ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ನಿಧನ

7

ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ನಿಧನ

Published:
Updated:
ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ನಿಧನ

ಬೆಂಗಳೂರು: ಕನ್ನಡದ ಹಿರಿಯ ಸಿನಿಮಾ ನಿರ್ದೇಶಕ ಹಾಗೂ ಚಿತ್ರ ಸಾಹಿತಿ  ಗೀತಪ್ರಿಯ ಭಾನುವಾರ ಸಂಜೆ ನಿಧನರಾಗಿದ್ದಾರೆ.ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಗೀತಪ್ರಿಯ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.1932, ಜೂನ್‌ 15ರಂದು ಗೀತಪ್ರಿಯ ಜನಿಸಿದರು. ಅವರ ಮೂಲ ಹೆಸರು ಲಕ್ಷ್ಮಣ್‌ ರಾವ್‌. ಗೀತಪ್ರಿಯ 1954ರಲ್ಲಿ ಕನ್ನಡ ಸಿನಿಮಾರಂಗ ಪ್ರವೇಶಿಸಿದ್ದರು.  ಗೀತಪ್ರಿಯ ಅವರು ಒಟ್ಟು 40 ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.  ಸುಮಾರು 250 ಚಿತ್ರಗಳಿಗೆ ಸಾಹಿತ್ಯ ಬರೆದಿದ್ದಾರೆ.ಶ್ರಾಮಣ ಸಂಭ್ರಮ, ಹೊಂಬಿಸಿಲು, ಪುಟಾಣಿ ಏಜೆಂಟ್‌ 123, ಬೆಸುಗೆ ಗೀತಪ್ರಿಯ ನಿರ್ದೇಶನದ ಜನಪ್ರಿಯ ಚಿತ್ರಗಳು.ಗೀತಪ್ರಿಯ ಅವರಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಪ್ರಶಸ್ತಿಗಳು ಸಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry