ಸೋಮವಾರ, ಜೂನ್ 14, 2021
26 °C

ಸಾಂಸ್ಕೃತಿಕ ಕಾರ್ಯಕ್ರಮಗಳು: ಮಾರ್ಚ್ 4, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 4, ಭಾನುವಾರ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಂದೇಶ ತಂಡ:
ಕನ್ನಡ ಭವನ, ಜೆ.ಸಿ.ರಸ್ತೆ, ಪರ್ವತವಾಣಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ `ನಾಟಕೋತ್ಸವ~. `ಮಂಗಮಾಯ~ ಮತ್ತು `ಗೀತಾರಾಕ್ಷಸ~ ನಾಟಕ ಪ್ರದರ್ಶನ. ರಚನೆ: ಪರ್ವತವಾಣಿ, ನಿರ್ದೇಶನ: ಎಸ್.ಕೆ.ಮಾಧವರಾವ್, ಬೆಳಕು: ಶಶಿಧರ್ ಕುಂದಾಪುರ್. ಉದ್ಘಾಟನೆ- ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ.ಎಸ್.ಟಿ.ರಾಮಚಂದ್ರ, ಗೌರವಾರ್ಪಣೆ- ಸಾಹಿತಿ ಎಲ್.ಎಸ್.ಶೇಷಗಿರಿರಾವ್, ಕಲಾವಿದೆ ಯಮುನಾ ಮೂರ್ತಿ. ಸಂಜೆ 6.ಶ್ರದ್ಧಾ ಸಂಗೀತ ಕಲಾ ಯುವಜನ ಮಹಿಳಾ ಕಲ್ಯಾಣ ಸಮಿತಿ: ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, 8ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭ. ಉದ್ಘಾಟನೆ- ಮಾಜಿ ಸಚಿವ ಆರ್.ಬಿ.ತಿಮ್ಮಪ್ಪ, ಅಧ್ಯಕ್ಷತೆ- ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಅತಿಥಿಗಳು- ಶಾಸಕ ಕೃಷ್ಣ ಭೈರೇಗೌಡ, ಬಿಬಿಎಂಪಿ ಸದಸ್ಯರಾದ ಇಂದಿರಾ, ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ.`ಸಂಗೀತ ಶ್ರೀ~ ಪ್ರಶಸ್ತಿ ಪುರಸ್ಕೃತರು- ಈಶ್ವರ್ ಮೋರಗಿರಿ, ಜಯಕುಮಾರ್ ಹಿರೇಮಠ, ರವೀಂದ್ರ ಕಾಟೋಟೆ, ಜೇಸುದಾಸ್, ವೀಣಾ ರವಿಶಂಕರ್, ಶಂಕರ್ ವೈ ಕರ್ಲಿ.

`ಶ್ರದ್ಧಾಶ್ರೀ~ ಪ್ರಶಸ್ತಿ ಪುರಸ್ಕೃತರು- ಸಿದ್ಧು ಕಾರಿಗಾರ್, ಎಸ್.ಸೀಮಾ, ಪತ್ರಕರ್ತ ವಿ.ಪಿ.ಮೇಘರಾಜ್, ಭಾಗ್ಯಲಕ್ಷ್ಮಿ ಬರಾಡೆ, ಆಂಜನಪ್ಪ. ಹಿಂದೂಸ್ತಾನಿ ಸಂಗೀತ ಗಾಯನ- ರೋಹಿಣಿ ಗಂಗಾಧರಯ್ಯ, ಭರತನಾಟ್ಯ- ದೀಪಾಶ್ರೀ, ಗಾಯತ್ರಿ ಕಾಮತ್. ಬೆಳಿಗ್ಗೆ 10.

ನೃತ್ಯಾಂಜಲಿ ಟ್ರಸ್ಟ್: ಕಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅಂಜಲಿ ಸಂತೋಷ್ ಮತ್ತು ಎಲ್.ನರೇಂದ್ರ ಕುವರ್ ಅವರಿಂದ `ಶಕ್ತಿ~ ನೃತ್ಯರೂಪಕ. ಉದ್ಘಾಟನೆ-ಚನ್ನಮ್ಮ ದೇವೇಗೌಡ. ಸಂಜೆ 6.ಕೋಟಿಗೊಬ್ಬ ವಿಷ್ಣುವರ್ಧನ್ ಅಭಿಮಾನಿಗಳ ಸಂಘ: ಲಗ್ಗೆರೆ, ನಟ ವಿಷ್ಣುವರ್ಧನ್ ಕಂಚಿನ ಪ್ರತಿಮೆ ಅನಾವರಣ ಮತ್ತು ಲಗ್ಗೆರೆ ಮುಖ್ಯರಸ್ತೆಗೆ `ಡಾ. ವಿಷ್ಣುವರ್ಧನ್ ರಸ್ತೆ~ ನಾಮಕರಣ ಸಮಾರಂಭ. ಉದ್ಘಾಟನೆ-ಭಾರತಿ ವಿಷ್ಣುವರ್ಧನ್, ಪುತ್ಥಳಿಗೆ ಮಾಲಾರ್ಪಣೆ- ನಟ ಅನಿರುದ್ಧ್, ಅಧ್ಯಕ್ಷತೆ- ವಿಧಾನಸಭಾ ಸದಸ್ಯ ಎಂ. ಶ್ರೀನಿವಾಸ್. ಬೆಳಿಗ್ಗೆ 11.

ಸುಚಿತ್ರ ಫಿಲ್ಮ್ ಮತ್ತು ನಾಟಕ ಕೇಂದ್ರ ಅವರಿಂದ ಸಂಜೆ 6ಕ್ಕೆ `ವೃಕ್ಷ ಕತೆ~, ಸಂಜೆ 6.15ಕ್ಕೆ ರುಕ್ಮಿಣಿ ವಿಜಯ್ ಕುಮಾರ್, ರಾಧಾ ಕಲ್ಪ ಅವರಿಂದ ಭರತನಾಟ್ಯ, 7.45ಕ್ಕೆ ಬೊಂಬೆಯಾಟ.ಧಾರ್ಮಿಕ ಕಾರ್ಯಕ್ರಮಗಳು:

ಶ್ರೀ ಸದ್ಗುರು ಚೈತನ್ಯ ಮಂದಿರ: ಭಾರತ್ ಹೌಸಿಂಗ್ ಬಡಾವಣೆ, ತುರಳ್ಳಿ ಪೂರ್ಣಪ್ರಜ್ಞ ಬಡಾವಣೆ ಪಕ್ಕ, ಪಟಾಲಮ್ಮ ದೇವಸ್ಥಾನದ ಸಮೀಪ, ಉತ್ತರ ಹಳ್ಳಿ, ಕೆಂಗೇರಿ ರಸ್ತೆ. ಪ್ರತಿಷ್ಠಾ ಕುಂಭಾಭಿಷೇಕ. ಅತಿಥಿಗಳು- ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ, ಡಾ.ವಿ.ಆರ್.ಗೌರಿಶಂಕರ್. ಬೆಳಿಗ್ಗೆ 10.30.ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ, ಮಾರುತಿ ಪ್ರಸಾದ್ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.

 

ಉದಯಭಾನು ಕಲಾಸಂಘ: ಉದಯಭಾನು ಸಾಂಸ್ಕೃತಿಕ ಭವನ, ಕೆಂಪೇಗೌಡನಗರ. ದರ್ಶನರಂಗ ತಂಡದಿಂದ ಪಿ.ಲಂಕೇಶ್ ಅವರ `ಗುಣಮುಖ~ ನಾಟಕ ಪ್ರದರ್ಶನ. ನಿರ್ದೇಶನ: ಕೆ.ಚೌಡಯ್ಯ, ಸಹಕಾರ: ಮಾಲತೇಶ ಬಡಿಗೇರ. ಉದ್ಘಾಟನೆ- ಪುಸ್ತಕಮನೆ ಹರಿಪ್ರಿಯ, ಸಂಜೆ 6.30.`ಗುಣಮುಖ~ ನಾಟಕದ ರೂವಾರಿ ನಾದಿರ್ ಶಾ. ಅವರು ಬದುಕಿದ್ದು 59 ವರ್ಷ. ದಾಳಿ, ದೊಂಬಿ, ಆಕ್ರಮಣದ ಮೂಲಕ ಟರ್ಕಿ, ರಷ್ಯಾ ದೇಶಗಳಲ್ಲಿ ಪ್ರಾಣಭಯ ಹುಟ್ಟಿಸಿ ಅವನು ಪರ್ಷಿಯಾ- ಇರಾನ್ ಸಾಮ್ರಾಜ್ಯ ಕಟ್ಟಿದ. ಅನಾಮಿಕ ಬುಡಕಟ್ಟೊಂದರಲ್ಲಿ ಜನಿಸಿದ ನಾದಿರ್ ಸೈನಿಕನಾಗಿ ಮುಂದೆ ಬಂದು ಸ್ವಲ್ಪ ಕಾಲ ದೊರೆಯೊಬ್ಬನ ರಕ್ಷಕನಾಗಿದ್ದ. ನಂತರ ತಾನೇ ಚಕ್ರವರ್ತಿಯಾದ. 1747ರ ಹೊತ್ತಿಗೆ ನಾದಿರ್ ವಿರುದ್ಧ ನೈಸರ್ಗಿಕ, ಮನುಷ್ಯ ಶಕ್ತಿಗಳು ಒಗ್ಗಟ್ಟಾಗಿ ನಿಂತಿದ್ದವು. ಬಳಿಕ ತನ್ನ ಸೈನಿಕರಿಂದಲೇ ಅವನು ಹತನಾದ.ನಾಟಕದ ವಸ್ತು ಹಿಂದಿನದಾದರೂ ಪ್ರಸ್ತುತತೆಯ ಚೌಕಟ್ಟಿದೆ. ಈಗಿನ ರಾಜಕೀಯ, ಭ್ರಷ್ಟಾಚಾರ, ಸಂಪತ್ತನ್ನು ಕೊಳ್ಳೆಹೊಡೆಯುವ ಪ್ರಕ್ರಿಯೆ ಇಂಥ ನಾಟಕದ ಘಟನಾವಳಿಗಳಿಗೆ ಸಾಂದರ್ಭಿಕತೆಯೂ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.