ಶನಿವಾರ, ಜನವರಿ 18, 2020
27 °C

ಸಿಇಟಿ ನೀತಿ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ‘ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2006ರ ಸಿಇಟಿ ಕಾಯ್ದೆಗಳಿಂದ ಬಡ ಹಾಗೂ ಪ್ರತಿ ಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತದೆ.  ತಕ್ಷಣ ವಿದ್ಯಾರ್ಥಿ ವಿರೋಧಿ ನೀತಿಯನ್ನು ಸರ್ಕಾರ ಹಿಂಪ ಡೆಯಬೇಕು’ ಎಂದು ಒತ್ತಾಯಿಸಿ ತಾಲ್ಲೂಕು ಎಬಿವಿಪಿ ಕಾರ್ಯಕರ್ತರು ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.‘ಉದ್ದೇಶಿತ ಯೋಜನೆಯಿಂದ ಎಂಜಿ ನಿಯರ್, ಮೆಡಿಕಲ್, ದಂತ ವೈದ್ಯಕೀ ಯದ ಶೇ 35 ರಿಂದ 45 ರವರೆಗಿನ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗುತ್ತವೆ. ಸರ್ಕಾರ ಕೋಟಾದ ಸೀಟುಗಳು ಇಲ್ಲ ದಂತಾಗುತ್ತದೆ. ಇದರಿಂದ ಬಡ ಪ್ರತಿಭಾನ್ವಿತ ವಿದ್ಯಾ ರ್ಥಿಗಳ ವೈದ್ಯಕೀಯ ಕನಸು ನುಚ್ಚುನೂ ರಾಗುತ್ತದೆ. ಈ ನೀತಿಯು ಶೈಕ್ಷಣಿಕ ವಿರೋಧಿ ಯಾಗಿದೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಕೋಡಿಹಳ್ಳಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನೀತಿ ಯನ್ನು ಖಂಡಿಸಿ ಘೋಷಣೆ ಕೂಗಿದರು. ಪ್ರತಿಭಾನ್ವಿತ ಬಡವ ರಿಗೆ ಅನ್ಯಾಯ ವಾಗುವ ಈ ಯೋಜನೆಯನ್ನು  ಹಿಂದಕ್ಕೆ ಪಡೆದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸ ಬೇಕು ಎಂದು ಆಗ್ರಹಿಸಿದರು.ಎಬಿವಿಪಿ ಜಿಲ್ಲಾ ಪ್ರಮುಖ ರಘುರಾಮ್, ಪುರು ಷೋತ್ತಮ್, ಕೆ.ಎನ್.ಕಿರಣ್, ಕೆ.ಎನ್.ಅರುಣ್, ವಿನುತಾ, ಸಂಧ್ಯಾ ನೂರಾರು ವಿದ್ಯಾ ರ್ಥಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)