ಬುಧವಾರ, ಮೇ 12, 2021
18 °C

ಸಿದ್ದಾಪುರ ಶಾಲೆ ಶತಮಾನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಮಡಿಕೇರಿ ರಸ್ತೆಯ ಸಣ್ಣ ಕೊಠಡಿಯಲ್ಲಿ 1912ರಲ್ಲಿ ಆರಂಭವಾದ ಪ್ರಾಥಮಿಕ ಶಾಲೆಯೊಂದು ಇಂದು ನೂರರ ಸಂಭ್ರಮಾಚರಣೆಯಲ್ಲಿದೆ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ.ಗ್ರಾಮೀಣ ಪ್ರದೇಶವಾಗಿರುವ ಸಿದ್ದಾಪುರದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಯ ಅವಶ್ಯಕತೆ ಕಂಡು ಬಂದಾಗ ನೂರು ವರ್ಷಗಳ ಹಿಂದೆ ದೊರೆಸ್ವಾಮಿ ಪಿಳೈ ಎನ್ನುವವರು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಸರ್ಕಾರಿ ಶಾಲೆಗೆ ಕಟ್ಟಡ ನಿರ್ಮಿಸಿ, ಅಲ್ಲಿಗೆ ಮಡಿಕೇರಿ ರಸ್ತೆಯಲ್ಲಿದ್ದ ಶಾಲೆಯನ್ನು ಸ್ಥಳಾಂತರಿಸಿದರು. ಇಂದು ಜಿಲ್ಲೆಯಲ್ಲಿ ಶತಮಾನೋತ್ಸವ ಆಚರಣೆ ಮಾಡುತ್ತಿರುವ ಬೆರಳೆಣಿಕೆಯ ಶಾಲೆಗಳಲ್ಲಿ ಸಿದ್ದಾಪುರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಇಂದಿನ ಶಿಕ್ಷಣ ನೀತಿ, ಶೈಕ್ಷಣಿಕ ಗುಣಮಟ್ಟದ ನಡುವೆ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ದಿನ ನಿತ್ಯದ ಹೋರಾಟವಾಗಿ ಪರಿಣಮಿಸಿದೆ. ಇಂತಹ ವಾತಾವರಣದ ನಡುವೆಯೂ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನರ ಮೆಚ್ಚುಗೆಗೆ ಪಾತ್ರವಾಗಿರಲು ಹಾಗೂ ಶತಮಾನೋತ್ಸವ ಆಚರಣೆಗೆ ಸ್ಥಳೀಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪ್ರೋತ್ಸಾಹ,  ಸಹಕಾರವೇ ಕಾರಣವಾಗಿದೆ.ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಇಲ್ಲಿಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿಯೂ ತೊಡಗಿಸಿ       ೊಂಡಿದ್ದು ಶಾಲೆಯ ಆವರಣದಲ್ಲಿ ಬಾಳೆ ತೋಟ, ತರಕಾರಿ ತೋಟ ಮುಂತಾದವನ್ನು ಬೆಳೆದು ಶ್ರಮದ ಮಹತ್ವ ಸಾರಿದ್ದಾರೆ.ಒಂದರಿಂದ ಎಂಟನೇ ತರಗತಿಯವರೆಗಿನ ಸುಮಾರು 200ರಷ್ಟು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು ಎಲ್ಲರೂ ಬಡ ವಿದ್ಯಾರ್ಥಿಗಳೇ. ಬಹುತೇಕ ಮಕ್ಕಳ ಪೋಷಕರು ಅನಕ್ಷರಸ್ಥರಾಗಿದ್ದು ಹೆಚ್ಚಿನ ಮಕ್ಕಳಿಗೆ ಓದುವ ವಾತಾವರಣ ಲಭ್ಯವಿಲ್ಲ. ಆದರೂ ವಿದ್ಯಾರ್ಥಿಗಳು ಕಲಿಕೆ, ಕಲೆ, ಕೃಷಿ ಮುಂತಾದ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿ ಹೊರಬರುತ್ತಿದ್ದಾರೆ. ಅಲ್ಲದೇ  ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಗಮನಾರ್ಹ ಪ್ರದರ್ಶನ ನೀಡ್ದ್ದಿದಾರೆ.  ಕ್ರೀಡಾ ಚಟುವಟಿಕೆಗಳಲ್ಲಿಯೂ ಛಾಪು ಮೂಡಿಸಿದ್ದಾರೆ. ಇಲ್ಲಿಯ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸಹಕಾರ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಕಾರಣವಾಗಿದೆ.ಅನೇಕ ಹಳೆಯ ವಿದ್ಯಾರ್ಥಿಗಳು ಕೂಡ ಬಹಳ ಹಿಂದಿನಿಂದ ಶಾಲೆಯ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಹಾಯ ಮಾಡುತ್ತಿದ್ದು, ಅರ್ಥಪೂರ್ಣವಾಗಿ ಶತಮಾನೋತ್ಸವ ಆಚರಿಸಿಕೊಳ್ಳಲು ಶಾಲೆ ಸಜ್ಜಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.