ಸೋಮವಾರ, ಸೆಪ್ಟೆಂಬರ್ 16, 2019
21 °C

ಹಾಕಿ: ಫ್ಲೈಯಿಂಗ್ ಕ್ಲಬ್‌ಗೆ ಸುಲಭ ವಿಜಯ

Published:
Updated:

ಬೆಂಗಳೂರು:  ಫ್ಲೈಯಿಂಗ್ ಹಾಕಿ ಕ್ಲಬ್ ಹಾಗೂ ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಜಯಗಳಿಸಿ ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು.



ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ  ಕ್ರೀಡಾಂಗಣದಲ್ಲಿ  ಶನಿವಾರ ನಡೆದ ಪಂದ್ಯದಲ್ಲಿ ಫ್ಲೈಯಿಂಗ್ ಹಾಕಿ ಕ್ಲಬ್ ತಂಡ 5-2 ಗೋಲುಗಳಿಂದ ಬಿಇಎಲ್ ತಂಡವನ್ನು ಪರಾಭವಗೊಳಿಸಿತು. ವಿರಾಮದ ವೇಳೆಗೆ 2-0 ಗೋಲುಗಳಿಂದ ಮುಂದಿದ್ದ ವಿಜಯಿ ತಂಡದ ರಾಧೇಶ್, ಮಹೇಶ್ವರನ್ (3), ಹರಿಪ್ರಸಾದ್ ಹಾಗೂ ಎದುರಾಳಿ ತಂಡದ ರೇಣುಕಾ ಪ್ರಸಾದ್, ಪ್ರಕಾಶ್ ಗೋಲು ತಂದಿತ್ತರು.



ಇದಕ್ಕೆ ಮೊದಲು ನಡೆದ ಇದೇ ಲೀಗ್ ಇನ್ನೊಂದು ಪಂದ್ಯದಲ್ಲಿ ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ 3-1 ಗೋಲುಗಳಿಂದ ಕೂರ್ಗ್ ಬ್ಲೂಸ್ ಹಾಕಿ ಕ್ಲಬ್ ಮೇಲೆ ಅರ್ಹ ಜಯ ಪಡೆಯಿತು. ಸಿನರ್ಜಿ ತಂಡದ ಶೈಲೇಶ್  (2), ವೀರಣ್ಣ ಹಾಗೂ ಎದುರಾಳಿ ತಂಡದ ಎಸ್,ಕೆ. ಟೇಟೆ ಚೆಂಡನ್ನು ಗುರಿಮುಟ್ಟಿಸಿದರು.



ಭಾನುವಾರ ಮಧ್ಯಾಹ್ನ 2-30ಕ್ಕೆ ಫ್ಲೈಯಿಂಗ್ ಹಾಕಿ ಕ್ಲಬ್-ಡಿವೈಎಸ್‌ಎಸ್ `ಎ~ ಅನಂತರ ಪೋಸ್ಟಲ್-ಐಟಿಐ ನಡುವೆ ಪಂದ್ಯ ನಡೆಯಲಿದೆ.

 

Post Comments (+)