ವಾಷಿಂಗ್ಟನ್ (ಪಿಟಿಐ): ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಗತ್ತಿನ ಅತ್ಯಂತ ಸಿರಿವಂತ ನಾಯಕರ ಪಟ್ಟಿಯಲ್ಲಿ ಪ್ರಕಟಿಸಿದ್ದ ಅಮೆರಿಕದ ಸುದ್ದಿ ವೆಬ್ಸೈಟ್ ಈಗ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದೆ.

‘ಇದೊಂದು ಅತ್ಯಂತ ಅಸಂಗತ ಹಾಗೂ ಹಾಸ್ಯಾಸ್ಪದ ಸುದ್ದಿ’ ಎಂದು ಕಾಂಗ್ರೆಸ್ ಪಕ್ಷ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ವೆಬ್ಸೈಟ್ ಈ ಕ್ರಮ ಕೈಗೊಂಡಿದೆ.‘ಸೋನಿಯಾ ಮತ್ತು ಕತಾರ್ನ ಮಾಜಿ ದೊರೆ ಹಮೀದ್ ಅವರನ್ನು ಸಿರಿವಂತರ ಪಟ್ಟಿ-ಯಿಂದ ಕೈಬಿಡಲಾಗಿದೆ’ ಎಂದು ಹಫಿಂಗ್ಟನ್ ಪೋಸ್ಟ್ ವೆಬ್ಸೈಟ್ನ ಸಂಪಾದಕರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ, ತಪ್ಪು ಮಾಹಿತಿಯಿಂದ ಗೊಂದಲವಾಗಿದ್ದಕ್ಕೆ ಸಂಪಾದಕರು ವಿಷಾದ ವ್ಯಕ್ತಪಡಿಸಿದ್ದಾರೆ.‘ಬೇರೊಂದು ವೆಬ್ಸೈಟ್ನಲ್ಲಿದ್ದ ಪಟ್ಟಿಯನ್ನು ಆಧರಿಸಿ ಈ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿದ್ದ ಆಸ್ತಿ ಮೌಲ್ಯವನ್ನು ನಾವು ಖಚಿತಪಡಿಸಿಕೊಂಡಿರಲಿಲ್ಲ’ ಎಂದು ಸಂಪಾದಕರು ತಿಳಿಸಿದ್ದಾರೆ.
ಆದರೆ ಮೊದಲಿಗೆ ಇದನ್ನು ಪ್ರಕಟಿಸಿದ್ದ ವೆಬ್ಸೈಟ್ ಯಾವುದೆಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಸೋನಿಯಾ ಅವರು 200 ಕೋಟಿ ಡಾಲರ್ (ಸುಮಾರು ₨ 12,400 ಕೋಟಿ) ಬೆಲೆಯ ಆಸ್ತಿಪಾಸ್ತಿಗೆ ಒಡತಿಯಾಗಿದ್ದು, ಅವರು ಜಗತ್ತಿನ 12ನೇ ಸಿರಿವಂತ ನಾಯಕಿ ಎಂದು ವೆಬ್ಸೈಟ್ 4 ದಿನದ ಹಿಂದೆ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.