ಬುಧವಾರ, ಮೇ 18, 2022
25 °C

ಹೈನುಗಾರಿಕೆ ಬಗ್ಗೆ ಅಧ್ಯಯನ ಪ್ರವಾಸ:ಗುಜರಾತ್‌ಗೆ ದೇವನಹಳ್ಳಿ ತಂಡ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಹಾಲಿನ ಗುಣಮಟ್ಟ, ಉತ್ಪನ್ನ,  ಪಶುಪಾಲನೆ, ವಹಿವಾಟು ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘದ ಸಮಗ್ರ ಚಟುವಟಿಕೆಗಳ ಅಧ್ಯಯನಕ್ಕೆ  ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ 33 ಮಂದಿಯನ್ನು ಗುಜರಾತ್‌ನ ಆನಂದ ಹಾಲು ಶೇಖರಣಾ ಘಟಕಕ್ಕೆ ಪ್ರವಾಸ ಕಳುಹಿಸಲಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಸೋಮಣ್ಣ ನುಡಿದರು.ಹೈನುಗಾರಿಕೆ ಕುರಿತ ಅಧ್ಯಯನಕ್ಕೆ ಗುಜರಾತ್‌ಗೆ ತೆರಳಿದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಇಲ್ಲಿನ ಬಮೂಲ್ ಶಿಬಿರ ಕಚೇರಿಯಲ್ಲಿ ಶುಭ ಹಾರೈಸಿ ಮಾತನಾಡಿದ ಅವರು, ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಗುಜರಾತ್ ಎಲ್ಲರಿಗೂ ಮಾದರಿಯಾಗಿದೆ.ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ದೇವನಹಳ್ಳಿ ತಾಲ್ಲೂಕು ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದರು. ತಾಲ್ಲೂಕಿನಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಕ್ಕೂಟವು 10 ದಿನಗಳ ಈ ಪ್ರವಾಸಕ್ಕೆ 2.50 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಗುಜರಾತ್‌ನ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಹಾಲಿನ ಗುಣಮಟ್ಟ ಕಾಪಾಡುವ ಬಗ್ಗೆ, ಪಶು ಮೇವು ಮತ್ತು ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ಪಡೆಯಲಾಗುತ್ತದೆ. ಆನಂದ್ ಹಾಲು ಶೇಖರಣಾ ಘಟಕದಲ್ಲಿ 2 ದಿನದ ತರಬೇತಿ ಇದೆ ಎಂದು ಹೇಳಿದರು.ಬೆಂಗಳೂರು ಪೂರ್ವ ತಾಲ್ಲೂಕು ಬಮೂಲ್ ನಿರ್ದೇಶಕ ಮುನಿಸುಬ್ಬಯ್ಯ, ಉಪವ್ಯವಸ್ಥಾಪಕ ವಿ.ಜಿ.ನಾಯಕ್, ಡಾ.ಎಂ.ರೇಖ್ಯಾನಾಯ್ಕ, ಡಾ.ಕೃಷ್ಣಮೂರ್ತಿ, ವಿಸ್ತರಣಾಧಿಕಾರಿ ಶ್ರಿನಿವಾಸ್, ಗೋಪಾಲ್, ವೆಂಕಟೇಶ್, ಮುನಿರಾಜ್, ಮಂಜುನಾಥ್ ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.