ಗೋಕರ್ಣ: ಪುರಾಣಪ್ರಸಿದ್ಧ ಕೋಟಿತೀರ್ಥ ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿ ದ್ದಾರೆ. ಕೋಟಿತೀರ್ಥದ ನೀರಿನಲ್ಲಿ ಪಾಚಿ, ಕಮಲದ ಬಳ್ಳಿಗಳು ಬೆಳೆದು ಉಪಯೋಗಿಸಲು ಅಸಾಧ್ಯವಾಗಿದೆ. ಇದು ಭಕ್ತರ ಧಾರ್ಮಿಕ ಭಾವನೆಗೂ ಧಕ್ಕೆ ತರುತ್ತಿದೆ. ಈಗಾಗಲೇ
ಬೆಂಗಳೂರಿನ ಖಾಸಗಿ ಸಂಸ್ಥೆಯವರು ಕೋಟಿತೀರ್ಥದ ನೀರನ್ನು ಪರೀಕ್ಷಿಸಿ ಸ್ನಾನಕ್ಕೆ ಅಯೋಗ್ಯ ಎಂದು ವರದಿ ನೀಡಿದ್ದಾರೆ.

ಈಗಾಗಲೇ ಅನೇಕ ಜನ ಕೋಟಿತೀರ್ಥದಲ್ಲಿ ಸಾವನ್ನಪ್ಪಿದ್ದು ಅಧಿಕಾರಿಗಳ ಕೂಡಲೇ ನೀರನ್ನು ಸ್ವಚ್ಛಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಪಾಯ ಸಂಭವಿಸಬಹುದು ಎಂಬ ಕಳವಳ ನಾಗರಿಕರಲ್ಲಿ ವ್ಯಕ್ತವಾಗುತ್ತಿದೆ.

ಅಷ್ಟೇ ಅಲ್ಲದೇ ಕೋಟಿತೀರ್ಥದ ನೀರಿನಲ್ಲಿ ಇದ್ದ ಮೊಸಳೆ ಅಪಾಯಕಾರಿಯಾಗಿ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಮನುಷ್ಯರ ಸಾವಿಗೂ ಕಾರಣವಾಗಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೋಟಿತೀರ್ಥದ ಸ್ವಚ್ಛತಾ ಕಾಮಗಾರಿಯನ್ನು ನಾಲ್ಕು ವರ್ಷಗಳ ಹಿಂದೆ ಕೈಗೊಳ್ಳಲಾಗಿತ್ತು. ಆದರೆ ಮಳೆಗಾಲಕ್ಕೆ ಮೊದಲು ಈ ಕಾಮಗಾರಿ ಪ್ರಾರಂಭಿಸಿದ್ದರಿಂದ ಮಳೆ ಬಂದು ಕಾಮಗಾರಿ ಅಪೂರ್ಣ ಗೊಂಡಿತ್ತು. ಕಾಮಗಾರಿ ಯನ್ನು ತ್ವರಿತ ರೀತಿಯಲ್ಲಿ ಪೂರ್ಣಗೊಳಿಸಲು ಒದ್ದೆ ಇದ್ದ ಕೆಸರಿನಲ್ಲಿ ರಾಡಿಗೆ ಮಣ್ಣು ತಂದು ಹಾಕಲಾಯಿತು. ಮಣ್ಣಿನ ಜೊತೆ ಕಮಲದ ಬೀಜಗಳು, ಮೊಸಳೆ ಮರಿಗಳೂ ಕೋಟಿತೀರ್ಥ ಸೇರುವಂತಾಗಿದೆ.

‘1983ರ ಅಷ್ಟಬಂಧದ ಸಮಯ ದಲ್ಲಿ ಮೊದಲ ಬಾರಿಗೆ ಕೋಟಿ ತೀರ್ಥದ ನೀರನ್ನು ಸ್ವಚ್ಛಗೊಳಿಸ ಲಾಗಿತ್ತು. ಆ ಸಂದರ್ಭದಲ್ಲಿ ಸ್ವಚ್ಛಗೊಳಿಸುವ ನೆಪದಲ್ಲಿ ಕೋಟಿತೀರ್ಥದ ನೀರು ಕೆಡದಂತೆ ಹಳಬರು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಜಲಶುದ್ಧ ರಾಸಾಯನಿಕ (ಒಂದು ಬಗೆಯ ಪಾದರಸ) ಹಾಗೂ ನೇರಲ ತುಂಡುಗಳನ್ನು ದೋಚಲಾಗಿತ್ತು. ಕಳೆದ ಸರ್ಕಾರದ ಅವಧಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದವರು ₨ 6 ಕೋಟಿ ವೆಚ್ಚದ ಯೋಜನೆಯೊಂದನ್ನು ರೂಪಿಸಿದ್ದರು. ಕೋಟಿತೀರ್ಥದ ವಾಸ್ತು ಸರಿ ಇಲ್ಲ ಎಂಬ ನೆಪವೊಡ್ಡಿ ಕೋಟಿತೀರ್ಥದ ಮೂಲಸ್ವರೂಪವನ್ನೇ ಬದಲಿಸುವ ಯೋಜನೆ ಇದಾಗಿತ್ತು. ಅಷ್ಟೇ ಅಲ್ಲದೇ ಪವಿತ್ರ ತೀರ್ಥದ ಮೇಲೆ ಶೌಚಾಲಯ ನಿರ್ಮಿಸಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಇರಾದೆಯೂ ಒಳಗೊಂಡಿತ್ತು. ಈ ಯೋಜನೆಯಿಂದ ತೀರ್ಥದ ಪ್ರಾವಿತ್ರ್ಯಕ್ಕೆ ಧಕ್ಕೆ ಬರಲಿದ್ದು, ಭಕ್ತರ ಧಾರ್ಮಿಕ ಭಾವನೆಗೆ ಹಾನಿ ಉಂಟಾಗಲಿದೆ ಎಂದು ಮನಗೊಂಡು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಈ ಯೋಜನೆ ಅಷ್ಟಕ್ಕೆ ನಿಲ್ಲುವಂತಾಯಿತು’ ಎಂದು ಗ್ರಾಮ ರಾಮ ಪಂಚಾಯ್ತಿ ಸದಸ್ಯ ಗಣಪತಿ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಆಗಬೇಕಾಗಿರುವುದು ಏನು?: ಕೋಟಿತೀರ್ಥದ ನೀರು ಕೆಡದಂತೆ ನೇರಲೆ ತುಂಡುಗಳನ್ನು, ನೀರಿನಲ್ಲಿಯ ಕಸವನ್ನೆಲ್ಲ ತಿನ್ನುವ ಜಾತಿಯ ಮೀನುಗಳನ್ನು ನೀರಿನಲ್ಲಿ ಬೆಳೆಯುವಂತೆ ಮಾಡ ಬೇಕು. ನೀರನ್ನು ಮತ್ತೆ ಹೊಲಸು ಮಾಡದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸೆ್ಯ ಮಹಾಲಕ್ಷ್ಮಿ ಭಡ್ತಿ ಹೇಳುತ್ತಾರೆ.

ಹೋರಾಟಕ್ಕೆ ಸಿದ್ಧತೆ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಅವರ ನಿರಾಸಕ್ತಿ ಎದ್ದು ಕಾಣುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಕೋಟಿತೀರ್ಥದ ಸ್ವಚ್ಛತೆ ಆಗ್ರಹಿಸಿ ಸಾರ್ವಜನಿಕರು ಇದೇ 9 ರಂದು ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿದ್ದಾರೆ.

ಉಸ್ತುವಾರಿ ಸಚಿವರಿಗೆ ಹಲವು ಬಾರಿ ಮನವಿ..
‘ನಾವು ಕೋಟಿತೀರ್ಥದ ಸ್ವಚ್ಛತೆಯ ಬಗ್ಗೆ ಅನೇಕ ಬಾರಿ ಪಂಚಾಯ್ತಿ ವತಿಯಿಂದ ಈಗಾಗಲೇ ಮೌಖಿಕವಾಗಿ ಹಾಗೂ ಪತ್ರದ ಮೂಲಕ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ, ಒಮ್ಮೆ ಪ್ರವಾಸೋದ್ಯಮ ಸಚಿವರು ಬಂದು ಉದ್ಘಾಟನೆ ನೆರವೇರಿಸಿದರೆ ನಾವು ಕೂಡಲೇ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ನಿರ್ಮಿತಿ ಕೇಂದ್ರದವರು ಹೇಳುತ್ತಿದ್ದಾರೆ. ಇಲ್ಲವಾದ್ದಲ್ಲಿ ನಾವೇ ಗ್ರಾಮ ಪಂಚಾಯ್ತಿ ವತಿಯಿಂದ ಕೋಟಿತೀರ್ಥ ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡುತ್ತೇವೆ’.
-ಮಂಜುನಾಥ ಜನ್ನು, ಅಧ್ಯಕ್ಷರು, ಗ್ರಾಮ ಪಂಚಾಯ್ತಿ ಗೋಕರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.