ಚಾಮರಾಜನಗರ: ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ರಸಹೀರುವ ಕೀಟ ಬಾಧೆ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಹತ್ತಿ ಬೆಳೆಗೆ ಈಗ ಒಂದರಿಂದ ಒಂದುವರೆ ತಿಂಗಳಾಗಿದೆ. ಮಳೆರಾಯ ಕೊಂಚ ಕರುಣೆ ತೋರಿರುವ ಪರಿಣಾಮ ಗಿಡಗಳು ನಳನಳಿಸುತ್ತಿವೆ. ಆದರೆ, ರಸಹೀರುವ ಕೀಟ ಬಾಧೆ ಕಾಣಿಸಿಕೊಂಡಿದ್ದು, ರೈತರು ಇಳುವರಿ ಕುಸಿತದ ಭೀತಿಯಲ್ಲಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಡಿ ಜಿಲ್ಲೆಯಲ್ಲಿ 1.65 ಲಕ್ಷ ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 8,000 ಹೆಕ್ಟೇರ್ ಪ್ರದೇಶ ದಲ್ಲಿ ಹತ್ತಿ ಬಿತ್ತನೆ ಮಾಡಿ 7,455 ಬೇಲ್ಸ್ ಹತ್ತಿ ಉತ್ಪಾದಿಸುವ ಗುರಿ ಹೊಂದ ಲಾಗಿದೆ. ಇಲ್ಲಿಯವರೆಗೆ 7,650 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ.

ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚಾಗಿ ಹತ್ತಿ ಬಿತ್ತನೆಯಾಗಿದೆ. ಆದರೆ, ರಸಹೀರುವ ಕೀಟಗಳ ಹಾವಳಿಗೆ ರೈತರು ದಿಕ್ಕೆಟ್ಟಿದ್ದಾರೆ. ಕಳೆದ ವರ್ಷ ಪೂರ್ವ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಹತ್ತಿ ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಕೊರತೆಯಿಂದ ಬೆಳೆ ನಷ್ಟ ಅನು ಭವಿಸಿದ್ದೆವು. ಈಗ ಕೀಟ ಬಾಧೆಗೆ ತತ್ತರಿಸುವಂತಾಗಿದೆ ಎನ್ನುವುದು ರೈತರ ಅಳಲು.

ಹತ್ತಿ ಬೆಳೆಗೆ ಮುಖ್ಯವಾಗಿ ಥ್ರಿಪ್ಸ್ ನುಸಿ ಕಾಟ ಹೆಚ್ಚು. ಇವು ಸೂಕ್ಷ್ಮ ಕೀಟಗಳಾಗಿದ್ದು, ಹಕ್ಕಿಗರಿಯಂತೆ ಮುಂದಿನ ರೆಕ್ಕೆ ಹೊಂದಿರುವ ಪ್ರೌಢ ಕೀಟಗಳು ಎಲೆಯ ಕೆಳಭಾಗದ ಅಂಗಾಂಶದಲ್ಲಿ ಕಿಡ್ನಿ ಆಕಾರದ ತತ್ತಿ ಇಡುತ್ತವೆ. ಎಲೆಯ ಕೆಳಭಾಗದಲ್ಲಿ ಇದ್ದುಕೊಂಡು ಎಲೆಗಳನ್ನು ಕುಕ್ಕಿ ಕುಕ್ಕಿ ಹೊರಬರುವ ರಸ ಹೀರುತ್ತವೆ. ಅಂತಹ ಎಲೆಗಳು ಚಿಬ್ಬುಗಟ್ಟಿದಂತಾಗಿ ಮುದುಡಿಕೊಳ್ಳುತ್ತವೆ. ಸಹ ಜವಾಗಿ ಸಸ್ಯದ ಬೆಳವಣಿಗೆ ಕುಂಠಿತವಾಗಲಿದೆ. ಇಳುವರಿ ಕುಸಿತ ಕಟ್ಟಿಟ್ಟಬುತ್ತಿ.

ಜತೆಗೆ, ಸಸ್ಯಹೇನು ಕೂಡ ಹತ್ತಿ ಬೆಳೆಗೆ ಕಾಡುವ ಕೀಟಗಳಾಗಿವೆ. ಬೆಳೆಯುತ್ತಿರುವ ಕುಡಿ, ಎಲೆಗಳ ಕೆಳಭಾಗ ಮತ್ತು ಮೊಗ್ಗುಗಳು ಈ ಕೀಡೆಗಳಿಗೆ ಆಶ್ರಯ ತಾಣ. ಮೃದುವಾದ, ಹಸಿರುಮಿಶ್ರಿತ ಕಂದು ಬಣ್ಣದ ಈ ಹೇನುಗಳು ಗುಂಪುಗುಂಪಾಗಿ ಕಂಡುಬರುತ್ತವೆ. ರಸ ಹೀರುವುದರಿಂದ ಸಸಿಗಳು ಬಾಡಿದಂತಾಗಿ ಬೆಳವಣಿಗೆ ಕುಂಠಿತವಾಗಲಿದೆ. ಅಂತಹ ಸಸಿಗಳ ಮೇಲೆ ಕಪ್ಪುಬಣ್ಣದ ಶಿಲೀಂಧ್ರ ಬೆಳೆಯುತ್ತದೆ. ಬಾಧೆ ಹೆಚ್ಚಾದ ವೇಳೆ ಸಸಿಗಳು ಸಾಯುತ್ತವೆ.

ಹಸಿರು ಜಿಗಿಹುಳು ಕೂಡ ಹತ್ತಿ ಬೆಳೆಗೆ ಮಾರಕವಾಗಿದೆ. ತಿಗಣೆ ಜಾತಿಗೆ ಸೇರಿದ ಹಸಿರು ಬಣ್ಣದ ಈ ಕೀಟ ರಸ ಹೀರುತ್ತ ತನ್ನ ವಿಷಕಾರಕ ಜೊಲ್ಲನ್ನು ಎಲೆಗಳ ಕೋಶಗಳಲ್ಲಿ ಸ್ರವಿಸುತ್ತದೆ. ಇದರಿಂದ ಎಲೆಗಳು ಅಂಚಿನಿಂದ ಹಳದಿಯಾಗುತ್ತಾ ಬಂದು ನಂತರ ಕೆಂಪು ವರ್ಣಕ್ಕೆ ತಿರುಗುತ್ತವೆ. ಎಲೆಗಳು ಮುರುಟಿದಂತಾಗಿ ಬಿರುಸಾಗುತ್ತವೆ. ಗಿಡಗಳು ಸುಟ್ಟಂತೆ ಕಂಡುಬಂದು ಹತ್ತಿ ಇಳುವರಿ ಸಾಕಷ್ಟು ಕಡಿಮೆಯಾಗಲಿದೆ.

ಬಿಳಿನೊಣ ಸಹ ಹತ್ತಿ ಬೆಳೆಗೆ ಕಂಟಕವಾಗಿದೆ. ನೊಣದಂತೆ ಕಾಣುವ ಹೇನಿನ ಜಾತಿಗೆ ಸೇರಿದ ಈ ಕೀಟದ ಮೈತುಂಬ ಬಿಳಿಬಣ್ಣದ ಮೇಣದಂತಹ ಹುಡಿ ಇರುತ್ತದೆ. ಪ್ರೌಢ ಕೀಟಗಳು ಹಾಗೂ ಮರಿಗಳು ಸತತವಾಗಿ ರಸ ಹೀರುತ್ತವೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಸಸ್ಯದ ಬೆಳವಣಿಗೆ ಕುಂಠಿತಗೊಂಡು ಮೊಗ್ಗು, ಕಾಯಿಗಳು ಉದುರುತ್ತವೆ. ಕಾಯಿಗಳು ಇರುಕಲಾಗಿ ಒಡೆಯುತ್ತವೆ.

ಕಾಂಡ ಕೊರೆಯುವ ಮೂತಿ ಹುಳು: ಇತ್ತೀಚೆಗೆ ಹತ್ತಿ ಬೆಳೆಗೆ ಈ ಕೀಟ ಬಾಧೆ ಹೆಚ್ಚುತ್ತಿದೆ. ಬೆಳೆಯುತ್ತಿರುವ ಹತ್ತಿ ಗಿಡಗಳು ಮತ್ತು ಕಾಯಿ ಹಿಡಿದ ಟೊಂಗೆಗಳು ಈ ಕೀಟದ ಬಾಧೆಯಿಂದ ಮುರಿದು ಬೀಳುತ್ತವೆ.

ಚುಕ್ಕೆ ಕಾಯಿಕೊರಕ: ಚುಕ್ಕೆ ಕಾಯಿಕೊರಕ ಪತಂಗದ ಗಾತ್ರದಷ್ಟು ಚಿಕ್ಕದು. ಮುಂದಿನ ರೆಕ್ಕೆಗಳು ಹಸಿರು, ನಸು ಹಳದಿಬಣ್ಣದ ರೆಕ್ಕೆಗಳ ಮೇಲೆ ಹಸಿರು ಬಣ್ಣದ ಗೀರು ಇರುತ್ತದೆ. ಹೆಣ್ಣು ಪತಂಗ ತಿಳುನೀಲಿ ಬಣ್ಣದ 300ರಿಂದ 400 ಮೊಟ್ಟೆಗಳನ್ನು ಬಿಡಿ ಬಿಡಿಯಾಗಿ ಎಲೆ, ಕುಡಿ, ಮೊಗ್ಗು, ಕಾಯಿಗಳ ಮೇಲೆ ಇಡುತ್ತದೆ.

ಮೂರು- ನಾಲ್ಕು ದಿನಗಳ ಕಾವಿನ ನಂತರ ಹೊರಬಿದ್ದ ಕೀಡೆಗಳು ಕಂದುಬಣ್ಣದ ದೇಹ ಹೊಂದಿರುತ್ತವೆ. ಮೈಮೇಲೆ ಬಿಳಿಗೆರೆ, ಚುಕ್ಕೆ ಕಂಡುಬರುತ್ತವೆ. ಕೀಟಗಳು ಬೆಳೆಯುತ್ತಿರುವ ಕುಡಿಗಳನ್ನು ಕೊರೆದು ಕಾಂಡದ ಒಳಗೆ ಸೇರಿ ಕೊರೆಯುತ್ತವೆ. ಇದರಿಂದ ಕುಡಿಗಳು ಬಾಡಿದಂತಾಗಿ ಗೋಣು ಮುರಿದು ಬೀಳುತ್ತದೆ. ಜತೆಗೆ, ಮೊಗ್ಗು, ಎಳೆಕಾಯಿ ತಿನ್ನಲು ಪ್ರಾರಂಭಿಸಿದಾಗ ಇವುಗಳು ಉದುರುವುದು ಕಂಡುಬರುತ್ತದೆ. ಬೆಂಡೆ ಗಿಡ ಈ ಕೀಡೆಗೆ ಬಹು ಇಷ್ಟವಾದ ಆಹಾರ.

`ಪ್ರಸ್ತುತ ಜಿಲ್ಲೆಯ ವಿವಿಧೆಡೆ ರೈತರು ಹತ್ತಿ ಬೆಳೆದಿದ್ದಾರೆ. ಕೆಲವೆಡೆ ಹತ್ತಿ ಬೆಳೆಗೆ ರಸಹೀರುವ ಕೀಟ ಬಾಧೆ ಕಾಣಿಸಿಕೊಂಡಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೀಟ ಬಾಧೆ ತಡೆಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆಯಬಹುದು. ಪ್ರಾರಂಭಿಕ ಹಂತದಲ್ಲಿಯೇ ಕೀಟ ಬಾಧೆ ಹತೋಟಿಗೆ ತಂದರೆ ಇಳುವರಿ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ತಜ್ಞ ಡಾ.ಶಿವರಾಯ್ ನಾವಿ `ಪ್ರಜಾವಾಣಿ'ಗೆ ತಿಳಿಸಿದರು.

ಹತೋಟಿ ಕ್ರಮ ಹೇಗೆ?
* ಅನುವಂಶಿಕವಾಗಿ ಕೀಟ ನಿರೋಧಕ ಶಕ್ತಿ ಹೊಂದಿರುವ ತಳಿ ಬಳಸಬೇಕು

* ಬಿತ್ತನೆಬೀಜವನ್ನು ಇಮಿಡಾಕ್ಲೊಪ್ರಿಡ್ 70 ಡಬ್ಲ್ಯೂಎಸ್ನಲ್ಲಿ (10 ಗ್ರಾಂ/ ಪ್ರತಿ ಕಿಲೋ ಬೀಜಕ್ಕೆ) ಉಪಚರಿಸಿ ಬಿತ್ತನೆ ಮಾಡಿದ ನಲವತ್ತು ದಿನದವರೆಗೆ ರಸಹೀರುವ ಕೀಟಗಳನ್ನು ಹತೋಟಿ ಮಾಡಬಹುದು. ಉಪಕಾರಿ ಕೀಟಗಳನ್ನು ಸಂರಕ್ಷಿಸಬಹುದು.

* ಹತ್ತಿ ಗಿಡಗಳ ಸಂಖ್ಯೆ ಕಾಪಾಡಿಕೊಂಡು 1:20ರ ಅನುಪಾತದಡಿ ಬೆಂಡೆ ಗಿಡಗಳನ್ನು ಹತ್ತಿಯ ಸಾಲು ಮತ್ತು ಬದುವಿನಲ್ಲಿ ಹತ್ತಿಯ ಜತೆಗೆ ಬಿತ್ತಬೇಕು. ಬೆಂಡೆ ಗಿಡಗಳ ಮೇಲೆ ಆಕರ್ಷಿಸಲ್ಪಟ್ಟ ಕಾಂಡ ಕೊರೆಯುವ ದುಂಬಿಗಳನ್ನು ಮುಂಜಾನೆ ವೇಳೆ ಕೈಯಿಂದ ಆರಿಸಿ ನಿರ್ವಹಿಸಬೇಕು. ಬೆಂಡೆ ಕಾಯಿಗಳನ್ನು 4ರಿಂದ 5 ದಿನಕೊಮ್ಮೆ ಕಟಾವು ಮಾಡಬೇಕು. ಆಗ ಹತ್ತಿ ಮೇಲೆ ಕಾಯಿಕೊರೆಯುವ ಕೀಟಗಳ ಮೊಟ್ಟೆ ಮತ್ತು ಕೀಡೆಗಳ ಒತ್ತಡ ಕಡಿಮೆಯಾಗಲಿದೆ

* ಬೆಳೆಯು 45ರಿಂದ 50 ದಿನದ ಹಂತದಲ್ಲಿ ಇರುವಾಗ ರಸಹೀರುವ ಕೀಟ ಬಾಧೆ ಕಂಡುಬಂದರೆ ಅಸಿಟಾಮಿಪ್ರಿಡ್ 20 ಎಸ್.ಪಿ. 0.15 ಗ್ರಾಂ. ಅಥವಾ ಇಮಿಡಾಕ್ಲೊಪ್ರಿಡ್ 200 ಎಸ್.ಎಲ್. 0.3ಮಿ.ಲೀ/ 1 ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು

* 60ರಿಂದ 65 ದಿನದ ಬೆಳೆಗೆ ಬೇವುಜನ್ಯ ಕೀಟನಾಶಕಗಳಾದ ಶೇ. 5ರಷ್ಟು ಬೇವಿನ ಬೀಜದ ಕಷಾಯ ಅಥವಾ ಬೇವು ಆಧಾರಿತ ಕೀಟನಾಶಕವನ್ನು ಶೇ. 0.5ರ ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು

* ಬೆಳೆಯು 80ರಿಂದ 90 ದಿನದ ಅವಧಿಯಲ್ಲಿದ್ದ ವೇಳೆ ಸಸ್ಯದ ಕುಡಿ ಕತ್ತರಿಸಬೇಕು. ಇದರಿಂದ ರಸಹೀರುವ ಕೀಟಗಳ (ಸಸ್ಯಹೇನು) ಮತ್ತು ಕಾಯಿಕೊರಕದ ತತ್ತಿಗಳನ್ನು ಕೂಡ ತೆಗೆದಂತಾಗುವುದರಿಂದ ಬೆಳೆಗೆ ಆಗಬಹುದಾದ ಹಾನಿ ತಪ್ಪಿಸಬಹುದು.

* ಬೆಳೆಯು ಎಂಬತ್ತು ದಿನದ ನಂತರ ಆಯ್ದ ಕೀಟನಾಶಕಗಳಾದ ಫೈರಿಥ್ರ್ಯಾಡ ಕೀಟನಾಶಕ (0.5 ಮಿಲಿ), ಥೈಯೋಡಿಕಾರ್ಬ (1ಗ್ರಾಂ.) ಪ್ರತಿ ಲೀಟರ್ಗೆ ಬೆರೆಸಿ ಕೀಡೆಗಳ ಒತ್ತಡ ಗಮನಿಸಿ ಸಿಂಪಡಣೆ ಮಾಡಬೇಕು

* ಹೂಬಿಟ್ಟು ಕಾಯಿಗಳು ಬಲಿಯುವ ಹಂತದಲ್ಲಿ ಹಸಿರು ಜಿಗಿಹುಳುವಿನ (ಜಾಸಿಡ್ಸ್) ಬಾಧೆ ಕಂಡುಬಂದರೆ ಅಸಿಟಾಮಿಪ್ರಿಡ್ 20 ಎಸ್.ಪಿ 0.15 ಗ್ರಾಂ. ಅಥವಾ ಇಮಿಡಾಕ್ಲೋಪ್ರಿಡ್ 200 ಎಸ್.ಎಲ್. ಕೀಟನಾಶಕವನ್ನು 3 ಮಿಲಿ/ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.