ಶನಿವಾರ, ಮೇ 8, 2021
18 °C

ಸೂಪರ್ ಡಿವಿಷನ್ ಹಾಕಿ: ಎಂಇಜಿಗೆ ಮಣಿದ ಸಿಒಇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) `ಎ~ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯತ್ತಿರುವ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4-2 ಗೋಲುಗಳಿಂದ ಸಿಒಇ ತಂಡವನ್ನು ಸೋಲಿಸಿತು.



ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಮುತ್ತಣ್ಣ 41 ಹಾಗೂ 50ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರು. 51ನೇ ನಿಮಿಷದಲ್ಲಿ ರಾಮ ಶಂಕರ ಹಾಗೂ ಎ.ಯು. ಕಾರಿಯಪ್ಪ 60ನೇ ನಿಮಿಷದಲ್ಲಿ ಗೋಲು ತಂದಿಟ್ಟರು.



ಸಿಒಎ ತಂಡದ ಸರಿಯು 14ನೇ ನಿಮಿಷ ಹಾಗೂ ಎಂ. ತ್ಯಾಗರಾಜ್ 20ನೇ ನಿಮಿಷದಲ್ಲಿ ಗೋಲು ಗಳಿಸಿ ವಿರಾಮದ ವೇಳೆಗೆ 2-0ರಲ್ಲಿ ಮುನ್ನಡೆ ತಂದಿಟ್ಟರೂ, ಈ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ.



ಆರ್ಮಿಗ್ರೀನ್‌ಗೆ ಗೆಲುವು: ಗೋಲುಗಳ ಮಳೆ ಸುರಿಸಿದ ಆರ್ಮಿ ಗ್ರೀನ್ 8-2ಗೋಲುಗಳಿಂದ ಎಂಎಲ್‌ಐ ತಂಡವನ್ನು ಮಣಿಸಿತು.



ಆರ್ಮಿ ತಂಡದ ಭೂಷಣ್ (8ನೇ ನಿಮಿಷ), ಬಲ್ವಿಂದರ್ (15 ಹಾಗೂ 54ನೇ ನಿ.), ರೋಮೆ (29 ಹಾಗೂ 50ನೇ ನಿ.), ಅರುಣ್ (31ಹಾಗೂ 49ನೇ ನಿ.) ಮತ್ತು ಬಿನೋಯ್ (32ನೇ ನಿ.) ಗೋಲು ಗಳಿಸಿದರು.



ಪಿಸಿಟಿಸಿ ಹಾಗೂ ಎಬಿಎಚ್‌ಎ ತಂಡಗಳ ನಡುವಿನ ಪಂದ್ಯವು 3-3ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.



ಪಿಸಿಟಿಸಿಯ ಎನ್ .ಎಸ್. ರಾಜೇಶ್ (14ನೇ ನಿ.), ಮನೋಜ್ ಸಿಂಗ್ (18ನೇ ನಿ.) ಹಾಗೂ ಅನೂಪ್ ಕಜೂರ್ (37ನೇ ನಿ.), ಎಬಿಎಚ್‌ಎ ತಂಡದ ಪ್ರವೀಣ್ ತೊಪ್ನಾ (12ನೇ ನಿ.), ಎಲ್. ಡೊಡ್ರಿಯಾ (32ನೇ ನಿ.) ಮತ್ತು ರವಿ ಚೌದರಿ (45ನೇ ನಿ.) ಗೋಲು ತಂದಿಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.