ಸೋಮವಾರ, ಜನವರಿ 20, 2020
27 °C

ಸಿಇಟಿ 2006 ಕಾಯ್ದೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ವೃತ್ತಿ ಶಿಕ್ಷಣ ಪ್ರವೇಶದ 2006ರ ಕಾಯ್ದೆ ಜಾರಿಗೆ ಮುಂದಾ ಗಿರುವ ಸರ್ಕಾರ, ಬಡ ಜನರನ್ನು ವೃತ್ತಿ ಶಿಕ್ಷಣದಿಂದ ದೂರ ವಿಡುವ ಹುನ್ನಾರ ನಡೆಸುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಪ್ರಮುಖ ಕೋಡದಿಣ್ಣೆ ಧನಿಕ್‌ ಆರೋಪಿಸಿದರು.ಪಟ್ಟಣದಲ್ಲಿ ವೃತ್ತಿಶಿಕ್ಷಣ ಪ್ರವೇಶ 2006 ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ವೃತ್ತಿಶಿಕ್ಷಣ ಪ್ರವೇಶ 2006 ಕಾಯ್ದೆ ಜಾರಿಗೆ ಬಂದರೆ, ಗುಣಮಟ್ಟ ಮತ್ತು ಮೂಲ ಸೌಕರ್ಯಗಳ ನೆಪವೊಡ್ಡಿ,  ಖಾಸಗೀ ಕಾಲೇಜುಗಳ ಶುಲ್ಕವನ್ನು ಸ್ವಯಂ ನಿಗದಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಏಕರೂಪದ ಶುಲ್ಕ ವ್ಯವಸ್ಥೆ ಜಾರಿಗೆ ಬರುವುದರಿಂದ, ಬಡ ಮತ್ತು ಪ್ರತಿಭಾ ವಂತರಿಗೆ ನೀಡುತ್ತಿದ್ದ ಕಡಿಮೆ ಮೊತ್ತದ ಸೀಟುಗಳು ಇಲ್ಲವಾಗಿ ಎಲ್ಲರೂ ಸಮಾನವಾದ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ. ಇದರಿಂದ ಅರ್ಹ ಬಡ ಮತ್ತು ಹಿಂದುಳಿದ ವರ್ಗದ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗಲಿದೆ ಎಂದರು.ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ವಿವಿಧ ಮೀಸಲಾತಿಗಳನ್ನು ಅನುಸರಿಸಿ, ಸೀಟು ಹಂಚಿಕೆ ಮಾಡಲಾಗುತ್ತದೆಯಾದರೂ, ಶುಲ್ಕ ಪಾವತಿಯಲ್ಲಿ ಮಾತ್ರ ಏಕರೂಪ ತೆಯನ್ನು ಅನುಸರಿಸುವುದು ನ್ಯಾಯ ಬದ್ಧವಾಗಿಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು, ಶೇ 50 ಸೀಟುಗಳಿಗೆ ಈಗಿರುವ ಮಾದರಿ ಯಲ್ಲಿಯೇ ಶುಲ್ಕವನ್ನು ಮುಂದುವರೆಸ ಬೇಕು, ಉಳಿದ ಶೇ 50 ಸೀಟುಗಳಿಗೆ ಮಾತ್ರ ಕಾಲೇಜು ಸಮಿತಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದು ಕೊಳ್ಳ ಬೇಕು, 2006 ರ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸ ಬಾರದು ಎಂಬ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.ಪ್ರತಿಭಟನೆಯ ಅಂಗವಾಗಿ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಿಂದ ಲಯನ್ಸ್ ವೃತ್ತದವರೆಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಮಾನವ ಸರಪಳಿ ನಿರ್ಮಿಸಿ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಆದರ್ಶ, ಸೌಮ್ಯ, ಸುಂದ್ರೇಶ್‌, ಕೀರ್ತನ, ಪುಷ್ಪರಾಜ್, ಅಮಿತ್‌, ಮಾಲಿನಿ, ಸರಿತಾ ಮುಂತಾದವರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)