ಮಂಗಳವಾರ, ಏಪ್ರಿಲ್ 13, 2021
32 °C

ಹಳೇ ಪದ್ಧತಿ ವಿರುದ್ಧ ಸ್ಥಾನಿಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ಸ್ಥಾನಿಕರು ವೈರಮುಡಿ ಕಿರೀಟ ತರುವ ಸಂಬಂಧ ದೇವಾ ಲಯದ ಕಾನೂನಿನಂತೆ ನಡೆದುಕೊಳ್ಳಬೇಕು ಎಂದು ಮುಜರಾಯಿ ಸಚಿವ ವಿ.ಎಸ್. ಆಚಾರ್ಯ ನೀಡಿದ ಆದೇಶ ವನ್ನು ಅಧಿಕಾರಿಗಳು ಲೆಕ್ಕಿಸದೇ ಹಳೆ ಪದ್ಧತಿಯನ್ನೇ ಮುಂದುವರೆಸಿದ್ದಾರೆ ಎಂದು 4ನೇ ಸ್ಥಾನಿಕ ಜ್ಯೋತಿ ಶ್ರೀನಿವಾಸ ನರಸಿಂಹನ್ ಗುರೂಜಿ ಆರೋಪಿಸಿದ್ದಾರೆ.

ಇದು ದೇವಾಲಯದ ಕಾನೂನು ನಿಯಮ ಉಲ್ಲಂಘನೆಗೆ  ಮತ್ತೆ ಬೆಂಬಲ ನೀಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.ಈ ಸಂಬಂಧ ಮೇಲುಕೋಟೆಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಸ್ಥಾನಿಕರು ಖಜಾನೆ ಯಿಂದ ದೇವಾಲಯಕ್ಕೆ ಕಿರೀಟ ತರುವ ಸಂಬಂಧ ಸೂಕ್ತ ಆದೇಶ ನೀಡ ಬೇಕೆಂದು ಸಚಿವ ಆಚಾರ್ಯ ಅವರು ಮುಜರಾಯಿ ಜಿಲ್ಲಾಧಿಕಾರಿಗಳಿಗೆ ಮಾ.10 ರಂದೇ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯು ಮುಜರಾಯಿ ಸಹಾಯಕರಿಗೆ 11 ರಂದು ಸಚಿವರ ಆದೇಶ ತಲುಪಿಸಿದೆ. ಇದರ  ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಮತ್ತೆ ಒಂದನೇ ಸ್ಥಾನಿಕರನ್ನೇ ಕಿರೀಟ ತರಲು ನಿಯೋ ಜಿಸಿ ಸಂಪ್ರದಾಯ ಉಲ್ಲಂಘನೆಯನ್ನು ಪೋಷಣೆ ಮಾಡಿದ್ದಾರೆ ಎಂದರು.ವಾದವೇನು? ಚಲುವ ನಾರಾ ಯಣಸ್ವಾಮಿ ದೇವಾಲಯದಲ್ಲಿ ನಾಲ್ಕು ಸ್ಥಾನಿಕರ ಹುದ್ದೆ ಇದ್ದು ಜಾತ್ರಾ ಅವಧಿಯಲ್ಲಿ ಸರದಿ ಅನುಸರಿಸಿ ಖಜಾನೆಯಿಂದ ಕಿರೀಟ ತಂದು ಉತ್ಸವ ನಿರ್ವಹಿಸುವ ಸಂಪ್ರದಾಯದ ಹಕ್ಕನ್ನು ನಾಲ್ಕೂ ಸ್ಥಾನಿಕರಿಗೂ ನೀಡ ಲಾಗಿದೆ. ಪ್ರತಿ ವರ್ಷ ಅಧಿಕಾರಿಗಳು ಒಬ್ಬ ಸ್ಥಾನಿಕರನ್ನು ಸರದಿಯಂತೆ ನಿಯೋಜಿಸಲು ಆದೇಶ ನೀಡಬೇಕಾ ಗಿದೆ. ಇದನ್ನು ಉಲ್ಲಂಘಿಸಿ ಹಲವು ವರ್ಷಗಳಿಂದ ಯಾವುದೇ ಆದೇಶ ಮಾಡದೆ ಕಿರೀಟ ತರುವ ಸಂಪ್ರ ದಾಯಕ್ಕೆ ತಿಲಾಂಜಲಿ ನೀಡಿ ಒಂದನೇ ಸ್ಥಾನಿಕರನ್ನೇ ಖಜಾನೆಯಿಂದ  ಕಿರೀಟ ತರಲು ಕಳುಸಲಾಗುತ್ತಿದೆ ಎಂದರು.ಆಡಳಿತ ಸಮಿತಿಯ ಈ ತೀರ್ಮಾನ ವನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಗಳಲ್ಲಿ ಒಂದನೆ ಸ್ಥಾನಿಕರು ಸಲ್ಲಿಸಿದ ಮೇಲ್ಮನವಿ ವಜಾ ಆದ ಹಿನ್ನಲೆಯಲ್ಲಿ ಮಂಡ್ಯ ಡಿಸಿ ನಾಲ್ಕನೇ ಸ್ಥಾನಿಕ ನಾಗರಾಜ ಅಯ್ಯಂಗಾರ್ ಅವರಿಗೆ  ಸರದಿಯಂತೆ ಕರ್ತವ್ಯ ನಿರ್ವಹಿಸಲು ಮೂರು ಬಾರಿ ಆದೇಶ ನೀಡಿದ್ದರು. ಆದರೆ, ಕೊನೆ ಕ್ಷಣಗಳಲ್ಲಿ ರಾಜಕೀಯ ಪ್ರಭಾವದಿಂದ ಆದೇಶ ಜಾರಿಯಾಗ ಲಿಲ್ಲ ಎಂದರು.ಇದೀಗ ಯಾವ ನ್ಯಾಯಾಲಯ ಗಳಲ್ಲೂ ಪ್ರಕರಣ ಇಲ್ಲದ  ಕಾರಣ ಮುಜರಾಯಿ ಸಚಿವರಾದ ಆಚಾರ್ಯ ಜಿಲ್ಲಾಧಿಕಾರಿಗಳಿಗೆ ಸೂಕ್ತ ಆದೇಶ ಹೊರಡಿಸಿ ಎಂದಿದ್ದರು. ಹೀಗಿದ್ದರೂ ಅಧಿಕಾರಿಗಳು ಈ ಹಿಂದೆ  ನ್ಯಾಯಾ ಲಯಗಳು ಮಾಡಿರುವ  ಆದೇಶ ಪರಿಶೀಲಿಸದೇ ದೇವಾಲಯದ ರೂಢ ಮೂಲ ಪದ್ಧತಿ ಹಾಗೂ ಆಡ ಳಿತ ಸಮಿತಿಯ ತೀರ್ಮಾನ ಲೆಕ್ಕಿಸದೇ ಮತ್ತೆ ಮುಜರಾಯಿ ಜಿಲ್ಲಾಧಿಕಾರಿ ಗಳು ಏಕಪಕ್ಷೀಯವಾಗಿ ವರ್ತಿಸಿ ಒಂದನೇ ಸ್ಥಾನಿಕರನ್ನೇ ವೈರ ಮುಡಿ ಕಿರೀಟ ತರಲು ನಿಯೋಜಿಸಿ ರುವುದು ಕಾನೂನು ಬಾಹೀರ ಕ್ರಮ ಎಂದರು.ಲೋಕಾಯುಕ್ತಕ್ಕೆ ಪ್ರಕರಣ: ಆರಂಭದಿಂದ ಈವರೆಗೆ ಆಗಿರುವ ಅಧಿಕಾರ ದುರಪಯೋಗ ಮತ್ತು ಕರ್ತವ್ಯ ಲೋಪವನ್ನು ಪಟ್ಟಿ ಮಾಡಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡು ವಂತೆ ಲೋಕಾಯುಕ್ತ ನ್ಯಾಯಾಲಯ ದಲ್ಲಿ ಮೊಕದ್ದಮೆ ದಾಖಲಿಸಲಾಗು ವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.