ನವದೆಹಲಿ (ಪಿಟಿಐ): ಭಾರತದ ಯುವ ಆಟಗಾರರಾದ ಸುಧಾಂಶು ಗ್ರೋವರ್ ಹಾಗೂ ಸುತೀರ್ಥಾ ಮುಖರ್ಜಿ ಇಲ್ಲಿ ನಡೆದ ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಜೂನಿಯರ್ ಬಾಲಕರ ಹಾಗೂ ಜೂನಿಯರ್ ಬಾಲಕಿಯರ ವಿಭಾಗದ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು.

ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ನಲ್ಲಿ ಸುಧಾಂಶು 4-3ರಲ್ಲಿ ಅಭಿಷೇಕ್ ಯಾದವ್ ವಿರುದ್ಧ ಪ್ರಯಾಸದ ಗೆಲುವು ಪಡೆದರು. ಸುತೀರ್ಥಾ 4-2ರಲ್ಲಿ ಮಾಣಿಕಾ ಬಾತ್ರಾ ಅವರನ್ನು ಮಣಿಸಿದರು.

ಅನಿರ್ಬಾನ್ ಘೋಷ್ ಹಾಗೂ ಸಾಗರಿಕಾ ಮುಖರ್ಜಿ ಕ್ರಮವಾಗಿ ಕೆಡೆಟ್ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ಗಳಾದರು. ಉಭಯ ಆಟಗಾರರಿಗೂ ಇದು ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.

ಇನ್ನು, ಜೂನಿಯರ್ ಡಬಲ್ಸ್ ವಿಭಾಗದ ಬಾಲಕರ ಪ್ರಶಸ್ತಿ ಅಭಿಷೇಕ್ ಹಾಗೂ ಸುಧಾಂಶು ಜಯಿಸಿದರೆ ಬಾಲಕಿಯರ ಪ್ರಶಸ್ತಿಯನ್ನು ಬಾತ್ರಾ ಹಾಗೂ ಸುತೀರ್ಥಾ ತಮ್ಮದಾಗಿಸಿಕೊಂಡರು. ಉಭಯ ಜೋಡಿಗಳು ಕ್ರಮವಾಗಿ ಫೈನಲ್ಗಳಲ್ಲಿ ಶ್ರೀಲಂಕಾದ ಸ್ಪರ್ಧಿಗಳನ್ನು ಮಣಿಸಿದರು.

ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಭಾರತ ಹಾಗೂ ಎರಡನೇ ಸ್ಥಾನ ಪಡೆದ ಶ್ರೀಲಂಕಾ, ಕತಾರ್ನ ದೋಹಾದಲ್ಲಿ ನಡೆಯಲಿರುವ ಏಷ್ಯಾ ಜೂನಿಯರ್ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆದವು.

`ಫೈನಲ್ ಪಂದ್ಯ ರೋಚಕವಾಗಿತ್ತು. ಅಭಿಷೇಕ್ ಅವರ ಹೊಡೆತಗಳು ಬಿರುಸಾಗಿದ್ದವು. ಆರಂಭದಲ್ಲಿ ಅವುಗಳನ್ನು ಎದುರಿಸುವುದು ಕಷ್ಟವಾಗಿತ್ತು. ಕೊನೆ ಕ್ಷಣಗಳಲ್ಲಿ ಕೆಲ ಪಾಯಿಂಟ್ಗಳಿಂದ ಗೆಲುವು ಸುಲಭವಾಯಿತು' ಎಂದು ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿ ಜಯಿಸಿದ ಸುಧಾಂಶು ಪ್ರತಿಕ್ರಿಯಿಸಿದರು.

ಅಲ್ಲದೇ, `ಹೋದ ವರ್ಷ ನಾನು ಅಭಿಷೇಕ್ ಕೈಯಲ್ಲಿ ಸೋತಿದ್ದೆ. ಈ ವರ್ಷ ತಿರುಗೇಟು ನೀಡಿದೆ' ಎಂದೂ ಸುಧಾಂಶು ನುಡಿದರು.
ಫಲಿತಾಂಶ: ಜೂನಿಯರ್ ಬಾಲಕರ ಸಿಂಗಲ್ಸ್: ಸುಧಾಂಶು ಗ್ರೋವರ್ 11-9, 9-11, 10-12, 12-10, 11-9, 7-11, 11-7 ರಲ್ಲಿ ಅಭಿಷೇಕ್ ಯಾದವ್ ವಿರುದ್ಧ ಗೆಲುವು.

ಜೂನಿಯರ್ ಬಾಲಕರ ಡಬಲ್ಸ್: ಅಭಿಷೇಕ್ ಯಾದವ್/ಸುಧಾಂಶು ಗ್ರೋವರ್ 11-6, 11-9, 11-6ರಲ್ಲಿ ಶ್ರೀಲಂಕಾದ ವಿಮುಕ್ತಿ ವಿಜೆಸಿರಿ/ಲಿಯನಾಹೆ ಕಹಾವತತಾ ವಿರುದ್ಧ ಜಯ.

ಜೂನಿಯರ್ ಬಾಲಕಿಯರ ಸಿಂಗಲ್ಸ್: ಸುತೀರ್ಥಾ ಮುಖರ್ಜಿ 11-9, 11-7, 7-11,12-14, 11-9, 11-6ರಲ್ಲಿ ಮಾಣಿಕಾ ಬಾತ್ರಾ ಎದುರು ಗೆಲುವು.

ಜೂನಿಯರ್ ಬಾಲಕಿಯರ ಡಬಲ್ಸ್: ಮಾಣಿಕಾ ಬಾತ್ರಾ/ಸುತೀರ್ಥಾ ಮುಖರ್ಜಿ 11-5, 9-11, 11-3, 13-11ರಲ್ಲಿ ಶ್ರೀಲಂಕಾದ ತಾರಕಿ ಡಿ ಸಿಲ್ವಾ/ ಬಂಡಾರಾ ರಾಜಗುರು ವಿರುದ್ಧ ಜಯ.

ಕೆಡೆಟ್ ಬಾಲಕರ ಸಿಂಗಲ್ಸ್: ಅನಿರ್ಬಾನ್ ಘೋಷ್ 11-7, 12-10, 8-11, 11-8ರಲ್ಲಿ ಬರ್ಡಿ ಬೋರೊ ಎದುರು ಜಯ.

ಕೆಡೆಟ್ ಬಾಲಕಿಯರ ಸಿಂಗಲ್ಸ್: ಸಾಗರಿಕಾ ಮುಖರ್ಜಿ 12-10, 11-6, 11-7ರಲ್ಲಿ ಆರ್.ಹರ್ಷವರ್ಧಿನಿ ವಿರುದ್ಧ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.