ಬೆಂಗಳೂರು: `ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ಕೊನೆಯವರೆಗೂ ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತ ತತ್ವರಾಗಿ ಬದ್ಧರಾಗಿ ರಾಜಕಾರಣ ಮಾಡಿದವರು. ಅವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಹೂವಿನಹಡಗಲಿಯ ಎಂ.ಪಿ.ಪ್ರಕಾಶ್ ಪ್ರತಿಷ್ಠಾನದ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ `ಎಂ.ಪಿ.ಪ್ರಕಾಶ್-73' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಅವರಲ್ಲಿ ಬಹಳ ಪ್ರತಿಭೆಗಳು ಇದ್ದವು. ಅವರನ್ನು ಸಾಂಸ್ಕೃತಿಕ ರಾಜಕಾರಣಿ ಎಂದು ಕರೆಯಲಾಗುತ್ತಿತ್ತು. ಅವರು ಪ್ರಾಮಾಣಿಕ, ನಿಗರ್ವಿ ಹಾಗೂ ಬಹುಮುಖ ವ್ಯಕ್ತಿತ್ವದ ರಾಜಕಾರಣಿ. ನಾವಿಬ್ಬರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ನಾನು ಪಕ್ಷದ ಸದಸ್ಯನಾಗಿದ್ದಾಗ ಅವರು ಪಕ್ಷದ ನಾಯಕರಾಗಿದ್ದರು. ಅವರು ದೊಡ್ಡವರ ಜೊತೆಗೆ ದೊಡ್ಡವರ ಹಾಗೆ, ಚಿಕ್ಕವರ ಜೊತೆ ಚಿಕ್ಕವರ ಹಾಗೆ ಇರುತ್ತಿದ್ದರು' ಎಂದು ಅವರು ಸ್ಮರಿಸಿದರು.

`ಸರ್ಕಾರಕ್ಕೆ ತೋರುತ್ತಿದ್ದ ನಿಷ್ಠೆ ಹಾಗೂ ಅಪಾರ ಜ್ಞಾನದಿಂದಾಗಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಎಚ್.ಡಿ.ದೇವೇಗೌಡ ಅವರಿಗೆ ಆತ್ಮೀಯರಾಗಿದ್ದರು. ಎಲ್ಲ ಇಲಾಖೆಗೆ ಸಂಬಂಧಿಸಿದ ವಿಷಯಗಳಿಗೆ ಸದನದಲ್ಲಿ ಉತ್ತರ ಕೊಡುವ ಜಾಣ್ಮೆ ಅವರಿಗೆ ಇತ್ತು. ಕೆಲವು ಬಾರಿ ತಾವು ಹೇಳುವುದು ತಪ್ಪು ಎಂದು ಗೊತ್ತಿದ್ದರೂ ಅದನ್ನೇ ಸಮರ್ಥವಾಗಿ ವಾದ ಮಾಡುವ ಕಲೆಯನ್ನು ಬೆಳೆಸಿಕೊಂಡಿದ್ದರು' ಎಂದು ಅವರು ಅಭಿಪ್ರಾಯಪಟ್ಟರು.
`ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ, ಸಾಮರ್ಥ್ಯ ಹಾಗೂ ಗುಣಗಳು ಅವರಿಗೆ ಇತ್ತು. ಅವರಿಗಿಂತ ಕಿರಿಯರು ಮುಖ್ಯಮಂತ್ರಿಯಾದಾಗಲೂ ಅಸೂಯೆ ಪಡಲಿಲ್ಲ. ಅವರನ್ನು ಗೌರವದಿಂದ ಕಂಡರು. ಅವರು ಸೋತು ಗೆದ್ದವರು. ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಆರಂಭಕ್ಕೆ ಹಾಗೂ ಹಂಪಿ ಉತ್ಸವಕ್ಕೆ ಚಾಲನೆ ದೊರಕಲು ಕಾರಣಕರ್ತರು' ಎಂದು ಅವರು ತಿಳಿಸಿದರು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, `ರಂಗಾಯಣ, ಹಂಪಿ ಉತ್ಸವ ಹಾಗೂ ಹಂಪಿ ವಿಶ್ವವಿದ್ಯಾಲಯ ಅವರ ನೆನಪನ್ನು ಶಾಶ್ವತವಾಗಿ ಉಳಿಸಿವೆ. ಕಲಾವಿದರಿಗೆ ಹಾಗೂ ಕಲಾಪ್ರಕಾರಕ್ಕೆ ತೊಂದರೆ ಆದಾಗ ಕೂಡಲೇ ಸಹಾಯಕ್ಕೆ ಧಾವಿಸುತ್ತಿದ್ದರು. ಅವರು ಶ್ರೇಷ್ಠ ರಾಜಕಾರಣಿ' ಎಂದರು.
ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ `ಸಾಂಸ್ಕೃತಿಕ ರಾಯಭಾರಿ (ಲೇಖಕರು-ಎಂ.ಎಂ. ಶಿವಪ್ರಕಾಶ್)' ಕೃತಿಯನ್ನು ಬಿಡುಗಡೆ ಮಾಡಿದರು. ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಎಂಟು ಮಂದಿ ಬಡ ಕ್ಯಾನ್ಸರ್ ರೋಗಿಗಳಿಗೆ ತಲಾ 25,000 ರೂಪಾಯಿ ಧನಸಹಾಯ ವಿತರಿಸಲಾಯಿತು. ಎಂ.ಪಿ.ಪ್ರಕಾಶ್ ಭಾವಚಿತ್ರ ಅನಾವರಣ ಮಾಡಲಾಯಿತು. ಕಥಕ್ ನೃತ್ಯ ಗುರು ಡಾ. ಮಾಯಾ ರಾವ್, ಎಂ. ವೆಂಕಟೇಶಕುಮಾರ್ ಹಾಗೂ ಹಿರಿಯ ನಟಿ ಬಿ.ಜಯಶ್ರೀ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಪಿ.ರವೀಂದ್ರ, ಶಾಸಕರಾದ ಮಧು ಬಂಗಾರಪ್ಪ, ಬಸವರಾಜ್ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.