ಮಾರಿಷಸ್ನ ರಚನಾ ಬೆಂಗಳೂರಿಗೆ ಬಂದಿದ್ದು ಹನ್ನೆರಡು ವರ್ಷಗಳ ಹಿಂದೆ. ಕ್ರೈಸ್ಟ್್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿಧರೆ ಆಗಿರುವ ಅವರು ಸಂಗೀತದ ಗಂಧವನ್ನು ಉಸಿರಾಡುತ್ತಲೇ ಬೆಳೆದರು.

ರಚನಾ ಅವರ ಚಿಕ್ಕಪ್ಪ ಸಿತಾರ್ ನುಡಿಸುತ್ತಾರೆ. ತಂದೆ ತಬಲಾ ವಾದಕರು. ಸಂಗೀತದ ವಾತಾವರಣದಲ್ಲಿ ಬೆಳೆದ ರಚನಾ ಅವರಿಗೂ ಸಹಜವಾಗಿ ಅದರಲ್ಲಿ ಅಭಿರುಚಿ ಬೆಳೆಯಿತು.

ಮಾರಿಷಸ್ನಲ್ಲಿದ್ದರೂ ರಚನಾ ತಮ್ಮ ಸಂಗೀತ ಬದುಕಿನ ಆರಂಭಿಕ ಶಿಕ್ಷಣವನ್ನು ಪಡೆದುಕೊಂಡಿದ್ದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ. ಕಾಲೇಜು ದಿನಗಳಲ್ಲಿಯೂ ಹಿಂದಿ ಹಾಡುಗಳನ್ನು ಹಾಡಿಯೇ ಸಂಗೀತಪ್ರಿಯರ ಮನಗೆದ್ದಿದ್ದರು.

‘ಸಂಗೀತದ ಜತೆಜತೆಗೆ ಬೆಳೆದವಳಾದರೂ ಬೆಂಗಳೂರಿಗೆ ಬಂದ ಮೇಲೆಯೇ ನಾನು ಪಾಶ್ಚಾತ್ಯ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡಿದ್ದು’ ಎನ್ನುತ್ತಾರೆ ರಚನಾ. ಬೆಂಗಳೂರಿನ ಮ್ಯೂಸಿಕ್ ಟ್ರೆಂಡ್ ಅವರನ್ನು ಪಾಶ್ಚಾತ್ಯ ಸಂಗೀತದತ್ತ ಒಲವು ಬೆಳೆಸಿಕೊಳ್ಳುವಂತೆ ಮಾಡಿತಂತೆ.

‘ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ, ಹಿಂದಿ ಹಾಡುಗಳಿಗೆ ಅಷ್ಟೊಂದು ಬೇಡಿಕೆಯಿಲ್ಲ. ಪಾಶ್ಚಾತ್ಯ ಸಂಗೀತಕ್ಕೆ ಸಾಕಷ್ಟು ಬೇಡಿಕೆ ಇತ್ತು. ಯುವಕರಿಗೆ ಇಂಗ್ಲಿಷ್ ಪಾಪ್, ರಾಕ್ ಸಂಗೀತಗಳು ಇಷ್ಟವಾಗುತ್ತವೆ. ಪಬ್ಗಳಲ್ಲಿ, ರೆಸ್ಟೊರೆಂಟ್ಗಳಲ್ಲಿಯೂ ಈ ಸಂಗೀತಕ್ಕೆ ಬೇಡಿಕೆ ಇದೆ. ಇದನ್ನು ಗಮನಿಸಿ ನಾನೂ ಅತ್ತ ವಾಲಿದೆ’ ಎಂಬುದು ಅವರ ವಿವರಣೆ.

ರಚನಾ ಬೆಂಗಳೂರಿನ ಜನಪ್ರಿಯ ಕ್ಯಾರಿಯೋಕೆ ಜಾಕಿಗಳಲ್ಲಿ ಒಬ್ಬರು. ಕಳೆದ ಒಂದು ವರ್ಷದಿಂದ ಅವರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
‘ನನಗೆ ಹಾಡುವುದೆಂದರೆ ತುಂಬ ಇಷ್ಟ. ಆಗೀಗ ಸ್ನೇಹಿತರೊಂದಿಗೆ ಕ್ಯಾರಿಯೋಕೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ.

ಅಲ್ಲಿ ಎಲ್ಲರೊಂದಿಗೆ ಹಾಡುವುದು ಮಜಾ ಕೊಡುತ್ತಿತ್ತು. ಎಲ್ಲರನ್ನೂ ಹಾಡಿಸುವ ಕ್ಯಾರಿಯೋಕೆ ಜಾಕಿಯ ಕೆಲಸದ ಕುರಿತು ಕುತೂಹಲ ಮೂಡಿತು’ ಎಂದು ಈ ವೃತ್ತಿಯ ಕುರಿತು ಆಸಕ್ತಿ ಕುದುರಿಸಿಕೊಂಡ ಬಗೆಯನ್ನು ಅವರು ವಿವರಿಸುತ್ತಾರೆ.

ಸಂಗೀತದ ಜ್ಞಾನ ಇದ್ದುದರಿಂದ ಅವರಿಗೆ ಕ್ಯಾರಿಯೋಕೆ ವೃತ್ತಿಯ ಕೌಶಲಗಳನ್ನು ರೂಢಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಇದೇ ಸಮಯಕ್ಕೆ ಚರ್ಚ್್ ಸ್ಟ್ರೀಟ್ನ ರೆಸ್ಟೊರೆಂಟ್ ಒಂದರಲ್ಲಿ ಕ್ಯಾರಿಯೋಕೆ ಜಾಕಿ ಆಗುವ ಅವಕಾಶ ಒದಗಿಬಂದಿದ್ದು ಅವರ ಯಶಸ್ಸಿನ ಮೊದಲ ಮೆಟ್ಟಿಲಾಯಿತು. ಅಲ್ಲಿಂದ ರಚನಾ ಅವರಿಗೆ ಕ್ಯಾರಿಯೋಕೆ ಜಾಕಿ ಆಗಿ ಅವಕಾಶದ ಬಾಗಿಲುಗಳು ತೆರೆದುಕೊಂಡವು.

ತಾವು ಕೆ.ಜೆ. ಆಗುವುದಕ್ಕೂ ಮುನ್ನವೇ ಅವರು ಕೆ.ಜೆ. ನವೀನ್ ಅವರ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ತಾವಿಬ್ಬರೂ ಒಟ್ಟಿಗೆ ಕಾರ್ಯಕ್ರಮ ನೀಡಿದರೆ ಇನ್ನೂ ಚೆನ್ನಾಗಿರುತ್ತದಲ್ಲವೆ ಎಂಬ ಆಲೋಚನೆ ಅವರಲ್ಲಿ ಮೊಳೆತು ಈ ಪ್ರಸ್ತಾವನೆಯನ್ನು ನವೀನ್ ಮುಂದಿಟ್ಟರು. ನವೀನ್ ಕೂಡ ಸಂತೋಷದಿಂದಲೇ ರಚನಾ ಅವರ ಮಾತನ್ನು ಒಪ್ಪಿಕೊಂಡರು.

ಆರಂಭದಲ್ಲಿ ಇಬ್ಬರೂ ಜತೆಗೂಡಿ ಪ್ರಯೋಗಾತ್ಮಕವಾಗಿ ಮಾಡಿದ ಒಂದೆರಡು ಕಾರ್ಯಕ್ರಮಗಳು ಸಾಕಷ್ಟು ಯಶಸ್ವಿಯಾಯಿತು. ಅಲ್ಲಿಂದ ಈ ಜೋಡಿ ಹಿಂತಿರುಗಿ ನೋಡಿದ್ದೇ ಇಲ್ಲ.

ಮಹಾನಗರದ ಗಡಿ ದಾಟಿ ಚೆನ್ನೈ, ಗೋವಾ ಹೀಗೆ ಅನೇಕ ಸ್ಥಳಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕ್ಯಾರಿಯೋಕೆ ಜಾಕಿ ಕೆಲಸ ರಚನಾ ಅವರಿಗೆ ಸವಾಲಿನ ವೃತ್ತಿ ಎಂದು ಅನಿಸಿಯೇ ಇಲ್ಲ. ‘ಇದೊಂದು ಖುಷಿಪಡುವ ಕೆಲಸ. ನನ್ನೊಂದಿಗೆ ಇತರರನ್ನು ಖುಷಿಗೊಳಿಸುವ ಕೆಲಸ’ ಎಂದು ಅವರು ತಮ್ಮ ವೃತ್ತಿಯನ್ನು ವ್ಯಾಖ್ಯಾನಿಸುತ್ತಾರೆ.

‘ಜನರಿಗೆ ಬೋರ್ ಆಗದ ಹಾಗೆ ನೋಡಿಕೊಳ್ಳಬೇಕು. ಜನರ ಮೂಡ್ಗೆ ಅನುಗುಣವಾಗಿ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜನಸಮೂಹದ ನಾಡಿಮಿಡಿತವನ್ನು ಅರಿತುಕೊಳ್ಳುವುದೇ ಕೆ.ಜೆ. ಯಶಸ್ಸಿನ ಸೂತ್ರ. ಅದು ಸವಾಲು ಎಂದು ನನಗನ್ನಿಸಿಲ್ಲ’ ಎನ್ನುವ ರಚನಾ ‘ನಾನು ಈ ವಿಷಯದಲ್ಲಿ ಅದೃಷ್ಟವಂತೆ’ ಎನ್ನುತ್ತಾರೆ.

‘ಈ ಕ್ಷೇತ್ರದಲ್ಲಿರುವ ಹಲವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರೆಲ್ಲ ಎಷ್ಟೋ ವರ್ಷಗಳಿಂದ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ ಯಶಸ್ಸು ಅವರ ಬಳಿ ಸುಳಿದಿಲ್ಲ. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ನನಗೊಂದು ಒಳ್ಳೆಯ ತಂಡ ಸಿಕ್ಕಿದೆ. ಒಂದು ವರ್ಷದಲ್ಲಿ ನನಗೇ ಅಚ್ಚರಿ ಆಗುವಷ್ಟು ಉತ್ತಮ ಅವಕಾಶಗಳು ಸಿಕ್ಕಿವೆ. ನಾನು ಮತ್ತು ನವೀನ್ ಜತೆಯಾಗಿ ನಡೆಸಿಕೊಡುವ ಕ್ಯಾರಿಯೋಕೆ ಕಾರ್ಯಕ್ರಮಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದರಲ್ಲಿ ನವೀನ್್ ಅವರ ಶ್ರಮವೂ ಇದೆ’ ಎಂದು ಅವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಸಾಮಾನ್ಯ ಸಂಗೀತ ಕಾರ್ಯಕ್ರಮಕ್ಕಿಂತ ಕ್ಯಾರಿಯೋಕೆ ಜಾಕಿ ಆಗಿ ಕೆಲಸ ಮಾಡುವುದು ಹೆಚ್ಚು ಕಠಿಣ ಎನ್ನುವುದು ರಚನಾ ಅವರ ಅಭಿಮತ.

‘ಸಾಮಾನ್ಯವಾಗಿ ಸಂಗೀತ ಕಾರ್ಯಕ್ರಮವೆಂದರೆ ಸಂಗೀತಗಾರ ತಾನು ತಾಲೀಮು ಮಾಡಿಕೊಂಡು ಬಂದಿರುವ ಕೆಲವು ಹಾಡುಗಳನ್ನು ಪ್ರೇಕ್ಷಕರ ಮುಂದೆ ಹಾಡುತ್ತಾನೆ. ಆದರೆ ಕ್ಯಾರಿಯೋಕೆ ಕಾರ್ಯಕ್ರಮಗಳು ಹಾಗಲ್ಲ. ಅಲ್ಲಿ ಎಲ್ಲರೂ ಬಂದು ಕ್ಯಾರಿಯೋಕೆ ಜಾಕಿಗೆ ತಮ್ಮಿಷ್ಟದ ಹಾಡನ್ನು ಹಾಡಿ ಎಂದು ಕೇಳಿಕೊಳ್ಳುತ್ತಿರುತ್ತಾರೆ.

ತಕ್ಷಣಕ್ಕೆ ಪ್ರೇಕ್ಷಕರ ಇಷ್ಟದ ಹಾಡನ್ನು ಹಾಡುವುದು ಮತ್ತು ಅವರನ್ನೂ ತಮ್ಮೊಟ್ಟಿಗೆ ಹಾಡಿಸಿಕೊಂಡು ಹೋಗುವುದು ಮಹತ್ವದ ಸಂಗತಿ. ಯಾವ ಹಾಡನ್ನು ಯಾವ ಸಮಯದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಪ್ರಜ್ಞೆ ಇರಬೇಕು’ ಎಂದು ಅವರು ವಿವರಿಸುತ್ತಾರೆ.

ಕ್ಯಾರಿಯೋಕೆ ಜಾಕಿಗೆ ಸಂಗೀತ ಜ್ಞಾನ ತುಂಬಾ ಅವಶ್ಯ ಎನ್ನುವ ರಚನಾ, ಬದಲಾಗುತ್ತಿರುವ ಸಂಗೀತ ಟ್ರೆಂಡ್ ಅನ್ನು ಗಮನಿಸಲು ಅಂತರ್ಜಾಲದ ಮೊರೆ ಹೋಗುತ್ತಾರೆ. ಅಮೆರಿಕ ಮತ್ತು ಇತರ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಸಂಗೀತ ಪ್ರಕಾರಗಳು, ಹಾಡುಗಳ ಕುರಿತು ಸದಾ ಮಾಹಿತಿ ಕಲೆ ಹಾಕುತ್ತಿರುತ್ತಾರೆ. ಅದಕ್ಕೆ ಅನುಸಾರವಾಗಿ ತಮ್ಮ ಸಂಗೀತ ಸಂಗ್ರಹವನ್ನು ಅಪ್ಡೇಟ್ ಗೊಳಿಸುತ್ತಲೂ ಇರುತ್ತಾರೆ.

‘ಜನರು ಕ್ಯಾರಿಯೋಕೆ ಕಾರ್ಯಕ್ರಮಕ್ಕೆ ಗಂಭೀರವಾಗಿ ಸಂಗೀತ ಕೇಳಲು ಬಂದಿರುವುದಿಲ್ಲ. ಅವರಿಗೆ ಸಂಗೀತದ ಬಗ್ಗೆ ಹೆಚ್ಚಿನ ತಿಳಿವಳಿಕೆಯೂ ಇರುವುದಿಲ್ಲ. ಅವರು ಆ ಕ್ಷಣ ಹಾಡಿ ಖುಷಿಪಡುವುದನ್ನು ಇಷ್ಟಪಡುತ್ತಾರೆ. ಆದರೆ ಅವರನ್ನು ಖುಷಿಪಡಿಸಬೇಕಾದರೆ ಕ್ಯಾರಿಯೋಕೆ ಜಾಕಿಗೆ ಸಂಗೀತ ಗೊತ್ತಿರಲೇಬೇಕು’ ಎಂದು ಅವರು ಖಡಾಖಂಡಿತವಾಗಿ ನುಡಿಯುತ್ತಾರೆ.

ಮನೆಯವರ ಪ್ರೋತ್ಸಾಹವೂ ರಚನಾ ಅವರ ಉತ್ಸಾಹವನ್ನು ಹೆಚ್ಚಿಸಿದೆ. ‘ಹಾಡುವ–ಹಾಡಿಸುವ ಖುಷಿಯ ಮುಂದೆ ಇನ್ಯಾವುದೂ ಮುಖ್ಯವಲ್ಲ’ ಎನ್ನುವ ಅವರಿಗೆ ಮುಂದೆ ಕ್ಯಾರಿಯೋಕೆ ಜಾಕಿ ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವ ಕನಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.