ಶನಿವಾರ, ಮೇ 15, 2021
26 °C

ಹುಡುಗಿ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನಗೆ ಈಗಲೂ ಪ್ರೀತಿಯಲ್ಲಿ ನಂಬಿಕೆ ಇದೆ. ಹಣೆಬರಹವನ್ನೂ ನಂಬುತ್ತೇನೆ. ಒಂದು ಪರಿಪೂರ್ಣ ಪ್ರೇಮಕತೆ ವಿಶ್ವದಲ್ಲಿ ಸಿಗುವುದು ದುರ್ಲಭವಾಗಿದೆ... ಹೀಗೆಲ್ಲ ಮಾತನಾಡುತ್ತಿರುವುದು ಶಾಹಿದ್ ಕಪೂರ್.ಅನೇಕ ಹುಡುಗಿಯರೊಡನೆ ಇರುವ ಕತೆಗಳನ್ನೆಲ್ಲ ಹಿಂದಿಕ್ಕಿ ಈಗ `ಏಕ್ ಕಹಾನಿ ತೇರಿ ಮೇರಿ~ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.2004ರಲ್ಲಿ ತೆರೆಕಂಡ `ಫಿದಾ~ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕರೀನಾ ಕಪೂರ್ ಜೊತೆಗೆ ಆರಂಭವಾದ ಪ್ರೇಮ ಕತೆ, 2007ರ ಚಿತ್ರ `ಜಬ್ ವಿ ಮೆಟ್~ ಚಿತ್ರದೊಂದಿಗೆ `ದಿ ಎಂಡ್~ ಕಂಡಿತ್ತು. ನಂತರ ಶಾಹಿದ್ ಹೆಸರು `ಕಿಸ್ಮತ್ ಕನೆಕ್ಷನ್~ ಚಿತ್ರ ಬಿಡುಗಡೆಯಾದಾಗ ವಿದ್ಯಾ ಬಾಲನ್ ಜೊತೆಗೆ, `ಕಮೀನೆ~ ಬಿಡುಗಡೆಯಾದಾಗ ಪ್ರಿಯಾಂಕಾ ಚೋಪ್ರಾ ಜೊತೆಗೆ, `ಬದ್ಮಾಶ್ ಕಂಪೆನಿ~ ಚಿತ್ರದೊಂದಿಗೆ ಅನುಷ್ಕಾ ಶರ್ಮಾ ಜೊತೆಗೆ ಹೀಗೆ ಒಬ್ಬೊಬ್ಬರೊಡನೆಯೂ ಬೆಸೆಯುತ್ತಲೇ ಹೋಯಿತು. ಈ ಬಗ್ಗೆ ಬಾಲಿವುಡ್‌ನಲ್ಲಿ ಗುಸುಗುಸು ಆರಂಭವಾಗಿ ತಣ್ಣಗಾಗುತ್ತಿದ್ದವು. ಪ್ರಿಯಾಂಕಾ ಎಚ್ಚರ ತಪ್ಪಿದಾಗ ಶಾಹಿದ್ ಅಮ್ಮ ಹೋಗಿ ಮಾತನಾಡಿಸಿ ಬಂದರು. ಮುಂದಿನ ವರ್ಷ ಅವರ ಮದುವೆಯಂತೆ ಎಂಬ ಗಾಳಿ ಸುದ್ದಿಯೂ ಹರಡಿತು. 31ರ ಹರೆಯದ ಚೂಪುಕಂಗಳ ಈ ಹುಡುಗ ಮಾತ್ರ ಯಾವ ಪ್ರೀತಿಯ ಬಗ್ಗೆಯೂ ಮಾತನಾಡಲಿಲ್ಲ.ಈಗ ಸಂತನಂತೆ ನಿಜವಾದ ಪ್ರೀತಿಯ ಹುಡುಕಾಟದಲ್ಲಿದ್ದೇನೆ ಎಂದು ಮಾತನಾಡುತ್ತಿದ್ದಾನೆ. ವಿಶ್ವದಲ್ಲಿ ಯಾರಿಗೂ ಸತ್ಯವಾದ ಪ್ರೀತಿ ದೊರೆಯುವುದೇ ಇಲ್ಲ. ಸತ್ಯವಾಗಿಯೂ ಪ್ರೀತಿಸಿದವರದ್ದೆಲ್ಲ ಪರಿಪೂರ್ಣ ಕತೆಯೂ ಅಲ್ಲ ಎಂದೆಲ್ಲ ಹೇಳಿದ್ದಾನೆ. ಸದ್ಯ ಮದುವೆಗೆ ಸಿದ್ಧ ಎಂದು ಘೋಷಿಸಿರುವ ಈ ಹುಡುಗ ಸೂಕ್ತ ಹುಡುಗಿಗಾಗಿ ಹುಡುಕಾಡುತ್ತಿದ್ದಾನಂತೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.