ಭಾನುವಾರ, ಮೇ 16, 2021
24 °C
ಸಿದ್ದರಾಮಯ್ಯ ವಿರುದ್ಧ ಪಂಡಿತಾರಾಧ್ಯ ಶ್ರೀ ಕಿಡಿ

ಸಿ.ಎಂ, ಶಾಸಕರಿಗೆ ದಿಗ್ಬಂಧನ ಹಾಕಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮದ್ಯಪಾನ ನಿಷೇಧದ ಬದಲಿಗೆ ಅಗ್ಗದ ಮದ್ಯ ತಯಾರಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರಕ್ಕಿಂತ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಅವರಿಗೆ ಸಮಾಜದ ಆರೋಗ್ಯ ಕಾಪಾಡುವ ಚಿಂತೆ ಇಲ್ಲ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಟೀಕಿಸಿದರು.ಕರುಣ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಶುಕ್ರವಾರ ನಗರದಲ್ಲಿ `ಗುಟ್ಕಾ ನಿಷೇಧ ಸ್ವಾಗತಾರ್ಹ. ಆದರೆ, ಮದ್ಯಪಾನ ಅಗತ್ಯವೇ? ಅನಿವಾರ್ಯವೇ?' ವಿಷಯ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರ, ಸಂಪೂರ್ಣ ಪಾನ ನಿಷೇಧ ಮಾಡುವ ಮನೋಸ್ಥೈರ್ಯವನ್ನು ಸರ್ಕಾರ ತೋರಬೇಕು. ಕುಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಎಂದೇನಿಲ್ಲ. ಆದರೂ ಅವರು, ಜನಪ್ರಿಯ ಕಾರ್ಯಕ್ರಮಗಳ ಹಿಂದೆ ಬಿದ್ದಿದ್ದಾರೆ. ಕುಡಿತ ಎಂತಹ ಸಾತ್ವಿಕನನ್ನೂ ದುಷ್ಟನನ್ನಾಗಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಕ್ರಮ ಕೈಗೊಳ್ಳಬೇಕು ಎಂದರು.`ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ, ಅಗ್ಗದ ಮದ್ಯ ನೀಡುವುದನ್ನು ವಿರೋಧಿಸಿ ಮೊದಲು ತಮ್ಮ ತಮ್ಮ ಕ್ಷೇತ್ರದ ಶಾಸಕರಿಗೆ ದಿಗ್ಬಂಧನ ಹಾಕಬೇಕು. ಸರ್ಕಾರದ ವಿರುದ್ಧ ದನಿ ಎತ್ತುವಂತೆ ಜನಪ್ರತಿನಿಧಿಗಳನ್ನು ಆಗ್ರಹಿಸಬೇಕು.

ನಾವು ನಮ್ಮ ಕ್ಷೇತ್ರದ ಪ್ರತಿನಿಧಿ ಸಮಾಜ ಕಲ್ಯಾಣ ಸಚಿವರಾಗಿರುವ ಎಚ್.ಆಂಜನೇಯ ಅವರಿಗೆ ಎಚ್ಚರಿಕೆ ಕೊಡುತ್ತೇವೆ. ಭಾಷಣಕ್ಕಿಂತ ವಿಧಾನಸೌಧದಲ್ಲಿ ಹೋರಾಟ ಮಾಡಬೇಕು' ಎಂದು ವೇದಿಕೆಯಲ್ಲಿದ್ದ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಅವರಿಗೆ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.