ನವದೆಹಲಿ (ಐಎಎನ್ಎಸ್): ‘ಐದು ವರ್ಷಗಳ ಹಿಂದೆ ಮ್ಯಾರಥಾನ್ ಸ್ಪರ್ಧೆ ಒಂದರ ಸಂದರ್ಭದಲ್ಲಿ ನಾವಿಬ್ಬರು ಭೇಟಿಯಾಗಿದ್ದೆವು. ಅದು ನಮ್ಮ ಮೊದಲ ಭೇಟಿ. ನಂತರ ಜಿಮ್ನಲ್ಲಿ ಮುಖಾಮುಖಿಯಾದೆವು. ನಂತರದ ದಿನಗಳಲ್ಲಿ ನಮ್ಮ ನಡುವಿನ ಸ್ನೇಹದ ಮೊಗ್ಗು ಪ್ರೀತಿಯಾಗಿ ಅರಳಿತು...’

–ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮೌನದ ಮೊರೆ ಹೋಗಿದ್ದ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಮೊದಲ ಸಲ ಮನಬಿಚ್ಚಿ ಹೇಳಿರುವ ಮಾತುಗಳಿವು.

ಹೋದ ತಿಂಗಳು 15ರಂದು ಚೆನ್ನೈನಲ್ಲಿ ಕಾರ್ತಿಕ್ ಮತ್ತು ದೀಪಿಕಾ ಅವರ ನಿಶ್ಚಿತಾರ್ಥ ನಡೆದಿತ್ತು. ಈ ಸಮಾರಂಭದ ಬಗ್ಗೆ ಸ್ವ್ಕಾಷ್ ತಾರೆ ಮೌನ ತೆಳೆದಿದ್ದರು. ಅದರೆ, ಅವರೀಗ ಮುಕ್ತವಾಗಿ ಮಾತನಾಡಿದ್ದಾರೆ.

ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಕಾರ್ತಿಕ್ ಅವರನ್ನು ಭೇಟಿಯಾ ಗುವ ಮೊದಲು ಕ್ರಿಕೆಟ್ ಆಟಗಾರ ರನ್ನು ತಿರಸ್ಕಾರದಿಂದ ನೋಡುತ್ತಿದ್ದೆ ಎಂದೂ ದೀಪಿಕಾ ನುಡಿದಿದ್ದಾರೆ.

‘ಕಾರ್ತಿಕ್ ಎಲ್ಲರೊಂದಿಗೆ ಹೊಂದಿ ಕೊಂಡು ಹೋಗುವ ಸ್ವಭಾವದವರು. ಆದ್ದರಿಂದ ಅವರೆಂದರೆ ತುಂಬಾ ಇಷ್ಟ. ಮೊದಮೊದಲು ಕ್ರಿಕೆಟಿಗರು ಎಂದರೆ ತಿರಸ್ಕಾರದಿಂದ ನೋಡುತ್ತಿದ್ದೆ. ಆದರೀಗ ಕ್ರಿಕೆಟಿಗನೊಂದಿಗೆ ನಿಶ್ಚಿ ತಾರ್ಥ ಮಾಡಿಕೊಂಡಿದ್ದೇನೆ. ಆದ್ದರಿಂದ ಸ್ನೇಹಿತರು ನನ್ನನ್ನು ಕಿಚಾಯಿಸುತ್ತಾರೆ’ ಎಂದು ದೀಪಿಕಾ ಚೆದುರಿದ ನೆನಪುಗಳನ್ನು ಒಂದುಗೂಡಿಸಿದರು.

ಕಾರ್ತಿಕ್ ಇದೇ ವರ್ಷದ ಜೂನ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನಾಡಲು ಭಾರತ ತಂಡದ ಜೊತೆ ಇಂಗ್ಲೆಂಡ್ಗೆ ಹೋದಾಗ ದೀಪಿಕಾ ಮುಂದೆ ತಮ್ಮ ಪ್ರೀತಿಯ ವಿಷಯ ಹೇಳಿಕೊಂಡಿದ್ದರು.

‘ನಾವಿಬ್ಬರು ಕ್ರೀಡಾಪಟುಗಳು ಆಗಿರುವುದರಿಂದ ನಮ್ಮ ನಡುವೆ ಚೆನ್ನಾಗಿ ಹೊಂದಾಣಿಕೆಯಿದೆ. ನಮ್ಮ ಕುಟುಂಬಗಳ ನಡುವೆಯೂ ಉತ್ತಮ ಬಾಂಧವ್ಯವಿದೆ. ದಿನೇಶ್ ಈಗ ದೇಶಿಯ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ತರಬೇತಿ ಪಡೆಯಲು ನಾನು ಒಂದು ವಾರ ಇಂಗ್ಲೆಂಡ್ನ ಲೀಡ್ಸ್ಗೆ ತೆರಳುತ್ತಿದ್ದೇನೆ’ ಎಂದು ವಿಶ್ವ ರ್ಯಾಂಕ್ನಲ್ಲಿ 12ನೇ ಸ್ಥಾನ ಹೊಂದಿರುವ ದೀಪಿಕಾ ಹೇಳಿದರು.

2015ರಲ್ಲಿ ವಿವಾಹ: ಮುಂದಿನ ವರ್ಷ ಸಾಕಷ್ಟು ಅಂತರರಾಷ್ಟ್ರೀಯ ಟೂರ್ನಿಗಳು ಇವೆ. ಆದ ಕಾರಣ 2015ರಲ್ಲಿ ವಿವಾಹ ಮಾಡಿಕೊಳ್ಳುವುದಾಗಿ ದೀಪಿಕಾ ತಿಳಿಸಿದ್ದಾರೆ.

‘ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳು 2014ರಲ್ಲಿ ನಡೆಯಲಿರುವ ಕಾರಣ ಅಲ್ಲಿ ಗಮನ ಹರಿಸಬೇಕಿದೆ. ವೃತ್ತಿ ಮತ್ತು ಗುರಿಗಳಿಗೆ ನಮ್ಮ ಪ್ರೇಮ ಅಡ್ಡಿಯಾಗಬಾರದು ಎನ್ನುವ ಹೆಬ್ಬಯಕೆಯನ್ನು ಇಬ್ಬರೂ ಹೊಂದಿದ್ದೇವೆ. ಜೊತೆಗೆ ಮುಂದಿನ ವರ್ಷದ ಅಂತ್ಯದ ವೇಳೆಗೆ ರ್ಯಾಂಕ್ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯಬೇಕೆನ್ನುವ ಗುರಿಯಿದೆ’ ಎಂದು ಚೆನ್ನೈನ ದೀಪಿಕಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.