ಶುಕ್ರವಾರ, ಜೂನ್ 25, 2021
29 °C

‘ಎಂಎಂಎಸ್‌’ನಲ್ಲಿ ಭಿನ್ನ ಸನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಗಿಣಿ ಎಂಎಂಎಸ್ 2’ ಹಿಂದಿ ಚಿತ್ರದಲ್ಲಿ ಸನ್ನಿ ಲಿಯೋನ್ ಇನ್ನೊಂದು ಮುಖವನ್ನು ಪ್ರೇಕ್ಷಕರು ನೋಡಬಹುದು ಎಂದು ನಿರ್ದೇಶಕ ಭೂಷಣ್‌ ಪಟೇಲ್‌ ಭರವಸೆ ನೀಡಿದ್ದಾರೆ.ಇಂಡೋ–ಕೆನಡಿಯನ್‌ ವಯಸ್ಕರ ಚಿತ್ರಗಳಲ್ಲಿ ಹಾಗೂ ನೀಲಿ ಚಿತ್ರಗಳಲ್ಲಿ ನಟಿಸಿದ್ದ ಸನ್ನಿ ಲಿಯೋನ್‌ ಈಗ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ‘ಸನ್ನಿ ಹೊಸ ಅವತಾರವನ್ನು ಈ ಚಿತ್ರದಲ್ಲಿ ನೀವು ನೊಡುತ್ತೀರಿ. ಸನ್ನಿ ಇದುವರೆಗೆ ನೃತ್ಯ ಮಾಡಿರಲಿಲ್ಲ. ಬೇಬಿಡಾಲ್‌ ಎಂಬ ಹಾಡಿಗಾಗಿ ನಾವು ಅವರಿಂದ ನೃತ್ಯ ಮಾಡಿಸಿದೆವು. ಹತ್ತು ದಿನ ಅದಕ್ಕಾಗಿ ಅವರು ತಾಲೀಮು ನಡೆಸಿದರು. ಚಿತ್ರದಲ್ಲಿ ಅವರು ನಾವು ಅಂದುಕೊಂಡಂತೆಯೇ ಅಭಿನಯಿಸಿದರು. ಸಾಹಸ ದೃಶ್ಯಗಳಲ್ಲೂ ಅವರು ಶ್ರದ್ಧೆಯಿಂದ ತೊಡಗಿಕೊಂಡರು’ ಎಂದು ಭೂಷಣ್ ಹೊಗಳಿದರು.ಹಾರರ್ ಹಾಗೂ ಸೆಕ್ಸ್‌ನ ಮಿಸಳಭಾಜಿ ಪ್ರಕಾರದ ಚಿತ್ರ ‘ರಾಗಿಣಿ ಎಂಎಂಎಸ್‌ 2’. ಈ ಪ್ರಕಾರವನ್ನು ‘ಹಾರೆಕ್ಸ್‌’ ಎಂದು ಬಿ–ಟೌನ್‌ ಬಣ್ಣಿಸುತ್ತಿದೆ. ಸಂಧ್ಯಾ ಮೃದುಲ್‌, ದಿವ್ಯಾ ದತ್ತ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಇದೇ 21ರಂದು ಸಿನಿಮಾ ತೆರೆಕಾಣಲಿದೆ. ಸನ್ನಿ ಹಾಗೂ ಮೃದುಲಾ ಪರಸ್ಪರ ಚುಂಬಿಸಿರುವ ದೃಶ್ಯಗಳು ಚಿತ್ರದಲ್ಲಿವೆ ಎಂಬುದು ಈಗ ದೊಡ್ಡ ಸುದ್ದಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.