ಗುರುವಾರ , ಮೇ 13, 2021
16 °C

ಸೆಹ್ವಾಗ್ ವಿಕೆಟ್ ಮಹತ್ವದ್ದಾಗಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಂದ್ಯದ ಮಹತ್ವದ ಘಟ್ಟದಲ್ಲಿ ವೀರೇಂದ್ರ ಸೆಹ್ವಾಗ್ ಅವರ ವಿಕೆಟ್ ದೊರೆತದ್ದು ನಮ್ಮ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂದು ಪುಣೆ ವಾರಿಯರ್ಸ್ ತಂಡದ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.ನವದೆಹಲಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ 20 ರನ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯ ಪಡೆದಿತ್ತು. ಗೆಲುವಿಗೆ 193 ರನ್‌ಗಳ ಗುರಿ ಬೆನ್ನಟ್ಟಿದ್ದ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 172 ರನ್ ಗಳಿಸಲು ಶಕ್ತವಾಗಿತ್ತು. 32 ಎಸೆತಗಳಲ್ಲಿ 57 ರನ್ ಗಳಿಸಿದ್ದ ಸೆಹ್ವಾಗ್ ಅವರು ಮುರಳಿ ಕಾರ್ತಿಕ್‌ಗೆ ವಿಕೆಟ್ ಒಪ್ಪಿಸಿದ್ದರು.`ಸೆಹ್ವಾಗ್ ದೊಡ್ಡ ಹೊಡೆತಗಳ ಮೂಲಕ ಎಲ್ಲ ಬೌಲರ್‌ಗಳ ಮೇಲೂ ಪ್ರಭುತ್ವ ಸಾಧಿಸಿದ್ದರು. ಅವರು ಔಟಾದ ಬಳಿಕವಷ್ಟೇ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು~ ಎಂದು ಗಂಗೂಲಿ ನುಡಿದಿದ್ದಾರೆ.ಕೆವಿನ್ ಪೀಟರ್ಸನ್ ಅವರ ವಿಕೆಟ್ ಪಡೆದ ಬಳಿಕ ಅತಿಯಾಗಿ ಸಂಭ್ರಮಿಸಿದ್ದರ ಬಗ್ಗೆ ಕೇಳಿದಾಗ ಗಂಗೂಲಿ, `ಪೀಟರ್ಸನ್ ವಿಕೆಟ್ ದೊರೆತಾಗ ನಿರಾಳನಾದೆ. ಇದು ಸಂಭ್ರಮಕ್ಕೆ ಕಾರಣ~ ಎಂದು ಉತ್ತರಿಸಿದರು. ಗಂಗೂಲಿ ತಮ್ಮ ಮೊದಲ ಎಸೆತದಲ್ಲಿ ಪೀಟರ್ಸನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ್ದರು.ಆಲ್‌ರೌಂಡ್ ಪ್ರದರ್ಶನ ನೀಡಿದ ಗಂಗೂಲಿ  `ಪಂದ್ಯಶ್ರೇಷ್ಠ~ ಪ್ರಶಸ್ತಿ ಪಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.