ಶನಿವಾರ, ಜನವರಿ 18, 2020
20 °C

ಸ್ನೂಕರ್: ವರ್ಷಾಗೆ ಟ್ರಿಪಲ್ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಬೆಂಗಳೂರಿನ ವರ್ಷಾ ಸಂಜೀವ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಚಾಂಪಿಯನ್‌ಷಿಪ್‌ನ ಜೂನಿಯರ್ ವಿಭಾಗದಲ್ಲಿ `ಟ್ರಿಪಲ್~ ಸಾಧನೆ ಮಾಡಿದ್ದಾರೆ.ಸೋಮವಾರ ನಡೆದ ಜೂನಿಯರ್ ಸ್ನೂಕರ್ ವಿಭಾಗದಲ್ಲಿ ವರ್ಷಾ ಚಾಂಪಿಯನ್ ಆದರು. ಇದಕ್ಕೂ ಮೊದಲು ಅವರು ಸಬ್ ಜೂನಿಯರ್ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಜೂನಿಯರ್ ಸ್ನೂಕರ್ ವಿಭಾಗದ ಫೈನಲ್‌ನಲ್ಲಿ ವರ್ಷಾ  26-73, 69-22, 66-41 (2-1) ಫ್ರೇಮ್‌ಗಳಿಂದ ಆಂಧ್ರಪ್ರದೇಶದ ಲಹಿರಿ ಎದುರು ಗೆದ್ದರು. ಆದರೆ ಜೂನಿಯರ್ ಬಿಲಿಯರ್ಡ್ಸ್ ವಿಭಾಗದಲ್ಲಿ ಸ್ವಲ್ಪದರಲ್ಲಿ ಚಾಂಪಿಯನ್ ಆಗುವ ಅವಕಾಶ ತಪ್ಪಿಸಿಕೊಂಡರು. ಫೈನಲ್‌ನಲ್ಲಿ ದೆಹಲಿಯ ಕೀರತ್ ಭಾಂದಾಲ್ ಎದುರು ಸೋಲು ಕಂಡರು.

ಪ್ರತಿಕ್ರಿಯಿಸಿ (+)