ಶುಕ್ರವಾರ, ಮೇ 20, 2022
24 °C

ಹೊಳೆಯದ ಹಳ್ಳಿಮೈಸೂರು ರಸ್ತೆ: ಜನತೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ಹಳ್ಳಿಮೈಸೂರು ತಾಲ್ಲೂಕಿನ ದೊಡ್ಡ ಹೋಬಳಿ. ಹೋಬಳಿ ಕೇಂದ್ರವಾದ ಹಳ್ಳಿಮೈಸೂರಿಗೆ ಪ್ರತಿ ದಿನ 50ಕ್ಕೂ ಹೆಚ್ಚು ಬಸ್ ಸೇರಿದಂತೆ  ಟ್ರಾಕ್ಸ್, ಆಟೋ, ದ್ವಿಚಕ್ರವಾಹನಗಳ ಓಡಾಟವೂ ಹೆಚ್ಚಿದೆ.ಹಾಸನ-ಮೈಸೂರು ರಸ್ತೆಯ ತಿರುವಿನಿಂದ ಹಳ್ಳಿಮೈಸೂರಿನವರೆಗೂ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ. ಈ ರಸ್ತೆಯ ಗುಂಡಿಯಲ್ಲಿ ಹತ್ತಿ ಇಳಿದೇ ಎಲ್ಲಾ ವಾಹನಗಳು ಓಡಾಡ ಬೇಕು. ಗುಂಡಿಗಳನ್ನು ತಪ್ಪಿಸಿ ಒಡಾಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ.ಪಟ್ಟಣದಿಂದ ಹಳ್ಳಿಮೈಸೂರಿಗೆ 18 ಕಿ.ಮೀ ಇದೆ ಈ ಊರು. ಇಷ್ಟು ಕಡಿಮೆ ದೂರವನ್ನು ಕ್ರಮಿಸಲು 45 ನಿಮಿಷ ಬೇಕೇ ಬೇಕು. ಈ ಮಾರ್ಗದಲ್ಲಿ ಓಡಾಡುವ ವಾಹನಗಳಲ್ಲಿ ಪ್ರತೀದಿನ ಏನಾದರೊಂದು ಮುರಿದಿರುತ್ತೆ. ಒಮ್ಮೆ ಬ್ಲೇಡ್ ಮುರಿದರೆ, ಮತ್ತೊಮ್ಮೆ ಟೈರ್ ಒಡೆಯುತ್ತೆ. ಇನ್ನೊಮ್ಮೆ ಇನ್ನೊಂದು ಅವಘಡವಾಗಿರುತ್ತೆ  ಎನ್ನುತ್ತಾರೆ ಈ ಮಾರ್ಗದ ವಾಹನ ಚಾಲಕರು.`ನಾವು ಬಿಟ್ಟರೆ ಮತ್ತೊಬ್ಬರು ಈ ಮಾರ್ಗದಲ್ಲಿ ಓಡಿಸಲು ಸಿದ್ಧರಿರುತ್ತಾರೆ. ಆದ್ದರಿಂದ ನಮಗೆ ಈ ಮಾರ್ಗದಲ್ಲಿ ನಷ್ಟವಾಗುತ್ತಿದ್ದರೂ ಓಡಿಸುತ್ತೇವೆ~ ಎನ್ನುತ್ತಾರೆ ಮಾಲೀಕರುಗಳು.ಸಾರಿಗೆ ಸಂಸ್ಥೆ ಬಸ್‌ಗಳ ಚಾಲಕರೂ ಈ ಮಾರ್ಗದಲ್ಲಿ ಓಡಾಡಲು ಸಾಧ್ಯ ಇಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ನಮಗಾಗುವ ತೊಂದರೆ ಮರೆತು ಬಸ್‌ಗಳನ್ನು ಓಡಿಸುತ್ತೇವೆ ಎಂದರು.ಈ ಮಾರ್ಗದಲ್ಲಿ ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಶಾಶ್ವತ ಅಂಗವಿಕಲತೆಗೆ ತುತ್ತಾಗಿದ್ದಾರೆ. ಈ ಭಾಗದ ಪ್ರಯಾಣಿಕರು ಇಷ್ಟು ಸಂಕಷ್ಟ ಅನುಭವಿಸುತ್ತಿದ್ದರೂ ಶಾಸಕ ಎಚ್.ಡಿ. ರೇವಣ್ಣ ಅವರಾಗಲಿ, ಹಳ್ಳಿಮೈಸೂರು ಹೋಬಳಿ ಮತ ಕ್ಷೇತ್ರದ ಶಾಸಕ ಎ. ಮಂಜು ಅಗಾಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಸರಿಪಡಿಸುವ ಬಗ್ಗೆ ಯೋಚಿಸಿದಂತೆಯೇ ಇಲ್ಲ. ಈ ಭಾಗದ ಪ್ರಯಾಣಿಕರು ಶಾಸಕರ ನಿರ್ಲಕ್ಷತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.