ಬೆಂಗಳೂರು: ಲೆನ್ ಅಯ್ಯಪ್ಪ ಗಳಿಸಿದ ಮೂರು ಗೋಲುಗಳ ನೆರವಿನಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯತ್ತಿರುವ ಕೆಎಸ್ಎಚ್ಎ ಆಶ್ರಯದ ‘ಒಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್ಷಿಪ್ನಲ್ಲಿ ಗೆಲುವು ಸಾಧಿಸಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ ತಂಡ 3-2 ಗೋಲುಗಳಿಂದ ನಾಮಧಾರಿ ಇಲೆವನ್ ತಂಡವನ್ನು ಮಣಿಸಿ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತು. ಲೆನ್ ಅಯ್ಯಪ್ಪ (25, 61, 70) ಮೂರು ಗೋಲುಗಳನ್ನು ಗಳಿಸಿ ಏರ್ ಇಂಡಿಯಾ ತಂಡದ ಗೆಲುವಿನ ರೂವಾರಿಯೆನಿಸಿದರು. ನಾಮಧಾರಿ ಇಲೆವೆನ್ ತಂಡದ ಪರ ಅಮೊಲಕ್ ಸಿಂಗ್ (7), ಹರ್ದೀಪ್ ಸಿಂಗ್ (37) ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರ ತಗ್ಗಿಸಿದರು.
ಇನ್ನೊಂದು ಪಂದ್ಯದಲ್ಲಿ ಎಸ್ಎಐ ತಂಡ 4-1ರಲ್ಲಿ ಎಎಸ್ಸಿ ತಂಡವನ್ನು ಮಣಿಸಿತು. ಐಒಸಿಎಲ್ 5-3ರಲ್ಲಿ ಆರ್ಮಿ ರೆಡ್ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.