ಮೈಸೂರು: `ಸಾಧ್ಯ~ ಯೋಜನೆಯಡಿ ವಿವಿಧ ವೃತ್ತಿ ಕೌಶಲ ತರಬೇತಿ ಪಡೆದ ಸೌಮ್ಯ ಬುದ್ಧಿಮಾಂದ್ಯರನ್ನು ಉದ್ಯೋ ಗಕ್ಕೆ ನೇಮಿಸಿಕೊಳ್ಳಲು ಕಾರ್ಖಾನೆಗಳ ಆಡಳಿತ ಮಂಡಳಿಯವರು ಮುಂದಾಗ ಬೇಕು ಎಂದು ಮೈಸೂರು ಜಿಲ್ಲೆ ಪೋಷಕರ ಸಂಘದ (ಬುದ್ಧಿಮಾಂದ್ಯರ ಸಬಲೀಕರಣಕ್ಕಾಗಿ) ಉಪಾಧ್ಯಕ್ಷ ಅರ್ಕಲ್ ಬಷೀರ್ ಮನವಿ ಮಾಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜಿಸ್ನ ನರೇಂದ್ರ ನಾರಾಯಣ ಅವರು ಬುದ್ಧಿಮಾಂದ್ಯರಿಗೆ ಉದ್ಯೋಗ ನೀಡಿ ಹೊಸ ಭಾಷ್ಯ ಬರೆದಿದ್ದಾರೆ. ಎಜೆಎಸ್ ಪ್ಲಾಸ್ಟಿಕ್ -ಎಂಜಿನಿಯರಿಂಗ್ ಕಂಪೆನಿ ಸಹ ಬುದ್ಧಿಮಾಂದ್ಯರಿಗೆ ಕೆಲಸ ನೀಡಿದೆ. 26 ವಿಶೇಷ ಮಕ್ಕಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಫ್ಯಾಕ್ಟರಿ ಮತ್ತು ಕಂಪೆನಿಗಳು ಇವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಮೈಸೂರು ಜಿಲ್ಲೆ ಪೋಷಕರ ಸಂಘಕ್ಕೆ ಧನಸಹಾಯ ನೀಡುವ ದಾನಿಗಳಿಗೆ ವರಮಾನ ತೆರಿಗೆ ಕಾಯ್ದೆ 80ರ ಅಡಿ ತೆರಿಗೆ ವಿನಾಯಿತಿ ದೊರಕಲಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಂ.ವಿ.ಆನಂದ್, ಖಜಾಂಚಿ ಸೈಜು, ಅಜಿತ್ ಬರ್ಧನ್, ಅಚ್ಚುತ್ರಾವ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.