ಭಾನುವಾರ, ಜನವರಿ 19, 2020
21 °C

ಹೆಣ್ಣೂರು ರಸ್ತೆಗೆ ಹೊಸರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಣ್ಣೂರಿನ ಮುಖ್ಯರಸ್ತೆ ಯಲ್ಲಿ ಬಿದ್ದಿದ್ದ ಗುಂಡಿಗಳು ಕಾಣೆ ಯಾಗಿದ್ದು, ದೂಳು ಸಹ ಮಾಯ­ವಾಗಿದೆ. ಕೊಳಚೆ ನೀರು ಹರಿಯವುದು ಸ್ಥಗಿತಗೊಂಡಿದ್ದು, ಡಾಂಬರು ಹೊದಿಕೆಯನ್ನೂ ಕಂಡಿರುವ ರಸ್ತೆ, ಹೊಸ ರೂಪ ಪಡೆದಿದೆ.ಮೂರು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆ ಯಿಂದ ಹೆಣ್ಣೂರು ಭಾಗದ ಸಾರ್ವ­ಜನಿಕರು ತೀವ್ರ ತೊಂದರೆ ಅನುಭವಿಸು ತ್ತಿದ್ದರು. ಈ ಕುರಿತು ‘ಪ್ರಜಾವಾಣಿ’ ಅ.24ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅಲ್ಲಿನ ಜನರ ನರಕ ಯಾತನೆ ಮೇಲೆ ಬೆಳಕು ಚೆಲ್ಲಿತ್ತು. ಅದಕ್ಕೆ ಸ್ಪಂದಿಸಿರುವ ಬೃಹತ್‌ ಬೆಂಗ ಳೂರು ಮಹಾನಗರ ಪಾಲಿಕೆ (ಬಿಬಿ ಎಂಪಿ) ರಸ್ತೆಯನ್ನು ದುರಸ್ತಿಗೊಳಿಸಿದೆ.ಬೃಹತ್ ಕಾಮಗಾರಿ ಯೋಜನೆ ಅಡಿಯಲ್ಲಿ ರಸ್ತೆಯ ಸುಧಾರಣೆಗೆ ಮೂರು ವರ್ಷಗಳ ಹಿಂದೆಯೇ ₨ 3.85 ಕೋಟಿ ಮಂಜೂರಾಗಿದ್ದರೂ ರಸ್ತೆ ಸುಧಾರಣೆ ಆಗಿರಲಿಲ್ಲ. ರಸ್ತೆ ದುರಸ್ತಿ ಮತ್ತು ಚರಂಡಿ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಪರಸ್ಪರ ದೋಷಾ­ರೋಪ­ಣೆಯಲ್ಲಿ ತೊಡಗಿದ್ದರು. ಈ ಸಂಗತಿ ಮೇಲೂ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ರಸ್ತೆ ದುರಸ್ತಿ ಆಗಿರುವು ದರಿಂದ ಹೆಣ್ಣೂರು ಭಾಗದ ಜನ ಸಂತಸಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)