ಗುರುವಾರ , ಜೂನ್ 24, 2021
29 °C

ಸಾಮರಸ್ಯ ಮೆರೆದ ಸೂಫಿ ಸಂತರು: ಕಟ್ಟಾಡಿ

ಮುತ್ತುರಾಜ ಹೆಬ್ಬಾಳ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿವಾಳ ಮಾಚಿದೇವ ವೇದಿಕೆ ಆಲಮೇಲ): ಧರ್ಮವನ್ನು ನಿಷ್ಠುರ ವಾಗಿ ಸಾಚಾತನದಿಂದ ಅನುಸರಿಸಿ ಮೂಲ­ಭೂತವಾದಿಗಳ ಉಗ್ರವಾದ ವನ್ನು ನಯವಾಗಿ ತಿರಸ್ಕರಿಸುವ ಮೂಲಕ ನಿಜವಾದ ಧಾರ್ಮಿಕ ಸಾಮ ರಸ್ಯವನ್ನು ಜನಮಾನ­ಸ­ದಲ್ಲಿ ಮೂಡಿಸಿ ಜನಸಾಮಾನ್ಯರ ನಡುವೆ ಭಾವೈಕ್ಯ ಬೆಳೆಸುವಲ್ಲಿ ಸೂಫಿ ಸಂತರ ಕೊಡುಗೆ ಅಪಾರ ಎಂದು ಸಾಹಿತಿ ಫಕೀರ್‌ ಮಹಮ್ಮದ್‌ ಕಟ್ಟಾಡಿ ಹೇಳಿದರು.ಅವರು ಆಲಮೇಲದಲ್ಲಿ ನಡೆಯುತ್ತಿ­ರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂಕಿರಣ ಗೋಷ್ಠಿಯಲ್ಲಿ ಜಿಲ್ಲೆಯ ಸೂಫಿ ಸಾಹಿತ್ಯ ಕುರಿತು ಮಾತನಾಡಿ­ದರು. ಸೂಫಿ ಸಂತರ ವಿಚಾರಗಳು 12ನೇ ಶತಮಾನದ ಬಸವಾದಿ ಶಿವಶರ ಣರ ಪ್ರತಿಪಾದಿಸಿದ ಏಕದೇವೋಪಾ ಸನೆ, ಜಾತಿಯತೆಯ ನರ್ಮೂಲನೆ, ಕಾಯಕ, ದಾಸೋಹ, ತತ್ವಗಳಿಗೆ ಅನು ಗುಣವಾ­ಗಿದ್ದು, ಪ್ರೇಮಭಾವದಿಂದಲೇ ದೇವರನ್ನು ಒಲಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಟ್ಟರು ಎಂದರು.ಸೂಫಿಗಳು ತಳಸಮುದಾಯದ ಜನರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ವಿಸ್ತರಿಸುವ ಮೂಲಕ ಕೋಮು ಸಾಮ­ರಸ್ಯಕ್ಕೆ ಒತ್ತು ನೀಡಿದರು ಎಂದರು.ವಿಜಾಪುರ ಜಿಲ್ಲೆ ಸೂಫಿ ಸಂತರ ನೆಲೆಯಾಗಿದ್ದು, ಇಲ್ಲಿ ರುಕ್ಮಿದ್ದೀನ್ ಜುನೈದಿ, ಚಂದಾಹುಸೇನಿ, ಶತಾರಿ, ಖಾದ್ರಿಯಾ, ಚಿಸ್ತಿ ಸಹಿತ ಎಲ್ಲಾ ಸೂಫಿಗಳ ಅನುಯಾಯಿಗಳಿದ್ದಾರೆ. ಧಾರ್ಮಿಕ ಕೋಮುಸೌಹಾರ್ದಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಸೂಫಿಗಳ ಪ್ರಕಾರ ‘ಜಿಹಾದ್’ ಎಂದರೇ ಅಂತರಾತ್ಮದಲ್ಲಿರುವ ಕಲ್ಮಶವನ್ನು, ಕೆಟ್ಟ ಗುಣಗಳನ್ನು ಹೋಗಲಾಡಿಸುವುದು ಎಂದರ್ಥ. ಆದರೆ ಇಂದಿನ ಕೆಲವು ಮೂಲವಾದಿಗಳು ತಮ್ಮ ನೇರಕ್ಕೆ ಜಿಹಾದ್ ಅನ್ನು ಅರ್ಥೈಸುತ್ತಿರುವುದು ವಿಷಾದದ ಸಂಗತಿ ಎಂದರು.ಜಿಲ್ಲೆಯ ರಂಗಭೂಮಿ ವೈಭವದ ಕುರಿತು ಮಾತನಾಡಿದ ರಂಗಕರ್ಮಿ ಸಿದ್ರಾಮಪ್ಪ ಉಪ್ಪಿನ, ಕನ್ನಡ ರಂಗಭೂಮಿಗೆ ವಿಜಾಪುರ ಜಿಲ್ಲೆಯ ಕೊಡುಗೆ ಅಪಾರ, ಜಲ್ಲೆಯಲ್ಲಿ ಕರ್ನಾಟಕ ಷೇಕ್ಸಪೀಯರ್ ಎಂದೇ ಖ್ಯಾತರಾದ ಹಂದಿಗನೂರ ಸಿದ್ರಾಮಪ್ಪ, ಅಮೀರಬಾಯಿ ಕರ್ನಾಟಕಿ, ಶಂಕರ ಉತ್ಲಾಸಕರ, ಎಲ್.ಬಿ. ಶೇಖ ಮಾಸ್ತರ, ಎಂ.ಎಸ್. ಖೇಡಗಿ, ಅಶೋಕ ಬಾದರದಿನ್ನಿ, ರಾಜು ತಾಳಿಕೋಟಿ, ಕಾ.ಹು. ಬಿಜಾಪುರ ಸಹಿತ ಅನೇಕರು ನಾಟಕ ಸಂಘ ಕಟ್ಟಿ ರಂಗಭೂಮಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯಲು ಪ್ರಯತ್ನಿಸಿದ್ದಾರೆ ಎಂದು ವಿವರಿಸಿದರು.ಪ್ರೊ ಎ.ಎಸ್. ಗಾಣಿಗೇರ ಮಾತನಾಡಿ, ವಿಜಾಪುರ ಜಿಲ್ಲೆ ಬರಗಾಲದಿಂದ ಬಳಲಿದರೂ ಸಾಹಿತ್ಯ ಸಂಸ್ಕೃತಿಗೆ ಬರವಿಲ್ಲ, ಹಲಸಂಗಿ ಗೆಳೆಯರ ಬಳಗದಿಂದ ಪ್ರವರ್ಧಮಾನಕ್ಕೆ ಬಂದ ಜಿಲ್ಲೆಯ ಜನಪದ ಸಾಹಿತ್ಯ, ನಂತರದ ಕಾಲದಲ್ಲಿ ಹುಲಸಾಗಿ ಬೆಳೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಠ ಕೊಡುಗೆ ನೀಡಿದೆ. ದುಡಿಯುವ ವರ್ಗದ ಜನರು ತಮ್ಮ ನೋವು ನಲಿವುಗಳನ್ನು ವ್ಯಕ್ತಪಡಿಸಲು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಿಸಿದ ಪ್ರಕಾರವೇ ಜನಪದ ಸಾಹಿತ್ಯ ಎಂದು ಹೇಳಿದರು.ದಾಸ ಸಾಹಿತ್ಯ ಕುರಿತು ಡಾ. ಶ್ರೀಕೃಷ್ಣ ಕಾಖಂಡಕಿ ಮಾತನಾಡಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.­­­ಹರಿಲಾಲ ಪವಾರ ಮಾತ ನಾಡಿದ ರು. ಎಸ್.ಡಿ. ಕೃಷ್ಣ­ಮೂರ್ತಿ ಸ್ವಾಗತಿಸಿ ದರು. ದಾಕ್ಷಾಯಿಣಿ ಹುಡೇದ ನಿರೂಪಿ ಸಿದರು. ಕೆ.ಪಿ.ಮುತ್ತಗಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.