ಹುಬ್ಬಳ್ಳಿ: ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಧಾರಣೆ ಪಾತಾಳಕ್ಕೆ ಕುಸಿದರೂ, ಇಲ್ಲಿನ ಎಪಿಎಂಸಿಯಲ್ಲಿ ಶುಕ್ರವಾರ ಉತ್ತಮ ಬೆಲೆ ದೊರೆಯಿತು.

ಮಾರುಕಟ್ಟೆಗೆ ಶುಕ್ರವಾರ 6,489 ಕ್ವಿಂಟಲ್ ಆವಕವಾಗಿತ್ತು. ಸ್ಥಳೀಯ ತಳಿಯ ಉತ್ತಮ ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್ಗೆ ₨ 900 ಮಾದರಿ ಬೆಲೆ ದೊರೆಯಿತು.

ಮಹಾರಾಷ್ಟ್ರದಲ್ಲಿ ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಬೆಲೆ ಕುಸಿದು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿರುವ ಪುಣೆ ತಳಿಯ ಈರುಳ್ಳಿ ಹುಬ್ಬಳ್ಳಿ ಎಪಿಎಂಸಿಗೆ 191 ಕ್ವಿಂಟಲ್ನಷ್ಟು ಬಂದಿದ್ದು ₨ 950 ಮಾದರಿ ಬೆಲೆ ದೊರೆತು ದೂರದ ಊರುಗಳಿಂದ ಬಂದಿದ್ದ ರೈತರು ಸಂತಸಗೊಂಡರು.

ವಿಜಾಪುರ ಭಾಗದಲ್ಲಿ ಬೆಳೆಯುವ ತೆಲಗಿ ತಳಿ ಈರುಳ್ಳಿ ಕೂಡ ಕ್ವಿಂಟಲ್ಗೆ ₨ 900 ದರದಲ್ಲಿ ಮಾರಾಟವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.