ಮುಳಬಾಗಲು: ಮುಂದಿನ ಏಪ್ರಿಲ್ ವೇಳೆಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗೊಳ್ಳಲಿದೆ ಎಂದು ಶಾಸಕ ಜಿ.ಮಂಜುನಾಥ್ ಹೇಳಿದರು.

ಪಟ್ಟಣದ ನೂಗಲಬಂಡೆಯ 12ನೇ ವಾರ್ಡ್ನಲ್ಲಿ ₨ 27 ಕೋಟಿ ವೆಚ್ಚದ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಅಶೋಕ್ಕುಮಾರ್ ಮಾತನಾಡಿ, ಹಲವು ದೂರು, ಜನರ ಬೇಡಿಕೆಗಳ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಕೆಇಬಿ ವೃತ್ತದವರೆಗಿನ ಫುಟ್ಪಾತ್ನಲ್ಲಿ ಪ್ಲೇಟ್ಗಳನ್ನು ಹಾಗೂ ಗ್ರಿಲ್ಸ್ಗಳನ್ನು ಅಳವಡಿಸಲಾಗುವುದು. ಎಂ.ಎನ್.ಹಳ್ಳಿ ಕೆ.ಬಯ್ಯಪಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಶೀಘ್ರದಲ್ಲಿಯೇ ಮುಳಬಾಗಲು ಪುರಸಭೆ ನಗರಸಭೆಯಾಗಿ ಪರಿವರ್ತನೆಯಾಗಲಿದ್ದು, ಹೆಚ್ಚಿನ ಮೂಲಸೌಕರ್ಯಗಳು ಸಿಗಲಿವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಆವಣಿ ಬ್ಲಾಕ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಟೌನ್ ಬ್ಲಾಕ್ ಅಧ್ಯಕ್ಷ ಷಹಬಾಜ್ ಖಾನ್, ಕೇಂದ್ರ ಜವಳಿ ಮಂಡಳಿ ಸದಸ್ಯ ಆರ್.ಎಸ್.ಕೃಷ್ಣಯ್ಯಶೆಟ್ಟಿ, ಪುರಸಭೆ ಸದಸ್ಯರಾದ ಅಯೂಬ್ ಪಾಷಾ, ಗೋಪಿ, ಜಗಮೋಹನ್ ರೆಡ್ಡಿ, ಗಿರಿಜಾ ವಾಸು, ಪುರಸಭೆ ಮಾಜಿ ಅಧ್ಯಕ್ಷ ಯಾಮಣ್ಣ, ಬಷೀರ್ ಅಹಮದ್, ಮಲ್ಲಿಕಾರ್ಜುನರೆಡ್ಡಿ, ಎಂ.ಪಿ.ವಾಜೀದ್, ಕಲೀಲ್, ಮುಷೀರ್ ಪಾಷಾ, ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣ, ರಾಮಾಂಜಿ, ಕಿಶೋರ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.