ಶುಕ್ರವಾರ, ಜೂನ್ 25, 2021
27 °C

ಹೆಗ್ಗಾರುಘಟ್ಟದಲ್ಲಿ ಬೆಂಕಿ: ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರುಘಟ್ಟ ತಪ್ಪಲಿನ  ದಬ್ಬಣಗದ್ದೆ, ಯಡುವಿ ನಕೊಪ್ಪ, ಕೋಟೇಕೊಪ್ಪ, ಕರ್ಕಿಬೈಲು ಗ್ರಾಮದ ಸ್ವಾಭಾವಿಕ ಅರಣ್ಯಕ್ಕೆ ಭಾನುವಾರ ಕಾಣಿಸಿಕೊಂಡ ಬೆಂಕಿ ಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ಈ ಭಾಗದ ಅರಣ್ಯದಲ್ಲಿ ಒಣ ಗಿನಿಂತ ಬಿದಿರ ಮೆಳೆಗಳಿಗೆ ಬಿಂಕಿ ತಗಲುಲಿದ್ದರಿಂದ ಬೆಂಕಿ ಹೆಚ್ಚು ಪ್ರದೇಶಕ್ಕೆ ವ್ಯಾಪಿಸುವ ಸಾಧ್ಯತೆಗಳಿವೆ. ಬಿಸಿಲ ಧಗೆ ಹೆಚ್ಚಿದ್ದರಿಂದ ಹಾಗೂ ಗಾಳಿ ಹೆಚ್ಚಾಗಿ ಬೀಸುತ್ತಿ ರುವುದರಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾದ ಸಂದರ್ಭ ಎದುರಾಗಿದೆ.ಬಹುತೇಕ ಎಲ್ಲ ಒಣಗಿನಿಂತ ಬಿದಿರು ಮೆಳೆಗಳು ಅಗ್ನಿಕುಂಡದಂತೆ ಆಗಿವೆ. ಬಿದಿರಿಗೆ ತಗುಲಿದ ಬೆಂಕಿಯ ಕಿಡಿಗಳು ಗಾಳಿಯಿಂದ ದೂರ ದೂರ ಸಿಡಿಯು ವುದರಿಂದ ಬೆಂಕಿ ಈ ಭಾಗದ ಸುಮಾರು 50 ಎಕರೆಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ. ಮರಗಿ ಡಗಳು ಸುಟ್ಟು ಕರಕಲಾಗುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಎಡವಿನಕೊಪ್ಪ ಚಂದ್ರಪೂಜಾರಿ ಅವರಿಗೆ ಸೇರಿದ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಸ್ಥಳೀಯರು ಅದನ್ನು ನಂದಿಸಿದ್ದಾರೆ. ಬೆಂಕಿ ಬಿದ್ದ ಸ್ಥಳಕ್ಕೆ ಹೋಗಲು ಅಗ್ನಿಶಾಮಕ ವಾಹನಗಳಿಗೆ ದಾರಿ ಇಲ್ಲದ ಕಾರಣ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಹಿನ್ನಡೆ ಯಾಗಿದೆ. ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಸೇರಿ ಬೆಂಕಿ ನಂದಿಸುವ ಕೆಲಸ ಮುಂದುವರಿಸಿದ್ದಾರೆ.ಈ ಭಾಗದ ದಟ್ಟ ಅರಣ್ಯದಲ್ಲಿನ ಅನೇಕ ಬಗೆಯ ಕಾಡು ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಹೆಣಗುತ್ತಿವೆ. ಬೆಲೆ ಬಾಳುವ ಮರಗಿಡಗಳು, ಔಷಧೀಯ ಸಸ್ಯ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.‘ತುಂಗಾ ನದಿ ಕಡೆಯಿಂದ ಬೆಂಕಿ ತಗುಲಿದೆ. ಸ್ಥಳೀಯ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಭಾಗದಲ್ಲಿ ಒಣಗಿ ನಿಂತ ಬಿದಿರ ಮೆಳೆಗಳಿಗೆ ಬೆಂಕಿ ತಗುಲಿದ್ದರಿಂದ ಹೆಚ್ಚು ವ್ಯಾಪಿಸಿದೆ. ಈಗ ಬೆಂಕಿ ಹತೋಟಿಗೆ ಬಂದಿದ್ದು, ನಿಯಂತ್ರಣದಲ್ಲಿದೆ’ ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.