ಬೆಂಗಳೂರು: ಯಜಮಾನರ ಹಟ್ಟಿಯಲ್ಲಿ ಧಣಿ ಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು
ಹೋರಾಟದ ಸಾಗರಕೆ ಸಾವಿರಾರು ನದಿಗಳು...

ನವದೆಹಲಿಯ ಜಂತರ್ ಮಂತರ್ನಲ್ಲಿ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದನ ಎಂಬಂತೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಗುರುವಾರ ನೂರಾರು ಜನ ಪಾಲ್ಗೊಂಡರು. ಇವರಲ್ಲಿ ಬಹುತೇಕರು ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಕಂಡು ಬಂದವರೇ ಆಗಿದ್ದರು.

‘ನಾವು ಯಾವುದೋ ಕಾರ್ಯನಿಮಿತ್ತ ನಗರಕ್ಕೆ ಬಂದೆವು. ಆದರೆ ಬಸ್ನಲ್ಲಿ ಹೋಗುತ್ತಿರುವಾಗ ಪ್ರತಿಭಟನೆ ನಡೆಯುತ್ತಿರುವುದನ್ನು ಕಂಡು ಸ್ಥಳಕ್ಕೆ ಬಂದೆವು. ಟಿವಿ ಚಾನೆಲ್ಗಳಲ್ಲಿ ಬುಧವಾರ ಪ್ರತಿಭಟನೆಯ ದೃಶ್ಯಗಳನ್ನು ಪ್ರಸಾರ ಮಾಡಲಾಗಿತ್ತು. ಪ್ರತಿಭಟನೆಯ ಅಂತಿಮ ದಿನದವರೆಗೆ ಜನರೊಂದಿಗೆ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಆನೆಕಲ್ ತಾಲ್ಲೂಕು ರೈತ ಸಂಘಟನೆಯ ಅಧ್ಯಕ್ಷ ರಘು.

ಬಂದ ಸಾರ್ವಜನಿಕರು ಅಲ್ಲಿ ಇರಿಸಲಾಗಿದ್ದ ‘ಲೋಕಪಾಲ್ ಮಸೂದೆಗೆ ಬೆಂಬಲ ವ್ಯಕ್ತಪಡಿಸಿ’ ಎಂಬ ಪತ್ರಕ್ಕೆ ಸಹಿ ಹಾಕಿದರು. ತಮ್ಮ ಹೆಸರು, ವಿಳಾಸ, ಇಮೇಲ್ ಸಂಪರ್ಕದ ಜತೆಗೆ ಹೋರಾಟದ ಬಗ್ಗೆ ಅನಿಸಿಕೆಗಳನ್ನು ದಾಖಲಿಸಿದರು. ಯಾರು ಬೇಕಾದರೂ ವೇದಿಕೆಗೆ ಬಂದು ಮಾತನಾಡುವ ಅವಕಾಶ ಕಲ್ಪಿಸಲಾಗಿತ್ತು.

‘ನಾವೆಲ್ಲಾ ಸ್ವಯಂಸೇವಕರು. ಎಲ್ಲೆಲ್ಲಿಂದಲೋ ಜನ ಬಂದು ಸೇರುತ್ತಾ ಇದ್ದಾರೆ. ಒಟ್ಟು ಏಳು ಜನ ಉಪವಾಸ ಕುಳಿತಿದ್ದೇವೆ. ಭ್ರಷ್ಟಾಚಾರ ಆವರಿಸಿರುವ ದೇಶಕ್ಕೆ ಎರಡನೇ ಬಾರಿ ಸ್ವಾತಂತ್ರ್ಯ ದೊರೆಯಬೇಕಿದೆ’ ಎನ್ನುತ್ತಾರೆ ಉಪವಾಸ ಸತ್ಯಾಗ್ರಹಿ ಮಹೇಂದ್ರ ಕುಮಾರ್ ಗಾಂಧಿ.

ಕೆಲವರು ಸ್ವಯಂಪ್ರೇರಿತರಾಗಿ ಭಿತ್ತಿಪತ್ರಗಳನ್ನು ಹಂಚುತ್ತಿದ್ದರು, ‘ಕೆಲವರು ಭ್ರಷ್ಟಾಚಾರದ ವಿರುದ್ಧ ಹೋರಾಡಿ’ ಎಂಬ ಫಲಕ ಹಿಡಿದಿದ್ದರು. ರಾಷ್ಟ್ರಧ್ವಜ ಹಿಡಿದು ಹೆದ್ದಾರಿಯಲ್ಲಿ ಓಡಾಡುವವರಿಗೆ ಹೋರಾಟದ ಅರಿವು ಮೂಡಿಸುತ್ತಿದ್ದರು.

ಅಣ್ಣಾ ಹಜಾರೆ ಅವರ ಕುರಿತು ‘ನಾ ಕಂಡ ಆದರ್ಶ ಗ್ರಾಮ’ ಎಂಬ ಪುಸ್ತಕ ರಚಿಸಿರುವ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಬಿ.ಶಿವರಾಜು ಅವರು ಹೇಳುವ ಪ್ರಕಾರ ‘ಯುವಕರಿಗೆ ಸರಿಯಾಗಿ ಮಾರ್ಗದರ್ಶನ ಮಾಡದೇ ಇರುವುದರಿಂದಲೇ ವ್ಯವಸ್ಥೆ ಹದಗೆಟ್ಟಿದೆ. ಇಂತಹ ಹೋರಾಟಗಳು ಎಂದೋ ಆರಂಭವಾಗಬೇಕಿತ್ತು’ ಎಂದು ಅವರು ತಿಳಿಸಿದ್ದಾರೆ
‘ಅಣ್ಣಾ ಹಜಾರೆ ಅವರ ನಿರ್ಧಾರ ರೋಮಾಂಚಕಾರಿಯಾಗಿದೆ. ಅವರು ನವ ಭಾರತದ ಆತ್ಮಸಾಕ್ಷಿಯಾಗಿದ್ದಾರೆ. ನಾವು ಅಂತಹವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ.
ಯುವಕರನ್ನು ದೂಷಿಸಿ ಯಾವುದೇ ಪ್ರಯೋಜನವಿಲ್ಲ. ನಿಜವಾದ ಸತ್ವ ಯುವಕರಲ್ಲಿ ಅಡಗಿದೆ’ ಎನ್ನುತ್ತಾರೆ ಅವರು.

‘ನನಗೊಂದು ಮಿಸ್ಡ್ ಕಾಲ್ ಬರ್ತಾ ಇತ್ತು. ಇದರ ಬಗ್ಗೆ ದೂರು ನೀಡಲು ಹೋದರೆ ಪೊಲೀಸಿನವರು ಸ್ವೀಕರಿಸಲಿಲ್ಲ. ರಾಜಕೀಯದಲ್ಲಿದ್ದವರ ಶಕ್ತಿ ಬಳಸಿ ದೂರು ದಾಖಲಿಸಬೇಕಾಯಿತು. ಸಾಮಾನ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪರದಾಡಬೇಕು ಎಂದರೆ ದೇಶದ ಪರಿಸ್ಥಿತಿ ಹೇಗಿದೆ ನೀವೇ ಊಹಿಸಿ. ಆದ್ದರಿಂದ ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತೊಗೆಯುವುದು ಅಗತ್ಯವಿದೆ’ ಎನ್ನುತ್ತಾರೆ ಉದ್ಯೋಗಿ ವಿಕ್ಟೋರಿಯಾ.

ಅಲ್ಲಿ ವಯಸ್ಸಿನ ಅಂತರವಿರಲಿಲ್ಲ. ವಯೋವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪಾಲ್ಗೊಂಡರು. ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕೆ ಧುಮುಕಿರುವ ಅಣ್ಣಾ ಹಜಾರೆ, ಕಿರಣ್ ಬೇಡಿ, ಅರವಿಂದ್ ಕೇಜರಿವಾಲ್ ಅವರ ಪರವಾಗಿ ಘೋಷಣೆ ಕೂಗಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದರು.

‘ನಮ್ಮ ತಂದೆ ಎನ್.ವಿ. ಕೃಷ್ಣಮಾಚಾರ್ ಸ್ವಾತಂತ್ರ್ಯ ಹೋರಾಟಗಾರರು. ಅವರಿಗೆ ಈಗ 95 ವರ್ಷ. ದೇಶವನ್ನು ಎರಡನೇ ಬಾರಿಗೆ ದಾಸ್ಯದಿಂದ ಮುಕ್ತಿಗೊಳಿಸಬೇಕು ಎಂದು ಹೇಳಿದ್ದಾರೆ. ಎರಡು ದಿನ ಅವರೂ ಇಲ್ಲಿ ಪಾಲ್ಗೊಂಡರು. ನಾನೂ ಅವರೊಂದಿಗೆ ಹೋರಾಟ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆಯ ಯುವ ಶಾಖೆಯ ಪ್ರಧಾನ ಕಾರ್ಯದರ್ಶಿ ಝಾನ್ಸಿ ಲಕ್ಷ್ಮೀರಾಣಿ.

ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ನಡೆಸುತ್ತಿರುವ ಯತ್ನಕ್ಕೆ ಕೂಡ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು. ಸಂಜೆ ಸುಮಾರು 300 ಮೇಣದ ಬತ್ತಿಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.

ಜಾಲತಾಣಗಳ ಪಾತ್ರ
‘ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ನಲ್ಲಿ ಬಂದ ಸಂದೇಶಗಳು ನಮ್ಮನ್ನು ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಮಾಡಿದವು. ಈಗ ನಾವು ಕೂಡ ಭ್ರಷ್ಟಾಚಾರದ ವಿರುದ್ಧ ಆಂದೋಲನಕ್ಕೆ ಬೆಂಬಲ ನೀಡಬೇಕು ಎಂದು ಗೆಳೆಯರಿಗೆ ಸಂದೇಶ ರವಾನಿಸುತ್ತಿದ್ದೇವೆ’ ಎನ್ನುತ್ತಾರೆ ಸರ್ಜಾಪುರದ ಪಿಯು ಕಾಲೇಜಿನ ವಿದ್ಯಾರ್ಥಿನಿ ಬಿಂದು.

ಗುರುವಾರದವರೆಗೆ ಫೇಸ್ಬುಕ್ನಲ್ಲಿ ‘ಇಂಡಿಯಾ ಅಗೆನ್ಸ್ಟ್ ಕರಪ್ಷನ್’ ಹೆಸರಿನ ಸಮುದಾಯದೊಂದಿಗೆ ಗುರುತಿಸಿಕೊಂಡವರ ಸಂಖ್ಯೆ 99,333. ಈ ಬಗ್ಗೆ ಮಾತನಾಡಿದ ‘ಸಾಕು’ ಸಂಘಟನೆಯ ಸದಸ್ಯ ಅಜಿತ್ ಫಡ್ನಿಸ್, ‘ಎರಡು ದಿನಗಳ ಹಿಂದೆ ಕೇವಲ 20 ಸಾವಿರ ಜನ ಈ ಕಮ್ಯುನಿಟಿಯೊಂದಿಗೆ ಗುರುತಿಸಿಕೊಂಡಿದ್ದರು. ಗುರುವಾರ ಈ ಸಂಖ್ಯೆ ಹೆಚ್ಚಿರುವುದು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಜನತೆ ನೀಡಿರುವ ಅಭೂತಪೂರ್ವ ಬೆಂಬಲಕ್ಕೆ ಸಾಕ್ಷಿಯಾಗಿದೆ’ ಎಂದು ತಿಳಿಸಿದ್ದಾರೆ.

‘ಟ್ವಿಟರ್ನಲ್ಲಿ ಅಸಂಖ್ಯಾತ ಜನರು ಬರೆಯುತ್ತಿದ್ದಾರೆ. ಬ್ಲಾಗ್ಗಳ ಮೂಲಕವೂ ಜನ ಭ್ರಷ್ಟಾಚಾರದ ಆಳ ಅಗಲಗಳನ್ನು ಗುರುತಿಸಿದ್ದಾರೆ’ ಎಂದು ಹೇಳಿದ್ದಾರೆ.ಅಲ್ಲದೇ ಕಾಲ್ ಟು ಎಂಪಿ ಎಂಬ ಆಂದೋಲನ ಕೂಡ ಆರಂಭವಾಗಿದೆ. ಸಂಸದರಿಗೆ ದೂರವಾಣಿ ಕರೆ ಮೂಲಕ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸುವುದು ಈ ಆಂದೋಲನದ ಉದ್ದೇಶ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.indiaagainstcorruption.org
www.saaku.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.