ನವದೆಹಲಿ (ಐಎಎನ್ಎಸ್): `ಪಕ್ಷ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧ. ಆದರೆ, ಯಾರು ನಾಯಕತ್ವದಿಂದ ವಿಶ್ರಾಂತಿ ಪಡೆಯುತ್ತಾರೆ ಎಂಬುದರ ಮೇಲೆ ಜವಾಬ್ದಾರಿಯ ಅಂತಿಮ ತೀರ್ಮಾನವಾಗಲಿದೆ~ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಗುರುವಾರ ತಿಳಿಸಿದರು.

ಗುರುವಾರ ಸಂಸತ್ನಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಪಕ್ಷ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಸಕ್ರಿಯ ಪಾತ್ರ ವಹಿಸಲು ನಾನು ತೀರ್ಮಾನಿಸಿ ಆಗಿದೆ. ಆದರೆ, ನಾಯಕತ್ವಕ್ಕೆ ಸ್ವಲ್ಪ ಕಾಲಾವಧಿ ಬೇಕು~ ಎಂದು ಹೇಳಿದರು.

ತಾಯಿ ಸೋನಿಯಾ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸೇರ್ಪಡೆಗೊಳ್ಳುವ ಹಾಗೂ ದೊಡ್ಡ ಜವಾಬ್ದಾರಿಯೊಂದಕ್ಕೆ ಹೆಗಲು ಕೊಡುವ ಸಾಧ್ಯತೆ ಕುರಿತಂತೆ ಇದೇ ಮೊದಲ ಬಾರಿ ರಾಹುಲ್ ಗಾಂಧಿ ಅವರು ಮೌನ ಮುರಿದಿದ್ದಾರೆ.

ಬುಧವಾರವಷ್ಟೇ ರಾಹುಲ್ ಅವರ ಜವಾಬ್ದಾರಿ ಕುರಿತಂತೆ ಮಾತನಾಡಿದ ಸೋನಿಯಾ ಗಾಂಧಿ ಅವರು ಅಂತಿಮ ತೀರ್ಮಾನ ರಾಹುಲ್ ತೆಗೆದುಕೊಳ್ಳಲಿದ್ದಾನೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.