ಗುರುವಾರ , ಮೇ 13, 2021
40 °C

ಹೆಲಿಕಾಪ್ಟರ್ ಹಗರಣ: ಬಾಕಿ ಹಣಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿಗೆ ಹಗರಣಕ್ಕೆ ಸಂಬಂಧಿಸಿದಂತೆ ರೂ 3600 ಕೋಟಿ ವಹಿವಾಟಿನ ಹೆಲಿಕಾಪ್ಟರ್ ಖರೀದಿ ಕೈತಪ್ಪು ಭೀತಿಯಲ್ಲಿರುವ ಇಟಲಿ ಮೂಲದ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿ, ತಮ್ಮ ಸಂಸ್ಥೆಗೆ ಬರಬೇಕಾಗಿರುವ ಹಣವನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರವನ್ನು ಕೇಳಿದೆ.ಈ ಕುರಿತು ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿ, `ಹೆಲಿಕಾಪ್ಟರ್ ಖರೀದಿಯಲ್ಲಿ ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದದಲ್ಲಿ ಬಿಕ್ಕಟ್ಟು ಏರ್ಪಟ್ಟಿದ್ದು, ಈ ಸಂಬಂಧ ತಮ್ಮ ಕಂಪೆನಿಗೆ ಸೇರಬೇಕಾದ ಹಣವನ್ನು ಬಿಡುಗಡೆ ಮಾಡುಬೇಕು' ಎಂದು ಕೇಳಿದೆ.ಗಣ್ಯರ ಹೆಲಿಕಾಪ್ಟರ್ ಖರೀದಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಶೇ 30ರಷ್ಟು ಹಣವನ್ನು ಬಿಡುಗಡೆ ಮಾಡಿದೆ. ಆದರೆ ಈ ವ್ಯವಹಾರದಲ್ಲಿ ಫಿನ್ ಮೆಕ್ಕಾನಿಕಾ ಮತ್ತು ಆಗಸ್ಟಾ ಕಂಪೆನಿಗಳ ಮಾಜಿ ಸಿಇಒಗಳು ರೂ.362 ಕೋಟಿ ಲಂಚ ಪಡೆದಿದ್ದನ್ನು ಇಟಲಿಯ ತನಿಖಾಧಿಕಾರಿಗಳು ಪತ್ತೆ ಹಚ್ಚಿದ ಮೇಲೆ ಬಾಕಿ ಹಣವನ್ನು ತಡೆ ಹಿಡಿಯಲಾಗಿತ್ತು.ಆದರೆ ಈ ಪ್ರಕರಣದಲ್ಲಿ ಯಾರ ವಿರುದ್ಧವೂ ಆರೋಪ ಸಾಬೀತಾಗಿಲ್ಲ. ಎರಡೂ ದೇಶಗಳಲ್ಲಿ ತನಿಖೆ ಇನ್ನೂ ಮುಂದುವರಿದಿದೆ.

ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಐಎಎಫ್ ಮುಖ್ಯಸ್ಥ ಎಸ್.ಪಿ.ತ್ಯಾಗಿ ಮತ್ತು ಅವರ ಮೂವರು ಸಂಬಂಧಿಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.