ಗುರುವಾರ , ಜೂನ್ 17, 2021
29 °C

ಹೊಸಬರ ಮೀಟ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಬರ ಮೀಟ್ರು

ಸಿನಿಮಾ ಹೆಸರು ಮೀಟ್ರು. ಕಾಂಟೆಂಪರರಿ ಆಗಿರಲಿ ಎಂದು ಈ ಹೆಸರನ್ನು ಇಟ್ಟಿರುವ ನಿರ್ದೇಶಕರ ಹೆಸರು ಸೂರಿ. ಪೋಸ್ಟರ್‌ಗಳಲ್ಲಿ ದುನಿಯಾ ಸೂರಿ ತಮ್ಮ ಹೆಸರಿನ ಅಕ್ಷರಗಳನ್ನು ಯಾವ ಸ್ವರೂಪದಲ್ಲಿ ಬರೆಸುತ್ತಾರೋ ಇವರೂ ಅದನ್ನೇ ಕಾಪಿ ಹೊಡೆದಿದ್ದಾರೆ. ಅಂದರೆ, ಸೂರಿಯಂತೆ ನಿರ್ದೇಶಕರಾಗಿ ಬೆಳೆಯುವುದು ಇವರ ಬಯಕೆ. ಈ ನಿರ್ದೇಶಕರ ನಿಜನಾಮ ಸುರೇಶ್.`ಹುಡುಗರು~, `ಯುಗಯುಗಗಳೆ ಸಾಗಲಿ~, `ಪರಿಚಯ~ ಹೀಗೆ ಸುಮಾರು 80 ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿಯೋ, ನೆರವು ನೀಡಿಯೋ ಅನುಭವ ಇರುವ ಸೂರಿ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.`ಇದು ಮಾಸ್ ಕಥೆ. ನಾಯಕ-ನಾಯಕಿ ಇಬ್ಬರೂ ಕಾಲೇಜು ಹುಡುಗ-ಹುಡುಗಿ. ನಮ್ ಸಿನಿಮಾದಲ್ಲಿ ಹೈ ಕ್ಲಾಸ್ ಏರಿಯಾ, ಲೋ ಕ್ಲಾಸ್ ಸ್ಲಮ್ಮು ಎರಡೂ ತೋರಿಸ್ತೀವಿ. ಒಟ್ಟಾರೆ ಇದು ಮಾಸ್ ಬೇಸ್ಡ್ ಕ್ಯೂಟ್ ಲವ್ ಸ್ಟೋರಿ~ ಎಂದು ಸೂರಿ ತಮ್ಮ ಸಿನಿಮಾ ವಸ್ತುವಿನ ಒನ್‌ಲೈನರ್ ಹೇಳಿದರು. ಒಂದೇ ಹಂತದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಸುವುದು ಅವರ ಯೋಜನೆ.ಎರಡು ಹಾಡುಗಳಿಗೆ ವಿದೇಶಕ್ಕೆ ಹೋಗಬೇಕೆಂದು ಕೂಡ ಯೋಚಿಸಿದ್ದಾರೆ. ಎಲ್ಲಿಗೆ, ಯಾವಾಗ ಎಂಬುದಿನ್ನೂ ತೀರ್ಮಾನವಾಗಿಲ್ಲ. ಶ್ರೀವತ್ಸ ಎಂಬ ಹೊಸಬರು ಸಂಗೀತ ಸಂಯೋಜನೆ ಮಾಡಿದ್ದಾರೆ. ತಲಕಾಡಿನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸಲು ನಿರ್ಧರಿಸಿದ್ದು, ಅಂತ್ಯ ಸೂಪರ‌್ರಾಗಿದೆ ಎಂದು ಸೂರಿ ಕಣ್ಣರಳಿಸಿದರು.ಚಿತ್ರದ ನಾಯಕ ರಾಕಿ. ಕಲ್ಯಾಣನಗರದಲ್ಲಿ ಬಿ.ಕಾಂ. ಅಂತಿಮ ಸೆಮಿಸ್ಟರ್ ಓದುತ್ತಿರುವ ಈ ಹುಡುಗ `ಸ್ಟಾರ್ ಕ್ರಿಯೇಟರ್ಸ್‌~ನಲ್ಲಿ ಅಭಿನಯ ಸೇರಿದಂತೆ ಸಿನಿಮಾಗೆ ಬೇಕಾದ ವರಸೆಗಳನ್ನು ಕಲಿತುಕೊಂಡಿದ್ದಾರೆ. ಅಲ್ಟಿಮೇಟ್ ಶಿವು ಅವರಲ್ಲಿ ಆರು ತಿಂಗಳು ಫೈಟಿಂಗ್ ತಾಲೀಮನ್ನೂ ನಡೆಸಿದ್ದು, ಚೆನ್ನಾಗಿ ನಟಿಸಬೇಕೆಂಬುದು ಹೆಬ್ಬಯಕೆ.ನಿರ್ಮಾಪಕರಾದ ರಘುರಾಜ್, ಚೈತನ್ಯ ಪ್ರಸಾದ್ ಸ್ನೇಹ ಇವರಿಗೆ ವರದಾನ. `ಸ್ಲಂ~ ಎಂಬ ಚಿತ್ರದಲ್ಲಿ ಖಳನ ಪಾತ್ರ ನಿರ್ವಹಿಸಿದ್ದು, ಆ ಸಿನಿಮಾದ ಮೂರು ದಿನಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ನಿರ್ದೇಶಕರು ಈ ಕಾಲದ ನಾಡಿಮಿಡಿತ ತಿಳಿದುಕೊಂಡೇ ಸ್ಕ್ರಿಪ್ಟ್ ಮಾಡಿದ್ದಾರೆ ಅಂತಾರೆ ರಾಕಿ.`ರಣ~ ಚಿತ್ರಕ್ಕೆ ಕೆಲಸ ಮಾಡಿದ್ದ ರಾಜರತ್ನಂ ಈ ಚಿತ್ರದ ಛಾಯಾಗ್ರಾಹಕ. ನಟ-ನಟಿಯರನ್ನು ಲೊಕೇಷನ್‌ಗಳನ್ನು ಚೆಂಗಾಣಿಸುವುದು ಅವರ ಸಂಕಲ್ಪ. ನಾಗೇಂದ್ರ ಪ್ರಸಾದ್, ಕವಿರಾಜ್, ಅರಸು ಅಂತಾರೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.ಡೈಲಾಗ್ ಕಿಂಗ್ ಸಾಯಿಕುಮಾರ್ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ನಟಿಸುತ್ತಾರಂತೆ. ಉಳಿದಂತೆ ರಂಗಾಯಣ ರಘು, ಶರತ್‌ಲೋಹಿತಾಶ್ವ, ಸಾಧುಕೋಕಿಲಾ, ಸುನೇತ್ರ ಪಂಡಿತ್, ಸಂಗೀತಾ ಮೊದಲಾದವರ ಅಭಿನಯವಿದೆ.ನಾಯಕಿ ಹರ್ಷಿಕಾ ಪೂಣಚ್ಚ ಮೇಕಪ್ ಹಾಕಿಸಿಕೊಳ್ಳುವುದರಲ್ಲಿ ಬಿಜಿಯಾಗಿದ್ದರು. ಈ ಚಿತ್ರದಲ್ಲೂ ಚೆನ್ನಾಗಿ ಅಭಿನಯಿಸಬೇಕೆಂಬುದು ಅವರ ಕಾಳಜಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.