ಮಂಗಳವಾರ, ಏಪ್ರಿಲ್ 13, 2021
30 °C

ಸಹಕಾರಿ ಕ್ಷೇತ್ರಕ್ಕೆ ತೆರಿಗೆ: ಬಿಜೆಪಿ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸಹಕಾರಿ ಕ್ಷೇತ್ರಕ್ಕೆ ನೇರ ತೆರಿಗೆ ವಿಧೇಯಕವನ್ನು ಜಾರಿಗೊಳಿಸುವುದನ್ನು ವಿರೋಧಿಸಿ ಬಿಜೆಪಿಯ ಹಾಲು ಪ್ರಕೋಷ್ಠದ ಪ್ರಮುಖರು ಕೋಲಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಿದರು.ನೇರ ತೆರಿಗೆಯ ಹೊರೆ ಹೊರಿಸಿದರೆ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಯ ಸಾಧನವಾಗಿರುವ ಸಹಕಾರಿ ಕ್ಷೇತ್ರಕ್ಕೆ ಕೊಡಲಿಪೆಟ್ಟು ನೀಡಿದಂತಾಗುತ್ತದೆ. ವಿಧೇಯಕವನ್ನು ವಿರೋಧಿಸಿ ಮಾ.7ರಂದು ದೆಹಲಿಯಲ್ಲಿ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಮುಂದೆ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.ದೇಶದ ಅರ್ಥ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಸಹಕಾರಿ ಚಳವಳಿ 107 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಜನಸಾಮಾನ್ಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಮಹತ್ವದ ಕಾಣಿಕೆಯನ್ನು ಸಲ್ಲಿಸುತ್ತಿದೆ. ರಾಜ್ಯದಲ್ಲಿ 1600 ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ಕೃಷಿಕರು, ಕೃಷಿಕೂಲಿಕಾರರು, ದೀನರು, ದಲಿತರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕ್ಷೇತ್ರದ ಮೇಲೆ ನೇರ ತೆರಿಗೆ ಹೊರಿಸಬಾರದು ಎಂದು ಆಗ್ರಹಿಸಿದರು.ರಾಜ್ಯ ಸಹಕಾರ ಕ್ಷೇತ್ರದಲ್ಲಿ 1.98 ಲಕ್ಷ ಸದಸ್ಯರಿದ್ದಾರೆ. 3,171 ಕೋಟಿ ರೂಪಾಯಿ ಬಂಡವಾಳವಿದೆ. 11,548 ಕೋಟಿ ರೂಪಾಯಿ ಠೇವಣಿ ಇದೆ. 19.318 ಸಹಕಾರ ಸಂಘಗಳು ಲಾಭವದಲ್ಲಿವೆ. ಇಂಥ ಸಂದರ್ಭದಲ್ಲಿ ನೇರ ತೆರಿಗೆ ಹೊರಿಸಿದರೆ ಕ್ಷೇತ್ರಕ್ಕೆ ಹಿನ್ನಡೆಯಾಗುವ ಆತಂಕವಿದೆ ಎಂದು ಹೇಳಿದರು.ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಹಕಾರ ಚಳವಳಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕ್ಷೇತ್ರಕ್ಕೆ ಸ್ವಾಯತ್ತತೆ ನೀಡಲಾಗಿದೆ. ನಿಷ್ಕ್ರಿಯಗೊಂಡಿದ್ದ ಸಹಕಾರಿ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲಾಗಿದೆ.ವಿಶೇಷವಾಗಿ ಕೋಲಾರ, ಬೆಂಗಳೂರು, ಧಾರವಾಡ,ಬೀದರ್, ಗುಲ್ಬರ್ಗಾದ ಡಿಸಿಸಿ ಬ್ಯಾಂಕ್‌ಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ಕೃಷಿ ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಪುನಶ್ಚೇತನಕ್ಕೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಲು ಉತ್ಪಾದಕರಿ ಪ್ರೋತ್ಸಾಹ ಧನವನ್ನುನೀಡಲಾಗುತ್ತಿದೆ. ಹೀಗೆ ಪ್ರಗತಿಯ ಹಾದಿಯಲ್ಲಿರುವ ಸಹಕಾರ ಕ್ಷೇತ್ರದ ಮೇಲೆ ನೇರ ತೆರಿಗೆ ಹೊರಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಮಾರ್ಕೆಟ್ ಕೆಂಪಣ್ಣ, ತಿಮ್ಮರಾಯಪ್ಪ, ಜಯಶಂಕರ್, ಶಶಿಕುಮಾರ್, ವೆಂಕಟರೆಡ್ಡಿ, ಎನ್.ಪ್ರಭಾಕರ್, ಎಸ್.ಪಿ.ನರಸಿಂಹಪ್ಪ, ಸುಬ್ಬರಾಯಪ್ಪ, ಪ್ರಸಾದ್‌ರೆಡ್ಡಿ, ಪ್ರಸಾದ್,ಅಮರೇಶ್, ರಾಮಚಂದ್ರ, ಎಂ.ನಾಗರಾಜ್ ಸೇರಿದಂತೆ ಪ್ರಕೋಷ್ಠದ ಜಿಲ್ಲಾ ಮತ್ತು ಎಲ್ಲ ತಾಲ್ಲೂಕು ಘಟಕಗಳ ಪ್ರಮುಖರು ಹಾಗೂ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.