ಹುಬ್ಬಳ್ಳಿ/ ಬೆಳಗಾವಿ: ಜಮ್ಮು–ಕಾಶ್ಮೀರದ ಗಡಿಭಾಗದಲ್ಲಿ ಜುಲೈ 29ರಂದು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನವಲಗುಂದ ತಾಲ್ಲೂಕಿನ ಸೈದಾಪೂರ ಗ್ರಾಮದ ಹಸನ್ಸಾಬ್ ಇಮಾಮ್ಸಾಬ್ ಖುದಾವಂದ್ (25) ಹಾಗೂ ಗೋಕಾಕ ತಾಲ್ಲೂಕಿನ ನಬಾಪುರದ ಸುಬೇದಾರ್ ಬಸವರಾಜ ಚನ್ನಪ್ಪ ಪಾಟೀಲ (44) ಅವರ ಅಂತ್ಯಕ್ರಿಯೆ ಸೋಮವಾರ ಅವರ ಸ್ವಗ್ರಾಮಗಳಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ಯೋಧರ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನದ ಮೂಲಕ ಸೋಮವಾರ ಬೆಳಿಗ್ಗೆ ಗೋವಾಕ್ಕೆ ತಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಿಗ್ಗೆ ಸೈದಾಪುರ ಮತ್ತು ನಬಾಪುರಕ್ಕೆ ತರಲಾಯಿತು. ವೀರಯೋಧರಿಗೆ ಜೈಕಾರ ಹಾಕಿದ ಗ್ರಾಮಸ್ಥರು ‘ಜೈ ಜವಾನ್–ಜೈಕಿಸಾನ್’ ಭಾರತ್ ಮಾತಾ ಕಿ ಜೈ’, ‘ಹಸನ್ ಸಾಬ್ ಅಮರ್ ರಹೇ’, ‘ಬಸವರಾಜ ಅಮರ್ ರಹೇ’ ಎಂದು ಅಭಿಮಾನದಿಂದ ಘೋಷಣೆ ಕೂಗಿದರು.

ಅಣ್ಣಿಗೇರಿ ಪಟ್ಟಣದಿಂದ ಸುಮಾರು ಐದು ಕಿ.ಮೀ ದೂರವಿರುವ ಸೈದಾಪುರದವರೆಗೆ ಹಸನ್ಸಾಬ್ ಪಾರ್ಥಿವ ಶರೀರ ಸಾಗಿಸುತ್ತಿದ್ದ ವಾಹನವನ್ನು ನೂರಕ್ಕೂ ಹೆಚ್ಚು ಬೈಕ್ಗಳಲ್ಲಿ ಯುವಕರು ಹಿಂಬಾಲಿಸಿದರು. ಮೃತದೇಹ ಮನೆಗೆ ತಲುಪಿದಾಗ ಸಂಬಂಧಿಕರ ರೋದನ ಮುಗಿಲು ಮುಟ್ಟಿತು. ಇದಕ್ಕೂ ಮುನ್ನ, ಗ್ರಾಮದಲ್ಲಿ ಅವರು ಓದಿದ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಲಾಯಿತು.

ಇತ್ತ ಗೋಕಾಕ ತಾಲ್ಲೂಕು ನಬಾಪುರದಲ್ಲಿ ಯೋಧ ಬಸವರಾಜ ಅವರ ಪಾರ್ಥಿವ ಶರೀರದ ನಿರೀಕ್ಷೆಯಲ್ಲಿ ಸುತ್ತಮುತ್ತಲಿನ ಊರಿನ 4–5 ಸಾವಿರ ಜನರು ಗ್ರಾಮದ ಹೆಬ್ಬಾಗಿಲಿನಲ್ಲಿ ಕಾದು ನಿಂತಿದ್ದರು. ಬಸವರಾಜ ವ್ಯಾಸಂಗ ಮಾಡಿದ್ದ ಖನಗಾಂವ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರವನ್ನು ಕೆಲಹೊತ್ತು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಒಂದು ನಿಮಿಷ ಮೌನ ಆಚರಿಸಿ, ಯೋಧನ ಆತ್ಮಕ್ಕೆ ಶಾಂತಿ ಕೋರಲಾಯಿತು.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬಸ್ ನಿರ್ವಾಹಕರಾಗಿ ಕೆಲಸ ಮಾಡಿದ್ದ ಹಸನ್ಸಾಬ್
ಸೈದಾಪುರದಲ್ಲಿ ಗುಡಿಸಲಿನಂಥ ಸಣ್ಣ ಮನೆಯಲ್ಲಿ ವಾಸವಿರುವ ಇಮಾಮ್ ಸಾಬ್ ಮತ್ತು ಜನ್ನತ್ಬಿ ಅವರ ಮೂವರು ಮಕ್ಕಳಲ್ಲಿ ಹಸನ್ಸಾಬ್ ಹಿರಿಯರು. ಪಿಯುಸಿ ಮುಗಿಸಿ ಬಿ.ಕಾಂ ಪದವಿಗೆ ಸೇರುವಷ್ಟರಲ್ಲಿ ಅವರು ಸೇನೆಗೆ ಆಯ್ಕೆಯಾದರು.

‘ಓದಿಗೆ ಬೇಕಾದ ಹಣವನ್ನು ತಾನೇ ದುಡಿದು ಸಂಪಾದನೆ ಮಾಡುತ್ತಿದ್ದ. ಶಾಲಾ ದಿನಗಳಲ್ಲಿ ಹೊಲದಲ್ಲಿ ದುಡಿಯುತ್ತಿದ್ದ ಆತ ಕಾಲೇಜಿಗೆ ರಜೆ ಇದ್ದಾಗ ಖಾಸಗಿ ಬಸ್ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ’ ಎಂದು ಮಾವ ಜಂದಿಸಾಬ್ ದೊಡಮನಿ ತಿಳಿಸಿದರು.

ನಿವೃತ್ತಿಗೆ ಇನ್ನೆರಡು ವರ್ಷ ಬಾಕಿ ಇತ್ತು: ‘ಬಸವರಾಜ 1990ರಲ್ಲಿ ಸೇನೆಗೆ ಸೇರಿದ್ದರು. ಅತ್ಯಂತ ಕಡಿದಾದ ಪ್ರದೇಶಗಳಾದ ಹಿಮನದಿ (ಗ್ಲೇಸಿಯರ್), ಕಾರ್ಗಿಲ್ ಸೇರಿದಂತೆ ಹಲವೆಡೆ ಕಾರ್ಯನಿರ್ವಹಿಸಿದ್ದರು. ಇನ್ನೆರಡು ವರ್ಷಗಳಲ್ಲಿ ನಿವೃತ್ತಿಯಾಗಲಿದ್ದರು’ ಎಂದು ಬಸವರಾಜ ಅವರ ತಮ್ಮ ಸುರೇಶ ಪಾಟೀಲ ಹೇಳಿದರು. ಇವರು ಕೂಡ ಮದ್ರಾಸ್ ರೆಜಿಮೆಂಟ್ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.