ಭಾನುವಾರ, ಮೇ 9, 2021
24 °C

‘ಜಯಪ್ರಕಾಶ್‌ ಗೆಲುವು ನಿಶ್ಚಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ:  ಜಯಪ್ರಕಾಶ್ ಅವರ ಗೆಲುವು ನಿಶ್ಚಿತ. ಇವರ ಗೆಲುವನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಮತ ಯಾಚಿಸಿ ಮಾತನಾಡಿದರು.ತರೀಕೆರೆ ಕ್ಷೇತ್ರ ಮತ್ತೊಮ್ಮೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಹೆಚ್ಚಿನ ಮತವನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರದಲ್ಲಿ ಸಂಸದರ ನಿಧಿ ಮತ್ತು ಅನುದಾನ ದಿಂದ ಹಾಗೂ ತಮ್ಮ ಅಧಿಕಾರಾವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಹೆಗ್ಡೆ ಗೆಲವಿಗೆ ಪೂರಕವಾಗಲಿದೆ ಎಂದರು.ಬಿಜೆಪಿ ಅಭ್ಯರ್ಥಿಯನ್ನು ಮತ ದಾರ ಹೊರಗಿನ ಅಭ್ಯರ್ಥಿ ಎಂದು ತಿರಸ್ಕರಿಸ­ಲಿದ್ದಾನೆ. ಜನರು ಸದಾ ತಮ್ಮೊಂದಿ­ಗಿರುವ, ಬೆರಯುವ ಅಭ್ಯರ್ಥಿ­ಗಳನ್ನು ಇಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಜಯಪ್ರಕಾಶ್ ಹೆಗ್ಡೆ ಸತತ ಐದಾರು ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿದ್ದು ಜನರೊಂದಿಗೆ  ಇರುವುದು ಅವರಿಗೆ ಶ್ರೀರಕ್ಷೆ ಆಗಲಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ  ಅಧ್ಯಕ್ಷ  ಸುನಿಲ್ ದತ್ತ, ಸದಸ್ಯರಾದ ಈರಣ್ಣ, ಅಶೋಕ್, ಧರ್ಮರಾಜ್, ಅಣ್ಣಪ್ಪ, ವರ್ಮ ಪ್ರಕಾಶ್, ಮುಖಂಡರಾದ ಮಂಜುನಾಥ ಇನ್ನಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.