ರಾಯಪುರ/ ನವದೆಹಲಿ (ಪಿಟಿಐ): ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಯಾಗಿ ಮಾವೊ ವಾದಿಗಳೊಂದಿಗೆ ಸಂಧಾನ ನಡೆಸಲು ಛತ್ತೀಸ್ಗಡ ಸರ್ಕಾರವು ಇಬ್ಬರು ಮಾಜಿ ಮುಖ್ಯ ಕಾರ್ಯದರ್ಶಿಗಳ ಹೆಸರನ್ನು ಮಂಗಳವಾರ ಸೂಚಿಸಿದೆ.

ಈ ಮಧ್ಯೆ, ಮಾವೊವಾದಿಗಳ ಪರ ಸರ್ಕಾರದೊಂದಿಗೆ ಸಂಧಾನ ನಡೆಸಲು ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಭೂಷಣ್ ಹಾಗೂ ಮನೀಷ್ ಕುಂಜಮ್ ನಿರಾಕರಿಸಿದ್ದಾರೆ.

ಮೆನನ್ ಅವರನ್ನು ಅಪಹರಿಸಿರುವ ಮಾವೊವಾದಿಗಳೊಂದಿಗೆ ಮಾತುಕತೆ ನಡೆಸಲು ಮಧ್ಯಪ್ರದೇಶ ಮತ್ತು ಛತ್ತೀಸ್ಗಡದ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ನಿರ್ಮಲಾ ಬುಚ್ ಮತ್ತು ಎಸ್.ಕೆ. ಮಿಶ್ರಾ ಅವರನ್ನು ಸರ್ಕಾರದ ಪ್ರತಿನಿಧಿಗಳನ್ನಾಗಿ ನಿಯೋಜಿಸಲಾಗಿದೆ~ ಎಂದು ಛತ್ತೀಸ್ಗಡದ ಮುಖ್ಯಮಂತ್ರಿ ರಮಣ್ ಸಿಂಗ್ ರಾಯಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಲಾ ಮತ್ತು ಮಿಶ್ರಾ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸರ್ಕಾರದ ಪರವಾಗಿ ನಕ್ಸಲರ ಸಂಧಾನಕಾರರೊಂದಿಗೆ ಮಾತುಕತೆ ನಡೆಸಲು ಅವರು ಒಪ್ಪಿದ್ದಾರೆ~ ಎಂದು ರಮಣ್ ಸಿಂಗ್ ತಿಳಿಸಿದ್ದಾರೆ.

ನಕ್ಸಲರ ಪರ ಸಂಧಾನ ನಡೆಸಲು ಅಖಿಲ ಭಾರತ ಆದಿವಾಸಿ ಮಹಾಸಭಾ ಅಧ್ಯಕ್ಷ ಮನೀಷ್ ಕುಂಜಮ್ ಅವರು ನಿರಾಕರಿಸಿದ್ದರೂ, ಅನಾರೋಗ್ಯದಿಂದ ಬಳಲುತ್ತಿರುವ ಅಲೆಕ್ಸ್ ಪಾಲ್ ಮೆನನ್ ಅವರಿಗೆ ಔಷಧ ತೆಗೆದುಕೊಂಡು ಹೋಗಲು ಸಮ್ಮತಿಸಿದ್ದಾರೆ ಎಂದು ರಮಣ್ ಸಿಂಗ್ ಹೇಳಿದ್ದಾರೆ.

ಮೆನನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾವೊವಾದಿಗಳು ಸೋಮವಾರ ರಾತ್ರಿ ಹೇಳಿದ್ದರು.
`ತರಿಮೆಟ್ಲಾ ಗ್ರಾಮದಲ್ಲಿ ನಕ್ಸಲರ ಬಂಧನದಲ್ಲಿರುವ ಮೆನನ್ ಅವರಿಗೆ ಔಷಧವನ್ನು ಶೀಘ್ರವಾಗಿ ರವಾನಿಸಲು ಕುಂಜಮ್ ಸಮ್ಮತಿಸಿದ್ದಾರೆ. ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದೇವೆ~ ಎಂದು ರಮಣ್ ಸಿಂಗ್ ಹೇಳಿದ್ದಾರೆ.

ಮೆನನ್ ಅವರು ಶನಿವಾರ ಅಪಹರಣಕ್ಕೊಳಗಾದ ಸಂದರ್ಭದಲ್ಲಿ ಅವರ ಬಳಿ ಸಾಕಷ್ಟು ಔಷಧ ಇರಲಿಲ್ಲ ಎಂದು ಮೆನನ್ ಪತ್ನಿ ಆಶಾ ಹೇಳಿದ್ದರು. ಅಪಹರಣಕ್ಕೊಳಗಾಗಿರುವ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಸುರಕ್ಷತೆ ಬಿಡುಗಡೆಗೆ ಮೊದಲ ಆದ್ಯತೆ ನೀಡುವುದಾಗಿ ಛತ್ತೀಸ್ಗಡ ಸರ್ಕಾರ ಹೆಸರಿಸಿರುವ ಇಬ್ಬರು ಸಂಧಾನಕಾರರು ಹೇಳಿದ್ದಾರೆ.

ಬಿಕ್ಕಟ್ಟಿಗೆ ಶೀಘ್ರ ತೆರೆ: ಕೇಂದ್ರ
ನವದೆಹಲಿ (ಪಿಟಿಐ): ಸಂಧಾನಕಾರರ ನೇಮಕದೊಂದಿಗೆ ಜಿಲ್ಲಾಧಿಕಾರಿ ಮೆನನ್ ಅಪಹರಣದಿಂದಾಗಿ ಉಂಟಾಗಿರುವ ಬಿಕ್ಕಟ್ಟು ಶೀಘ್ರದಲ್ಲಿ ಕೊನೆ ಕಾಣಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ತಮಾದಿಂದ ಬಳಲುತ್ತಿರುವ ಮೆನನ್ ಅವರಿಗೆ ಔಷಧವನ್ನು ಒದಗಿಸುವುದಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಿಂಗ್ ಹೇಳಿದ್ದಾರೆ.

ಸಂಸತ್ ಆತಂಕ
ನವದೆಹಲಿ (ಪಿಟಿಐ): ಛತ್ತೀಸ್ಗಡದ ಸುಕ್ಮಾ ಜಿಲ್ಲೆ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಅಪಹರಣದ ಬಗ್ಗೆ ಸಂಸತ್ನ ಉಭಯ ಸದನಗಳು ಆತಂಕ ವ್ಯಕ್ತಪಡಿಸಿವೆ.

ಸಿಪಿಐ, ಎಐಎಡಿಎಂಕೆ, ಡಿಎಂಕೆ, ಕಾಂಗ್ರೆಸ್ ಸಂಸದರು ಜಿಲ್ಲಾಧಿಕಾರಿ ಸುರಕ್ಷಿತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಕ್ಸಲರ ಪರ ಸಂಧಾನ: ಪ್ರಶಾಂತ್ ಭೂಷಣ್ ನಕಾರ
ಮೆನನ್ ಬಿಡುಗಡೆಗಾಗಿ ಮಾವೊವಾದಿಗಳ ಪರ ಸಂಧಾನ ನಡೆಸಲು ಅಣ್ಣಾ ತಂಡದ ಸದಸ್ಯ, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ನಿರಾಕರಿಸಿದ್ದಾರೆ.

`ಯಾವುದೇ ಷರತ್ತುಗಳನ್ನು ಹಾಕದೆ ಮೆನನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಮಾವೊವಾದಿಗಳು ಇಟ್ಟಿರುವ ಹೆಚ್ಚಿನ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಜಿಲ್ಲಾಧಿಕಾರಿ ಮೆನನ್ ಅವರನ್ನು ಅಡಮಾನದ ವಸ್ತುವಿನಂತೆ ಬಳಸಬಾರದು~ ಎಂದು ಪ್ರಶಾಂತ್ ಭೂಷಣ್ ನವದೆಹಲಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.