ವಿಟ್ಲ: ಸ್ವ ಅಧ್ಯಯನ ಮತ್ತು ತಪಸ್ಸಿನಿಂದ ಪಡೆದ ಜ್ಞಾನ ಶಾಶ್ವತ, ಕಠಿಣ ಪರಿಶ್ರಮದಿಂದ ದುಡಿದಾಗ ಸಂಪತ್ತು ತನ್ನಿಂತಾನೇ ತುಂಬಿಕೊಳ್ಳುತ್ತದೆ ಎಂದು ಕಾಸರಗೋಡು ಚೆಂಗಳ ಸರಕಾರಿ ಆಯುರ್ವೇದ ಡಿಸ್ಪೆನ್ಸರಿಯ ವೈದ್ಯೆ ಡಾ ಜಯಶ್ರೀ ನಾಗರಾಜ್ ಹೇಳಿದರು.
ವಿಟ್ಲ ವಿಠಲ ವಿದ್ಯಾಸಂಘದ ವಿಠಲ ಪ್ರೌಢಶಾಲಾ ವಿಭಾಗದ ಗುರುವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯೆಗನುಸಾರವಾದ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಒತ್ತಡ ರಹಿತವಾಗಿ ಜೀವನ ನಡೆಸಿದಾಗ ಸಂತಸ ಪಡೆಯಬಹುದು ಎಂದ ಅವರು ನಾವು ಜೀವನದಲ್ಲಿ ಸಮಾಜಮುಖಿಯಾಗಿ ಬಾಳುವುದು ಅರ್ಥಪೂರ್ಣವೆನಿಸುವುದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮೆಸ್ಕಾಂ ಆಡಳಿತ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ಅಕ್ಷರ ಅರಿವಾಗಬೇಕೇ ಹೊರತು ಅಹಂಕಾರವಾಗಬಾರದು ಎಂದು ಹೇಳಿದರು.

ಸಮಾರಂಭದಲ್ಲಿ ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ವಿಠಲ ಸುಪ್ರಜಿತ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ರಘುರಾಮ ಶಾಸ್ತ್ರಿ, ಶಾಲಾ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ವಾಣಿ ಡಿ.ಆರ್, ಜತೆ ಕಾರ್ಯದರ್ಶಿ ರಾಕೇಶ್ ಉಪಸ್ಥಿತರಿದ್ದರು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ರಾಧಾಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಬ್ರಹ್ಮಾವರ ಶಾಲಾ ವರದಿ ಮಂಡಿಸಿದರು.

ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಳಿಯ ತಿರುಮಲೇಶ್ವರ ಶಾಸ್ತ್ರಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣಾಮ್ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಚೈತ್ರಪಾರ್ವತಿ ಮತ್ತು ಉಷಾ.ಎ ಕಾರ್ಯಕ್ರಮ ನಿರೂಪಿಸಿದರು. ಸಹ ಅಧ್ಯಾಪಕ ಮಹಾಬಲೇಶ್ವರ ರಾವ್, ದೈಹಿಕ ಶಿಕ್ಷಕಿ ಮಲ್ಲಿಕಾ ಹೆಗ್ಡೆ ಸಹಕರಿಸಿದರು. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾ ಪ್ರತಿಭೆಗಳನ್ನು, ರಾಜ್ಯ ಮಟ್ಟದ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.