ಮೈಸೂರು: ಆಧುನಿಕ ಕನ್ನಡ ಸಾಹಿತ್ಯದ ಮೇಲೆ ರಾಷ್ಟ್ರಕವಿ ಕುವೆಂಪು ಅವರ ಪ್ರಭಾವ ಹೆಚ್ಚಾಗಿದೆ ಎಂದು ಜಾನಪದ ವಿದ್ವಾಂಸ ಡಾ.ರಾಮೇಗೌಡ ಅಭಿಪ್ರಾ ಯಪಟ್ಟರು.

ನಗರದಲ್ಲಿ ಈಚೆಗೆ ನಡೆದ ಜೆ.ಕೆ.ಟೈರ್ಸ್ ವಿಕ್ರಾಂತ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿ ಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು ಕನ್ನಡದ ಸ್ವಾಭಿಮಾನಿ ಸಂಸ್ಕೃತಿಯ ಪ್ರತೀಕವಾ ಗಿದ್ದರು. ಹೀಗಾಗಿ ಅವರು ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದರು. ರೈತರ ಕುರಿತು ಅಪಾರ ಕಾಳಜಿ ಹೊಂದಿದ್ದರು ಎಂಬುದನ್ನು ಅವರ ಸಾಹಿತ್ಯವೇ ನಿರೂಪಿಸಿದೆ. ಪಂಪನಿಂದ ಕುವೆಂಪು ವರೆಗೆ ಎಲ್ಲರೂ ನೇಗಿಲಯೋಗಿಯ ಕುರಿತು ಸಾಹಿತ್ಯ ರಚಿಸಿದ್ದಾರೆ ಎಂದರು.

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರು ಮೌಢ್ಯಗಳನ್ನು ವಿರೋಧಿಸುತ್ತಿದ್ದರು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಉತ್ತೇಜನ ನೀಡುತ್ತಿದ್ದರು ಎಂದು ಹೇಳಿದರು.

ಮಾಜಿ ಶಾಸಕ ಪಿ.ಎಂ. ಚಿಕ್ಕಬೋರಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕುವೆಂಪು ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳುವಂತೆ ಕರೆ ನೀಡಿದರು.

ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಕೆ.ಶಿವಪ್ಪ, ಜಿ.ರಾಜಗೋಪಾಲಯ್ಯ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ, ಪಾಲಿಕೆ ಸದಸ್ಯ ಚಲುವೇಗೌಡ, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ನಿಂಗೇಗೌಡ, ಶ್ರೀನಿವಾಸ, ಸಂಘದ ನಾಯಕ ಎಸ್. ರಾಮು, ಮುರಳೀಧರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.