ಬುಧವಾರ, ಮೇ 19, 2021
24 °C

ಸೌಲಭ್ಯಗಳಿಲ್ಲದ ಜಾನುವಾರು ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುದೊಡ್ಡ ಜಾನುವಾರುಗಳ ಮಾರುಕಟ್ಟೆ ಯಲ್ಲಿ ಒಂದಾಗಿರುವ, ಹಿರೇಕೆರೂರ ತಾಲ್ಲೂಕಿನ ಏಕೈಕ ಮಾರುಕಟ್ಟೆ ಎನಿಸಿಕೊಂಡ ಹಂಸಭಾವಿ ಗ್ರಾಮದ ಜಾನುವಾರುಗಳ ಮಾರುಕಟ್ಟೆ ಕಳೆದ ಹತ್ತಾರು ವರ್ಷಗಳಿಂದ ಮೂಲ ಸವಲತ್ತು ಗಳಿಲ್ಲದೇ ಸೊರಗುತ್ತಿದೆ.ಮೂಲತಃ ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಸೇರಿರುವ ಸುಮಾರು 4 ಎಕರೆ ವಿಶಾಲ ಪ್ರದೇಶದಲ್ಲಿ ಪ್ರತಿ ಶುಕ್ರವಾರ ದನಗಳ ಮಾರುಕಟ್ಟೆಯಲ್ಲಿ ಮಿಶ್ರತಳಿ ರಾಸುಗಳು, ಜವಾರಿ ತಳಿ ಹೋರಿಗಳಾದ ಖಿಲಾರಿ, ಹಳ್ಳಿಕಾರ ಮುಂತಾದ ಕೃಷಿಯೋಗ್ಯ ತಳಿಗಳು, ಎಮ್ಮೆಗಳು, ಕರುಗಳು ಮೊದಲಾದ ನೂರಾರು ರಾಸುಗಳು ಸೇರುತ್ತವೆ. ಈ ಮಾರುಕಟ್ಟೆಯಲ್ಲಿ ಕಸಾಯಿ ಖಾನೆಗೆ ಮಾರಾಟ ಮಾಡಲು ವಯಸ್ಸಾದ ಹಾಗೂ ರೋಗಪೀಡಿತ ದನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತವೆ.ನೂರರಿಂದ ಐದು ನೂರರವರೆಗೆ ದನಗಳು ಸೇರಬಹುದಾದ ಈ ಮಾರುಕಟ್ಟೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಪ್ರತಿ ದೊಡ್ಡ ಜಾನುವಾರಿಗೆ ರೂ 4 ಹಾಗೂ ಕರುವಿಗೆ ರೂ 2 ಶುಲ್ಕವನ್ನು ಸಂಗ್ರಹಿಸಿಕೊಂಡು ಹೋಗು ತ್ತಿದ್ದು, ಯಾವುದೇ ಸವಲತ್ತುಗಳನ್ನು ನೀಡಲು ಮುಂದಾಗುತ್ತಿಲ್ಲ. `ಮಾರುಕಟ್ಟೆಯ ಜಾಗೆ ನಮ್ಮದಲ್ಲ, ಹಾಗಾಗಿ ಯಾವುದೇ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ~ ಎನ್ನುತ್ತಾರೆ ಸಮಿತಿಯ ಕಾರ್ಯದರ್ಶಿ ಎ.ಕೆ.ರಾಮಪ್ಪ.ರೈತರು ತಮ್ಮ ಕೃಷಿ ಕಾರ್ಯಗಳಿಗೆ ಅವಶ್ಯವಿರುವ ಜಾನುವಾರುಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಇದೇ ಮಾರುಕಟ್ಟೆ ಯನ್ನು ಅವಲಂಭಿಸಿದ್ದಾರೆ. ಆದರೆ ಇಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ರೈತರ ಅವಶ್ಯಕತೆ  ಈಡೇರಿಸುವಲ್ಲಿ ವಿಫಲವಾಗಿದೆ.ಪರಿಣಾಮ ಜಾನುವಾರು ಮಾರಾಟಕ್ಕೆ ಅಥವಾ ಕೊಂಡುಕೊಳ್ಳಲಿಕ್ಕೆ ಬರುವ ರೈತರು ಬಿರುಬಿಸಿಲಿನ ತಾಪದಲ್ಲಿ ಬೇಯಬೇಕಿದೆ. ಕುಡಿ ಯುವ ನೀರಿಗೆ ಸೂಕ್ತ ವ್ಯವಸ್ಥೆ ಇಲ್ಲದೇ ಪರಿತಪಿ ಸುವಂತಹ ಸ್ಥಿತಿ ಮಾರುಕಟ್ಟೆಯಲ್ಲಿ ಇದೆ. ಜಾನುವಾರುಗಳು ಕೂಡ ನೆರಳು ಕಾಣದಂತೆ ಬಯಲಿನಲ್ಲಿ ನಿಲ್ಲಬೇಕಾಗಿದೆ.ಕಳೆದ ಹತ್ತಾರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮವಾದ ಜಾನುವಾರು ಮಾರುಕಟ್ಟೆ ಎಂಬ ಖ್ಯಾತಿ ಹೊಂದಿದ  ಹಂಸಭಾವಿ ಗ್ರಾಮದ ಜಾನುವಾರು ಮಾರುಕಟ್ಟೆಗಾಗಿ ಸೂಕ್ತ ಜಮೀನು ಖರೀದಿಸಿ, ಸ್ವತಂತ್ರವಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ, ರೈತರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಮುಂದಾಗಬೇಕು ಎಂದು ಗ್ರಾಮದ ಮುಖಂಡರಾದ ಷಣ್ಮುಖ ಮಳಿಮಠ, ಮಂಜುನಾಥ ಮುರುಡಕ್ಕನವರ ಮನವಿ ಮಾಡಿಕೊಂಡಿದ್ದಾರೆ.ಯಾಮಾರಿದರೆ ಮಧ್ಯವರ್ತಿಗಳಿಂದ ಟೋಪಿ

ಜಾನುವಾರ ಖರೀದಿ ಮತ್ತು ಮಾರಾಟ ದಲ್ಲಿ ಮಧ್ಯವರ್ತಿಗಳ ಪಾತ್ರ ವಿಪರೀತ ವಾಗಿದೆ ಎಂಬುದು ರೈತರ ಅಳಲು. ಮುಗ್ಧ ರೈತರನ್ನು ವಂಚಿಸಿ ಮಾರಾಟ ಇಲ್ಲವೇ ಖರೀದಿ ನಡೆ ಯುವುದು ಸಾಮಾನ್ಯ ಎನಿಸಿದೆ. ಕಡಿಮೆ ಹಾಲು ಕೊಡುವ ರಾಸುಗಳನ್ನು 2-3 ದಿನ ಹಿಂಡದೇ ಮಾರುಕಟ್ಟೆಗೆ ತಂದು ಅದರ ದೊಡ್ಡ ಕೆಚ್ಚಲನ್ನು ತೋರಿಸಿ `ಭಾರಿ ಹಾಲು ಹಿಂಡುವ ರಾಸು ಇದು~ ಎಂದು ನಂಬಿಸಿ ವಂಚಿಸುವ ಪ್ರಯತ್ನಗಳು ನಡೆಯುತ್ತವೆ. ಮಿಶ್ರತಳಿಯ ಹಸು ಕರು ಹಾಕಿದ ನಂತರ ಅನೇಕ ತಿಂಗಳುಗಳ ಕಾಲ ಅದರ ಹಾಲು ಹಿಂಡಿಕೊಂಡು ನಂತರ ಅದೇ ಹಸುವಿಗೆ ಮತ್ತೊಂದು ಸಣ್ಣಕರುವನ್ನು ಜೋಡಿ ಮಾಡಿಕೊಂಡು ಮಾರುಕಟ್ಟೆಗೆ ತಂದು `ಕರು ಹಾಕಿ ಕೇವಲ ಒಂದು ವಾರ ಆಗಿದೆ. ಇಲ್ಲವೇ 15 ದಿನಗಳಾಗಿವೆ~ ಎಂದು ರೈತರನ್ನು ನಂಬಿಸಿ ವಂಚಿಸುವ ಯತ್ನಗಳು ಸಹ ಮಾರುಕಟ್ಟೆಯಲ್ಲಿ ನಡೆಯುತ್ತಿವೆ. ಇದಲ್ಲದೇ ವಿವಿಧ ವಂಚನೆಯ ತಂತ್ರಗಳನ್ನು ಮಧ್ಯವರ್ತಿಗಳು ಬಳಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.