ಮೆಲ್ಬರ್ನ್ (ಪಿಟಿಐ): ತಾಯಿಯ ಎದೆಹಾಲು ಮಗುವಿನ ಆರೋಗ್ಯಕ್ಕಷ್ಟೇ ಉತ್ತಮವಲ್ಲ, ತಾಯಿಯ ಆರೋಗ್ಯಕ್ಕೂ ಉತ್ತಮ ಎಂದು ಸಂಶೋಧನೆಯೊಂದು ತಿಳಿಸಿದೆ.

ಮಗುವಿಗೆ ಎದೆಹಾಲು ಉಣಿಸುವ ತಾಯಂದಿರಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಎದೆಹಾಲಿನೊಂದಿಗೆ ತಾಯಿ ಮತ್ತು ಮಗುವಿಗಿರುವ ಸಂಬಂಧದ ಕುರಿತು `ಯೂನಿವರ್ಸಿಟಿ ಆಫ್ ವೆಸ್ಟರ್ನ್ ಸಿಡ್ನಿ ಸ್ಕೂಲ್ ಆಫ್ ಮೆಡಿಸಿನ್' ಈ ಸಂಶೋಧನೆ ನಡೆಸಿದೆ. ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲೂಡಿಸುವ 64 ವರ್ಷದ ಒಳಗಿನ ತಾಯಂದಿರಲ್ಲಿ ರಕ್ತದೊತ್ತಡ ಹೆಚ್ಚುವ ಪ್ರಮಾಣವೂ ಕಡಿಮೆ ಇರುತ್ತದೆ ಎನ್ನಲಾಗಿದೆ.

ಆಸ್ಟ್ರೇಲಿಯಾದ 45 ವರ್ಷದ ಒಳಗಿನ 74,785 ತಾಯಂದಿರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಹೆಚ್ಚಿನ ರಕ್ತದೊತ್ತಡ ಮತ್ತು ಹಾಲೂಡಿಸುವಿಕೆ ನಡುವಿನ ಸಂಬಂಧ ಬೆಳಕಿಗೆ ಬಂದಿದೆ ಎಂದು ಸಂಶೋಧನೆ ತಿಳಿಸಿದೆ.

45ವರ್ಷದಿಂದ 64ವರ್ಷದ ಒಳಗಿನ ತಾಯಂದಿರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ 6 ತಿಂಗಳ ಕಾಲ ಮಗುವಿಗೆ ಹಾಲೂಡಿಸಿರುವ ಮಹಿಳೆಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಂಭವ ಕಡಿಮೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ.

`ಯೂನಿವರ್ಸಿಟಿ ಆಫ್ ವೆಸ್ಟರ್ನ್ ಸಿಡ್ನಿ ಸ್ಕೂಲ್ ಆಫ್ ಮೆಡಿಸಿನ್'ನ ಅಣು ಜೀವವಿಜ್ಞಾನ ಮತ್ತು ವಂಶವಾಹಿ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಜೊನ್ನೆ ಲಿಂಡ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ಸಂಶೋಧನೆಯಲ್ಲಿ ಎದೆಹಾಲು ತಾಯಿ-ಮಗು ಇಬ್ಬರಿಗೂ ಲಾಭದಾಯಕ ಎಂದು ಕಂಡುಕೊಳ್ಳಲಾಗಿದೆ.

ಈ ಸಂಶೋಧನೆ ಮಹಿಳೆ, ತಜ್ಞವೈದ್ಯರು ಮತ್ತು ದಾದಿಯಂದಿರ ನಡುವೆ ಒಳ್ಳೆಯ ಚರ್ಚೆಗೆ ಹಾದಿಯಾಗಲಿದೆ. ಹೆಚ್ಚಿನ ರಕ್ತದೊತ್ತಡ ಮತ್ತು ಎದೆ ಹಾಲೂಡಿಸುವಿಕೆ ನಡುವಿನ ಸಂಬಂಧದ ಕುರಿತು ಇದೇ ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದ್ದು, ಸಾಧ್ಯವಾದಷ್ಟು ಬಾರಿ ತಾಯಂದಿರು ಎದೆ ಹಾಲೂಡಿಸುವಿಕೆಗೆ ಪ್ರೋತ್ಸಾಹ ನೀಡಬೇಕು. ಮಗುವಿಗೆ ಹಾಲೂಡಿಸುವ ಸಂದರ್ಭದಲ್ಲಿ ತಾಯಿಯಲ್ಲಿ ಬಿಡುಗಡೆಯಾಗುವ ಹಾರ್ಮೋನ್ಗಳು ತಾಯಿಯ ಹೃದಯದ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ ಎಂದೂ ಲಿಂಡ್ ಅಭಿಪ್ರಾಯ ಪಟ್ಟಿದ್ದಾರೆ.

ಮಗು ಹುಟ್ಟಿದ 6 ತಿಂಗಳ ತನಕ ತಾಯಿ ಕಡ್ಡಾಯವಾಗಿ ಮಗುವಿಗೆ ಎದೆ ಹಾಲೂಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.