂತಿಲ್ಲ. ಈ ಧರ್ಮದಿಂದ ತಾವು (ವೀರಶೈವರು) ಕರ್ನಾಟಕದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡು. ಸಂವಿಧಾನದ ಎಲ್ಲಾ ತರಹದ ರಾಜಕೀಯ ಆರ್ಥಿಕ ಸಾಮಾಜಿಕ ಮೀಸಲಾತಿಯನ್ನು ಪಡೆಯುವುದು ಇವರ ಉದ್ದೇಶ ಹೊರತು ಬೇರೇನೂ ಇಲ್ಲ.ಇಂತಹ ಮಠಾಧಿಪತಿಗಳ ಕೈಗೆ ಕ್ರಾಂತಿಕಾರಿ ಬಸವಣ್ಣನ ವಿಚಾರಗಳು ಸಿಕ್ಕಿಕೊಂಡು ಮತ್ತೆ ಮತ್ತೆ ಅನಾಥವಾಗಿ ಸಾಯುತ್ತಿವೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.