ಬುಧವಾರ, ಜೂನ್ 16, 2021
22 °C

ಹಾಸ್ಟೆಲ್‌ನಲ್ಲಿ ಬೆಂಕಿ: ಬಾಲಕಿ ಸಜೀವದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗರ್ತಲ (ಐಎಎನ್‌ಎಸ್‌): ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಸಂಭವಿ­ಸಿದ ಬೆಂಕಿ ಅನಾಹುತದಲ್ಲಿ   ಏಳು ವರ್ಷದ ಬಾಲಕಿ ಸಜೀವವಾಗಿ ದಹನವಾದ ಘಟನೆ ತ್ರಿಪುರಾದಲ್ಲಿ ಭಾನುವಾರ ನಡೆದಿದೆ.ಶಾರ್ಟ್‌ ಸರ್ಕಿಟ್‌-ನಿಂದ ಬೆಂಕಿ ಹೊತ್ತಿ­ಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಹತ್ತು ವಿದ್ಯಾರ್ಥಿನಿಯರಿಗೆ ಸುಟ್ಟಗಾಯ­ಗಳಾಗಿವೆ. ಈ ಹಾಸ್ಟೆಲ್‌ನಲ್ಲಿ 73 ವಿದ್ಯಾರ್ಥಿ­ನಿ­­ಯರು ಇದ್ದು, ಆಗ್ನಿ ಆಕಸ್ಮಿಕ ಸಂಭವಿಸುತ್ತಿದ್ದಂತೆಯೇ ಎಲ್ಲರೂ ಹೊರಗೆ ಬರುವಲ್ಲಿ ಯಶಸ್ವಿ­ಯಾ­ದರು. ಆದರೆ ಬಾಲಕಿ ಮಾತ್ರ ಹಾಸ್ಟೆಲ್‌ ಒಳಗೆ ಸಿಲುಕಿ ಸಜೀವ­ವಾಗಿ  ದಹನವಾದಳು ಎಂದು  ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.